ಉದಯವಾಹಿನಿ, ಬೀದಿ ಬದಿಯ ತಿನಿಸುಗಳು ಸಾಮಾನ್ಯವಾಗಿ ಎಲ್ಲರನ್ನೂ ಆಕರ್ಷಿಸುತ್ತವೆ. ಆದರೆ ಇದರಿಂದ ಆರೋಗ್ಯ ಕೆಡುವ ಸಾಧ್ಯತೆಗಳಿವೆ. ಹೀಗಾಗಿ ಅದನ್ನು ಮನೆಯಲ್ಲಿಯೇ ಮಾಡಿ ಎಲ್ಲರೊಂದಿಗೆ ಕೂತು ತಿನ್ನುವ ಮಜವೇ ಬೇರೆ. ಇವತ್ತು ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುವಂತಹ ಮುಂಬೈ ಸ್ಪೆಷಲ್‌ ಮಸಾಲ ಸ್ಯಾಂಡ್‌ವಿಚ್ ಮಾಡುವುದು ಹೇಗೆ ಎಂದು ತಿಳಿಸಿಕೊಡುತ್ತಿದ್ದೇವೆ. ನಿಮ್ಮ ಮನೆಯಲ್ಲೂ ಈ ರೆಸಿಪಿ ಟ್ರೈ ಮಾಡಿ ಆನಂದಿಸಿ.

ಬೇಕಾಗುವ ಸಾಮಗ್ರಿಗಳು:
ಕೊತ್ತಂಬರಿ ಸೊಪ್ಪು – 1 ಕಪ್
ಚಾಟ್ ಮಸಾಲ – ಅರ್ಧ ಚಮಚ
ಹಸಿ ಮೆಣಸಿನಕಾಯಿ – 4
ಆಲೂಗಡ್ಡೆ- 4
ಎಣ್ಣೆ – ಸ್ವಲ್ಪ
ಸಾಸಿವೆ – ಅರ್ಧ ಚಮಚ
ಜೀರಿಗೆ – ಅರ್ಧ ಚಮಚ
ಇಂಗು – ಒಂದು ಚಿಟಿಕೆ
ಅರಶಿಣ – ಕಾಲು ಚಮಚ
ಕರಿಬೇವಿನ ಎಲೆ – 8ರಿಂದ 10
ಈರುಳ್ಳಿ- 1
ಟೊಮೆಟೊ – 1
ಬ್ರೆಡ್ – ಅಗತ್ಯಕ್ಕೆ ಬೇಕಾದಷ್ಟು
ಬೆಣ್ಣೆ- ಸ್ವಲ್ಪ

ಮಾಡುವ ವಿಧಾನ:
ಮೊದಲಿಗೆ ಒಂದು ಮಿಕ್ಸಿ ಜಾರಿಗೆ 1 ಕಪ್ ಕೊತ್ತಂಬರಿ ಸೊಪ್ಪು, ಅರ್ಧ ಚಮಚ ಚಾಟ್ ಮಸಾಲ ಹಾಗೂ 2 ಹಸಿ ಮೆಣಸಿನಕಾಯಿ ಹಾಕಿಕೊಂಡು ಚೆನ್ನಾಗಿ ರುಬ್ಬಿಕೊಳ್ಳಿ. ರುಬ್ಬಿಕೊಳ್ಳಲು ಕಷ್ಟವಾದರೆ 2 ಚಮಚ ನೀರನ್ನು ಸೇರಿಸಿಕೊಳ್ಳಿ. ನಂತರ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿಕೊಳ್ಳಿ. ಬಳಿಕ ರುಬ್ಬಿದ ಮಿಶ್ರಣವನ್ನು ಒಂದು ಬೌಲ್‌ಗೆ ಹಾಕಿ ಪಕ್ಕಕ್ಕಿಡಿ.
ನಂತರ 3ರಿಂದ 4 ಆಲೂಗಡ್ಡೆಯನ್ನು ಚೆನ್ನಾಗಿ ತೊಳೆದು ಕುಕ್ಕರ್ ಅಥವಾ ಸ್ಟೀಮರ್‌ನಲ್ಲಿ ಚೆನ್ನಾಗಿ ಬೇಯಿಸಿಕೊಳ್ಳಿ. ಆಲೂಗಡ್ಡೆ ಬಿಸಿ ಇರುವಾಗಲೇ ಅದರ ಸಿಪ್ಪೆಯನ್ನು ತೆಗೆದು ಗಂಟಿರದಂತೆ ಚೆನ್ನಾಗಿ ಕಲಸಿ ಒಂದು ಬೌಲ್‌ನಲ್ಲಿ ಇಟ್ಟುಕೊಳ್ಳಿ.
ಒಂದು ಪ್ಯಾನ್ ಬಿಸಿಗಿಟ್ಟು ಅದಕ್ಕೆ ಅರ್ಧ ಚಮಚ ಎಣ್ಣೆ ಹಾಕಿ. ಎಣ್ಣೆ ಕಾದ ನಂತರ ಅದಕ್ಕೆ ಅರ್ಧ ಚಮಚ ಸಾಸಿವೆ ಹಾಕಿಕೊಳ್ಳಿ. ಸಾಸಿವೆ ಸಿಡಿಯಲು ಪ್ರಾರಂಭವಾದ ಮೇಲೆ ಅದಕ್ಕೆ ಅರ್ಧ ಚಮಚ ಜೀರಿಗೆ ಮತ್ತು ಒಂದು ಚಿಟಿಕೆ ಇಂಗು ಹಾಕಿಕೊಳ್ಳಿ. ಜೀರಿಗೆ ಬಣ್ಣ ಸ್ವಲ್ಪ ಬದಲಾದ ಬಳಿಕ ಅದಕ್ಕೆ ಸಣ್ಣಗೆ ಹೆಚ್ಚಿದ 2 ಹಸಿ ಮೆಣಸಿನಕಾಯಿಯನ್ನು ಸೇರಿಸಿಕೊಳ್ಳಿ.
ಬಳಿಕ ಇದಕ್ಕೆ ಕಾಲು ಚಮಚ ಅರಶಿಣ ಹಾಗೂ 8ರಿಂದ 10 ಕರಿಬೇವಿನ ಎಲೆ ಹಾಕಿಕೊಂಡು ಚೆನ್ನಾಗಿ ತಿರುವಿ. ನಂತರ ಇದಕ್ಕೆ ಕಲಸಿದ ಆಲೂಗಡ್ಡೆಯನ್ನು ಸೇರಿಸಿಕೊಳ್ಳಿ. ಈ ಮಿಶ್ರಣಕ್ಕೆ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿಕೊಳ್ಳಬೇಕು. ನಂತರ ಇದನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಬಳಿಕ 2 ನಿಮಿಷಗಳವರೆಗೆ ಕಡಿಮೆ ಉರಿಯಲ್ಲಿ ಇಟ್ಟುಕೊಂಡು ಮಿಕ್ಸ್ ಮಾಡಿಕೊಳ್ಳಿ.

Leave a Reply

Your email address will not be published. Required fields are marked *

error: Content is protected !!