ಉದಯವಾಹಿನಿ, ಕಾಬೂಲ್/ಇಸ್ಲಾಮಾಬಾದ್: ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವೆ ನಡೆದ ಹಿಂಸಾಚಾರದಲ್ಲಿ ಡಜನ್‌ಗಟ್ಟಲೇ ಜನ ಸಾವನ್ನಪ್ಪಿ ಮತ್ತು ಅನೇಕರು ಗಾಯಗೊಂಡ ನಂತರ ಎರಡು ದೇಶಗಳು 48 ಗಂಟೆಗಳ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ.
ಭಾರತೀಯ ಕಾಲಮಾನ ಬುಧವಾರ ಸಂಜೆ 6 ಗಂಟೆಗೆ ಕದನ ವಿರಾಮ ಜಾರಿಯಾಗಿದೆ. ಅಫ್ಘಾನಿಸ್ತಾನ ಕದನ ವಿರಾಮವನ್ನು ಕೇಳಿದೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ. ಕದನ ವಿರಾಮದ ಬಗ್ಗೆಯಾಗಲಿ ಅಥವಾ ಹೋರಾಟವನ್ನು ತಾತ್ಕಾಲಿಕವಾಗಿ ನಿಲ್ಲಿಸುವಂತೆ ಮೊದಲು ಕೇಳಿದ್ದು ಯಾರು ಮತ್ತು ಪಾಕ್ ಹೇಳಿಕೆಯ ಬಗ್ಗೆಯಾಗಲಿ ಅಫ್ಘಾನಿಸ್ತಾನ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ನಮ್ಮ ನಡುವೆ ಸಂಕೀರ್ಣವಾಗಿರುವ ಸಮಸ್ಯೆಯಿದೆ. ಆದರೆ ಈ ಸಮಸ್ಯೆಗೆ ಮಾತುಕತೆಯ ಮೂಲಕ ಪರಿಹಾರವನ್ನು ಕಂಡುಹಿಡಿಯಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇವೆ ಪಾಕಿಸ್ತಾನ ಹೇಳಿದೆ. ಮಿಲಿಟರಿ ಕಾರ್ಯಾಚರಣೆಗಳಲ್ಲಿ ಡಜನ್‌ಗಟ್ಟಲೆ ಅಫ್ಘಾನ್ ಸೈನಿಕರನ್ನು ಉಗ್ರಗಾಮಿಗಳನ್ನು ಹತ್ಯೆ ಮಾಡಲಾಗಿದೆ ಎಂದು ಪಾಕಿಸ್ತಾನ ಹೇಳಿದೆ.
