ಉದಯವಾಹಿನಿ, ನವದೆಹಲಿ: ಗಾಜಾ, ಪ್ಯಾಲೆಸ್ತೀನ್‌ನಲ್ಲಿ ಶಾಂತಿ ಸ್ಥಾಪನೆ ಮಾಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪಣ ತೊಟ್ಟಿರುವ ಬೆನ್ನಲ್ಲೇ ಹಾಮಾ ಉಗ್ರರು ನಡುರಸ್ತೆಯಲ್ಲಿ ಬರೋಬ್ಬರಿ ಎಂಟು ಜನ ಒತ್ತೆಯಾಳುಗಳಿಗೆ ಮರಣದಂಡನೆಗೆ ಗುರಿಪಡಿಸಿದೆ. ಅಮೆರಿಕ ಮಧ್ಯಸ್ಥಿಕೆಯಲ್ಲಿ ಇಸ್ರೇಲ್ ಜೊತೆಗಿನ ಕದನ ವಿರಾಮದ ಘೋಷಣೆ ಬೆನ್ನಲ್ಲೇ ಗಾಜಾ ಪಟ್ಟಿಯ ನಿಯಂತ್ರಣವನ್ನು ಉಳಿಸಿಕೊಳ್ಳಲು ಹಮಾಸ್ ಉಗ್ರರ ಗುಂಪು ಪ್ಯಾಲೆಸ್ತೀನ್‌ನಲ್ಲಿರುವ ವಿರೋಧಿ ಬಣದ ಜೊತೆಗೆ ಸಂಘರ್ಷಕ್ಕಿಳಿದಿದೆ. ಇದರ ಪರಿಣಾಮವಾಗಿ ಅನಾಗರಿಕರ ಮೇಲೆ ಉಗ್ರರ ಅಟ್ಟಹಾಸ ಮುಂದುವರಿದಿದ್ದು, ಇದರ ಭಯಾನಕ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.

ಸೋಮವಾರ ಸಂಜೆ ಹಮಾಸ್‌ ಉಗ್ರರು ಬರೋಬ್ಬರಿ ಎಂಟು ಜನರನ್ನು ಸಾರ್ವಜನಿಕವಾಗಿ ಗುಂಡು ಹಾರಿಸಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ವೈರಲಾಗುತ್ತಿರುವ ವಿಡಿಯೊದಲ್ಲಿ, ಹಮಾಸ್‌ಗೆ ಸಂಬಂಧಿಸಿದ ಹಸಿರು ಹೆಡ್‌ಬ್ಯಾಂಡ್ ಧರಿಸಿದ ಬಂದೂಕುಧಾರಿಗಳು ಕಣ್ಣಿಗೆ ಬಟ್ಟೆ ಕಟ್ಟಿ ರಸ್ತೆಯಲ್ಲಿ ಕೂರಿಸಿರುವ ಎಂಟು ಜನರನ್ನು ಮೊದಲಿಗೆ ಬರ್ಬರವಾಗಿ ಥಳಿಸುತ್ತಾರೆ. ನಂತರ ಗುಂಡು ಹಾರಿಸಿ ಹತ್ಯೆ ಮಾಡುವುದನ್ನು ಕಾಣಬಹುದಾಗಿದೆ. ಶವಗಳ ಸುತ್ತ ಉಗ್ರರು ‘ಅಲ್ಲಾಹು ಅಕ್ಬರ್’ (ಅರೇಬಿಕ್‌ನಲ್ಲಿ ದೇವರು ಶ್ರೇಷ್ಠ) ಎಂದು ಜೋರಾಗಿ ಕಿರುಚಾಡಿದ್ದಾರೆ. ಘೋಷಣೆಗಳು ಕೇಳಿಬರುತ್ತಿವೆ.ಕೆಲವು ಹೋರಾಟಗಾರರು ಕೆಲವು ಕೈದಿಗಳನ್ನು ಗಲ್ಲಿಗೇರಿಸಲು ಸಾಲಾಗಿ ನಿಲ್ಲಿಸಿದಾಗ ಅವರನ್ನು ಹೊಡೆಯುತ್ತಿರುವುದು ಕಂಡುಬರುತ್ತದೆ.

Leave a Reply

Your email address will not be published. Required fields are marked *

error: Content is protected !!