ಉದಯವಾಹಿನಿ, ಗ್ವಾಲಿಯರ್ : 19 ಜನರಿಂದ ದಿನಕ್ಕೆ 20 ರೂಪಾಯಿ ದೇಣಿಗೆ. ಹೀಗೆ, ಕೂಡಿಟ್ಟ ಹಣದಲ್ಲಿ ವರ್ಷಕ್ಕೆ ಇಬ್ಬರು ಬಡ ಹೆಣ್ಣುಮಕ್ಕಳ ಮದುವೆ. ಕಳೆದ 18 ವರ್ಷಗಳಲ್ಲಿ 30 ಜೋಡಿಗೆ ಕಂಕಣಭಾಗ್ಯ..! ಇದು, ಇಲ್ಲಿನ ದಾನಿಗಳು ನಡೆಸುತ್ತಿರುವ ಮಹತ್ಕಾರ್ಯವಾಗಿದೆ. ಪ್ರತಿ ವರ್ಷ ಇಬ್ಬರು ಬಡ ಹೆಣ್ಣು ಮಕ್ಕಳಿಗೆ ತಾವೇ ಖುದ್ದಾಗಿ ಮುಂದೆ ನಿಂತು ಮದುವೆ ಮಾಡಿಸಿಕೊಡುತ್ತಿದ್ದಾರೆ. ಈ ಮೂಲಕ ಸಾಮಾಜಿಕ ಬದ್ಧತೆಯನ್ನು ಮೆರೆಯುತ್ತಿದ್ದಾರೆ. ಇಂದು ಮದುವೆಗಳು ಅತಿ ದುಬಾರಿಯಾಗಿವೆ. ಸಾಮಾಜಿಕ ಬದಲಾವಣೆಗಾಗಿ ದಾನಿಗಳು ರಚಿಸಿಕೊಂಡ ‘ಆದರ್ಶ ವಿಕಾಸ ಸಮಿತಿ’ಯು ಅದ್ಯಾವುದರ ಗೊಡವೆಗೆ ಹೋಗದೆ, ಇಬ್ಬರು ಬಡಹೆಣ್ಣುಮಕ್ಕಳ ಘನತೆ ಮತ್ತು ಸಂಭ್ರಮಕ್ಕೆ ಕಾರಣೀಭೂತವಾಗಿದೆ.
ಈ ಸಮಿತಿಯಲ್ಲಿ 19 ಸದಸ್ಯರಿದ್ದು, ಅದರಲ್ಲಿ ವೈದ್ಯರು, ಅಂಗಡಿ ಮಾಲೀಕರು, ಉದ್ಯಮಿಗಳು ಮತ್ತು ಶಿಕ್ಷಕರು ಇದ್ದಾರೆ. ಇದು ಇತರ ಟ್ರಸ್ಟ್‌ಗಳು ಅಥವಾ ಸಂಸ್ಥೆಗಳಿಗಿಂತ ಭಿನ್ನವಾಗಿದೆ. ಸಮಿತಿಗೆ ಅಧ್ಯಕ್ಷರು, ಖಜಾಂಚಿ, ಕಾರ್ಯದರ್ಶಿ ಎಂಬ ಹುದ್ದೆಗಳಿಲ್ಲ. ಎಲ್ಲಾ ಸದಸ್ಯರು ಸಮಾನ ಜವಾಬ್ದಾರಿ ಹೊಂದಿದ್ದಾರೆ. ಹಂಚಿಕೆಯ ಸಂಕಲ್ಪಕ್ಕೆ ಬದ್ಧರಾಗಿದ್ದಾರೆ.
ಇಂದು ಮದುವೆಗಳು ಅತಿ ದುಬಾರಿಯಾಗಿವೆ. ಸಾಮಾಜಿಕ ಬದಲಾವಣೆಗಾಗಿ ದಾನಿಗಳು ರಚಿಸಿಕೊಂಡ ‘ಆದರ್ಶ ವಿಕಾಸ ಸಮಿತಿ’ಯು ಅದ್ಯಾವುದರ ಗೊಡವೆಗೆ ಹೋಗದೆ, ಇಬ್ಬರು ಬಡಹೆಣ್ಣುಮಕ್ಕಳ ಘನತೆ ಮತ್ತು ಸಂಭ್ರಮಕ್ಕೆ ಕಾರಣೀಭೂತವಾಗಿದೆ. ಈ ಸಮಿತಿಯಲ್ಲಿ 19 ಸದಸ್ಯರಿದ್ದು, ಅದರಲ್ಲಿ ವೈದ್ಯರು, ಅಂಗಡಿ ಮಾಲೀಕರು, ಉದ್ಯಮಿಗಳು ಮತ್ತು ಶಿಕ್ಷಕರು ಇದ್ದಾರೆ. ಇದು ಇತರ ಟ್ರಸ್ಟ್‌ಗಳು ಅಥವಾ ಸಂಸ್ಥೆಗಳಿಗಿಂತ ಭಿನ್ನವಾಗಿದೆ. ಸಮಿತಿಗೆ ಅಧ್ಯಕ್ಷರು, ಖಜಾಂಚಿ, ಕಾರ್ಯದರ್ಶಿ ಎಂಬ ಹುದ್ದೆಗಳಿಲ್ಲ. ಎಲ್ಲಾ ಸದಸ್ಯರು ಸಮಾನ ಜವಾಬ್ದಾರಿ ಹೊಂದಿದ್ದಾರೆ. ಹಂಚಿಕೆಯ ಸಂಕಲ್ಪಕ್ಕೆ ಬದ್ಧರಾಗಿದ್ದಾರೆ.
