ಉದಯವಾಹಿನಿ, ಬಾಲಿವುಡ್ ಫೇಮಸ್ ಸೆಲೆಬ್ರಿಟಿ ಕಪಲ್ ನಲ್ಲಿ ನಟಿ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಪೇರ್ ಯಾವಾಗಲೂ ಮುಂಚುಣಿಯಲ್ಲಿ ರುತ್ತದೆ. ಪ್ರೀತಿಸಿ ಮದುವೆಯಾದ ಈ ಕಪಲ್ ಬಗ್ಗೆ ಇತ್ತೀಚಿನ ಕೆಲ ವರ್ಷದಲ್ಲಿ ಅನೇಕ ವದಂತಿಗಳು ಕೇಳಿ ಬರುತ್ತಲೇ ಇದೆ. ನಟ ಅಭಿಷೇಕ್ ಬಚ್ಚನ್ ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದರೆ ಅವರ ಪತ್ನಿ ಐಶ್ವರ್ಯ ರೈ ತಮ್ಮ ತವರು ಮನೆಯಲ್ಲಿ ಪ್ರತ್ಯೇಕ ವಾಸಿಸುತ್ತಿದ್ದಾರೆ. ಅವರಿಬ್ಬರ ನಡುವೆ ವೈಮನಸ್ಸು ಬಂದಿದ್ದು ಇಬ್ಬರು ಶೀಘ್ರವೇ ಡಿವೋರ್ಸ್ ಪಡೆಯುತ್ತಾರೆ ಎಂಬ ವದಂತಿ ಕಳೆದ ಅನೇಕ ವರ್ಷದಿಂದ ಕೇಳಿ ಬರುತ್ತಿದೆ. ಈ ಬಗ್ಗೆ ಇವರಿಬ್ಬರು ಈ ಹಿಂದಿನಿಂದಲೂ ಅನೇಕ ಸಲ ಸ್ಪಷ್ಟನೆ ನೀಡಿದ್ದರು. ಇತ್ತೀಚೆಗಷ್ಟೇ ನಟ ಅಭಿಷೇಕ್ ಬಚ್ಚನ್ ಅವರು ಕೂಡ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದು ತಮ್ಮ ಪತ್ನಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದರು. ಇದೀಗ ಅವರ ಪತ್ನಿ ಐಶ್ವರ್ಯ ಕೂಡ ತಮ್ಮ ಇನ್ ಸ್ಟಾ ಗ್ರಾಮ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.2024ರಲ್ಲಿ ತೆರೆಕಂಡ ಐ ವಾಂಟ್ ಟು ಟಾಕ್ ಸಿನಿಮಾದಲ್ಲಿ ಅಭಿಷೇಕ್ ಬಚ್ಚನ್ ಅವರು ಅತ್ಯದ್ಭುತವಾಗಿ ನಟಿಸಿದ್ದು ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದಿದ್ದಾರೆ. 70 ನೇ ಫಿಲ್ಮ್ ಫೇರ್ ನಲ್ಲಿ ಈ ಪ್ರಶಸ್ತಿ ಸ್ವೀಕರಿಸಿದ ಬೆನ್ನಲ್ಲೇ ತಮ್ಮ ಪತ್ನಿ ಐಶ್ವರ್ಯ ಹಾಗೂ ಮಗಳನ್ನು ನೆನೆದು ಅಭಿಷೇಕ್ ಭಾವನಾತ್ಮಕವಾಗಿ ಮಾತನಾಡಿದ್ದು ಇತ್ತೀಚೆಗಷ್ಟೇ ವೈರಲ್ ಆಗಿತ್ತು. ಅದರ ಬೆನ್ನಲ್ಲೆ ನಟಿ ಐಶ್ವರ್ಯ ರೈ ಅವರು ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
