ಉದಯವಾಹಿನಿ, ದೇರ್ ಅಲ್-ಬಲಾಹ್: ಕದನ ವಿರಾಮ ಇದ್ದರೂ, ಇಸ್ರೇಲ್ ಶನಿವಾರ ನಡೆಸಿದ ದಾಳಿಯಲ್ಲಿ 12 ಮಂದಿ ಪ್ಯಾಲೆಸ್ಟೀನಿಯನ್ನರು ಸಾವಿಗೀಡಾಗಿದ್ದಾರೆ ಎಂದು ಗಾಜಾದ ಅಧಿಕಾರಿಗಳು ತಿಳಿಸಿದ್ದಾರೆ. ಇದು ಕಳೆದ ವರ್ಷ ಘೋಷಿಸಿದ ಕದನ ತಡೆ ಬಳಿಕದ ಅತಿ ಹೆಚ್ಚಿನ ಸಾವು ಎಂದು ಹೇಳಿದ್ದಾರೆ.ಉತ್ತರ ಮತ್ತು ದಕ್ಷಿಣ ಗಾಜಾದ ಸ್ಥಳಗಳ ಮೇಲೆ ದಾಳಿ ನಡೆದಿವೆ. ಇದರಲ್ಲಿ ಗಾಜಾ ನಗರದ ಅಪಾರ್ಟ್ಮೆಂಟ್ ಕಟ್ಟಡ ಮತ್ತು ಖಾನ್ ಯೂನಿಸ್‌ನಲ್ಲಿರುವ ಟೆಂಟ್ ನಾಶವಾಗಿವೆ. ಈ ಸ್ಥಳಗಳಿಂದ ಎರಡು ಕುಟುಂಬಗಳ ಇಬ್ಬರು ಮಹಿಳೆಯರು ಮತ್ತು ಆರು ಮಕ್ಕಳ ಶವವನ್ನು ಹೊರತೆಗೆಯಲಾಗಿದೆ ಎಂದು ಗಾಜಾ ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.ಗಾಜಾದ ದಕ್ಷಿಣ ನಗರವಾದ ರಾಫಾದ ಗಡಿ ತೆರೆಯಲು ಇಸ್ರೇಲ್ ಒಪ್ಪಿಕೊಂಡ ಮರು ದಿನವೇ ಈ ದಾಳಿಗಳನ್ನು ನಡೆಸಿದೆ. ಇದು ಕದನ ವಿರಾಮ ಉಲ್ಲಂಘನೆಯಾಗಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆ ಇದೆ ಎಂದಿದ್ದಾರೆ.
ಹಮಾಸ್ ಮತ್ತು ಇಸ್ರೇಲ್ ಪಡೆಗಳ ನಡುವೆ ಯುದ್ಧ ಪ್ರಾರಂಭವಾದಾಗಿನಿಂದ ಗಾಜಾಗೆ ಸಂಪರ್ಕಿಸುವ ಎಲ್ಲ ಗಡಿಗಳನ್ನು ಮುಚ್ಚಲಾಗಿತ್ತು. ಗಾಯಾಳು ಪ್ಯಾಲೆಸ್ಟೀನಿಯನ್ನರು ರಾಫಾ ಗಡಿ ದಾಟಿ ಈಜಿಪ್ಟ್‌ನಲ್ಲಿ ಚಿಕಿತ್ಸೆ ಪಡೆಯಲು ತೆರಳುತ್ತಿದ್ದರು. ಇದು ಜನರ ಕೊನೆಯ ಆಯ್ಕೆಯಾಗಿತ್ತು. ಇದೀಗ, ಅಲ್ಲಿಯೇ ದಾಳಿ ನಡೆಸುವ ವೈದ್ಯಕೀಯ ಮೂಲಸೌಕರ್ಯಗಳನ್ನು ನಾಶ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಆಸ್ಪತ್ರೆಗಳು ನೀಡಿದ ಮಾಹಿತಿ: ಶನಿವಾರ ಬೆಳಗ್ಗೆ ಗಾಜಾ ನಗರದ ಮೇಲೆ ನಡೆದ ದಾಳಿಯಲ್ಲಿ ಒಬ್ಬ ತಾಯಿ, ಮೂವರು ಮಕ್ಕಳು ಮತ್ತು ಅವರ ಸಂಬಂಧಿಕರೊಬ್ಬರು ಸಾವನ್ನಪ್ಪಿದ್ದಾರೆ ಎಂದು ಶಿಫಾ ಆಸ್ಪತ್ರೆ ತಿಳಿಸಿದೆ. ನಿರಾಶ್ರಿತರ ಶಿಬಿರದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅದರಲ್ಲಿ, ಓರ್ವ ವ್ಯಕ್ತಿ, ಅವರ ಮೂವರು ಮಕ್ಕಳು ಮತ್ತು ಮೂವರು ಮೊಮ್ಮಕ್ಕಳು ಸೇರಿದಂತೆ ಏಳು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ನಾಸರ್ ಆಸ್ಪತ್ರೆ ತಿಳಿಸಿದೆ. ಅಕ್ಟೋಬರ್ 10 ರಂದು ಕದನ ವಿರಾಮ ಚಾಲ್ತಿಗೆ ಬಂದ ನಂತರ ಇಸ್ರೇಲ್ ದಾಳಿಗೆ 500ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರು ಸಾವನ್ನಪ್ಪಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ಹೇಳಿದೆ. ಹಮಾಸ್ ನೇತೃತ್ವದ ಸರ್ಕಾರದ ಭಾಗವಾಗಿರುವ ಸಚಿವಾಲಯವು, ವಿಶ್ವಸಂಸ್ಥೆಯ ಸಂಸ್ಥೆಗಳು ಮತ್ತು ಸ್ವತಂತ್ರ ತಜ್ಞರಿಂದ ಒಳಗೊಂಡಿದ್ದರು, ಸಾಮಾನ್ಯವಾಗಿ ಸಾವು – ನೋವಿನ ಬಗ್ಗೆ ವಿಶ್ವಾಸಾರ್ಹ ಮಾಹಿತಿ ನೀಡುತ್ತದೆ ಎಂದು ನಂಬಲಾಗಿದೆ.
