ಉದಯವಾಹಿನಿ, ನವದೆಹಲಿ: ನಟ, ಬಾಲಿವುಡ್ ಕಲಾವಿದ ಅಮಿತಾಭ್ ಬಚ್ಚನ್ ಚಿತ್ರರಂಗ ಮಾತ್ರವಲ್ಲ ಕಿರುತೆರೆಯಲ್ಲಿಯೂ ಜನಪ್ರಿಯ ಮುಖ. ʼಕೌನ್ ಬನೇಗಾ ಕರೋಡ್‌ಪತಿʼ ರಿಯಾಲಿಟಿ ಶೋ ಮೂಲಕ ಮನೆ ಮನವನ್ನು ತಲುಪುತ್ತಿದ್ದಾರೆ. ಸಾಮಾನ್ಯ ವ್ಯಕ್ತಿಯಿಂದ ಹಿಡಿದು ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಈ ಕ್ವಿಝ್ ಕಾರ್ಯಕ್ರಮದಲ್ಲಿ ಭಾಗಿಸುವುದು ವಿಶೇಷ. ಇದೇ ಕಾರ್ಯಕ್ರಮದ ಜೂನಿಯರ್ ಶೋದಲ್ಲಿ ಬಾಲಕನೋರ್ವ ನಟ ಅಮಿತಾಭ್ ಬಚ್ಚನ್ ಅವರೊಂದಿಗೆ ಅಗೌರವಯುತವಾಗಿ ವರ್ತಿಸಿದದಾನೆ. ಸದ್ಯ ಈ ಸುದ್ದಿ ಸೋಶಿಯಲ್ ಮಿಡಿಯಾದಲ್ಲಿ ಸಂಚಲನ ಉಂಟು ಮಾಡಿದೆ. ಸದ್ಯ ಆ ಬಾಲಕನ ವಿಡಿಯೊ ವೈರಲ್ ಆಗಿದ್ದು, ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ʼಕೌನ್ ಬನೇಗಾ ಕರೋಡ್‌ಪತಿʼಯ ಪ್ರತಿ ಸೀಸನ್ ಕೂಡ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದು, ಇದಕ್ಕೆ ತನ್ನದೇ ಆದ ಅಭಿಮಾನಿ ಬಳಗ ಕೂಡ ಇದೆ. ತಮ್ಮ ವಿಭಿನ್ನ ಸ್ಟೈಲ್ ಹಾಗೂ ಆಕರ್ಷಕ ನಿರೂಪಣಾ ಶೈಲಿಯಿಂದ ಬಿಗ್ ಬಿ ಶೋವನ್ನು ಉನ್ನತ ಸ್ಥಾನಕ್ಕೆ ಕೊಂಡಿಯ್ದಿದ್ದಾರೆ. ಈ ಬಾರಿ ಕೆಬಿಸಿ (KBC)ಯ ಜೂನಿಯರ್ ಸಂಚಿಕೆ ಕೂಡ ಚೆನ್ನಾಗಿ ಮೂಡಿ ಬಂದಿದೆ. ಸದ್ಯ 5ನೇ ತರಗತಿ ವಿದ್ಯಾರ್ಥಿಯೊಬ್ಬನು ನಟ ಅಮಿತಾಭ್ ಬಚ್ಚನ್ ಜತೆಗೆ ಅಗೌರವಯುತವಾಗಿ ವರ್ತಿಸಿರುವುದಕ್ಕೆ ಹಲವರು ಕಂಡಾಮಂಡಲರಾಗಿದ್ದಾರೆ.
