ಉದಯವಾಹಿನಿ, ನವದೆಹಲಿ: ಅಂತಾರಾಷ್ಟ್ರೀಯ ಮಾನ್ಯತೆಯ ಜೌಗು ಪ್ರದೇಶ  ತಾಣಗಳ ಪಟ್ಟಿಗೆ ಉತ್ತರ ಪ್ರದೇಶದ ಪಾಟ್ನಾ ಪಕ್ಷಿಧಾಮ ಮತ್ತು ಗುಜರಾತ್​ನ ಛರಿ-ಧಂಡ್ ಸೇರ್ಪಡೆಯಾಗಿವೆ. ಈ ಮೂಲಕ ಭಾರತದ ಒಟ್ಟು ರಾಮ್ಸರ್ ತಾಣಗಳ ಸಂಖ್ಯೆ 98ಕ್ಕೆ ಏರಿದೆ. ಪ್ರಧಾನಿ ಮೋದಿ ಶನಿವಾರ ಈ ಸೇರ್ಪಡೆಯನ್ನು ಶ್ಲಾಘಿಸಿದರು. ಈ ಕ್ರಮವನ್ನು ದೇಶದ ಜೀವವೈವಿಧ್ಯ ಸಂರಕ್ಷಣೆ ಮತ್ತು ಪ್ರಮುಖ ಪರಿಸರ ವ್ಯವಸ್ಥೆಗಳ ರಕ್ಷಣೆಯನ್ನು ದೃಢಪಡಿಸುತ್ತದೆ ಎಂದರು.ಈ ಮನ್ನಣೆಗಳು ಜೀವವೈವಿಧ್ಯತೆಯನ್ನು ಸಂರಕ್ಷಿಸುವ ಮತ್ತು ಪ್ರಮುಖ ಪರಿಸರ ವ್ಯವಸ್ಥೆಗಳನ್ನು ರಕ್ಷಿಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತವೆ. ಈ ಜೌಗು ಪ್ರದೇಶಗಳು ಲೆಕ್ಕವಿಲ್ಲದಷ್ಟು ವಲಸೆ ಮತ್ತು ಸ್ಥಳೀಯ ಪ್ರಭೇದಗಳಿಗೆ ಸುರಕ್ಷಿತ ಆವಾಸ ಸ್ಥಾನಗಳಾಗಿ ಅಭಿವೃದ್ಧಿ ಹೊಂದುತ್ತಲೇ ಇರಲಿ ಎಂದು ಪ್ರಧಾನಿ ಮೋದಿ ಹೇಳಿದರು.

ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದ್ರ ಯಾದವ್ ಎಕ್ಸ್​ ಪೋಸ್ಟ್‌ ಮಾಡಿ, ಈ ಜೌಗು ಪ್ರದೇಶಗಳು ಹಲವಾರು ವಲಸೆ ಮತ್ತು ಸ್ಥಳೀಯ ಪ್ರಭೇದಗಳಿಗೆ ಸುರಕ್ಷಿತ ಆವಾಸಸ್ಥಾನಗಳಾಗಿ ಅಭಿವೃದ್ಧಿ ಹೊಂದುತ್ತವೆ ಎಂದು ಆಶಿಸಿದರು. ಉತ್ತರ ಪ್ರದೇಶದ ಇಟಾ ನಗರದಲ್ಲಿರುವ ಪಾಟ್ನಾ ಪಕ್ಷಿಧಾಮ ಮತ್ತು ಗುಜರಾತ್​ನ ಕಚ್​​ನಲ್ಲಿರುವ ಛರಿ-ಧಂಡ್ ರಾಮ್ಸರ್ ತಾಣಗಳ ಪಟ್ಟಿಗೆ ಸೇರಿರುವ ವಿಷಯ ತಿಳಿದು ಸಂತೋಷವಾಯಿತು. ಅಲ್ಲಿನ ಸ್ಥಳೀಯ ಜನಸಂಖ್ಯೆಗೆ ಹಾಗೂ ತೇವಭೂಮಿ ಸಂರಕ್ಷಣೆಯ ಬಗ್ಗೆ ಆಸಕ್ತಿ ಹೊಂದಿರುವ ಎಲ್ಲರಿಗೂ ಅಭಿನಂದನೆಗಳು ಎಂದಿದ್ದಾರೆ.  ಕೇಂದ್ರ ಸಚಿವ ಭೂಪೇಂದ್ರ ಯಾದವ್ ಉತ್ತರ ಪ್ರದೇಶ ಮತ್ತು ಗುಜರಾತ್‌ನಲ್ಲಿರುವ ತಮ್ಮ ತಂಡಗಳು ಮತ್ತು ಜೌಗು ಪ್ರದೇಶ ಸಮುದಾಯವನ್ನು ಅಪೇಕ್ಷಿತ ರಾಮ್ಸರ್ ತಾಣಗಳ ಪಟ್ಟಿಗೆ ಹೊಸ ಸೇರ್ಪಡೆಗಳಿಗಾಗಿ ಅಭಿನಂದಿಸಿದರು.ಈ ಅಂತಾರಾಷ್ಟ್ರೀಯ ಮನ್ನಣೆಯು ನಮ್ಮ ಪರಿಸರವನ್ನು ರಕ್ಷಿಸಲು ಮತ್ತು ಜೌಗು ಪ್ರದೇಶಗಳನ್ನು ಸಂರಕ್ಷಿಸಲು ಭಾರತದ ಬಲವಾದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ನೂರಾರು ವಲಸೆ ಮತ್ತು ನಿವಾಸಿ ಪಕ್ಷಿ ಪ್ರಭೇದಗಳು ಎರಡು ಜೌಗು ಪ್ರದೇಶಗಳಲ್ಲಿ ತಮ್ಮ ನೆಲೆಯನ್ನು ಕಂಡುಕೊಂಡಿವೆ, ಇವು ಅಳಿವಿನಂಚಿನಲ್ಲಿರುವ ಪಕ್ಷಿಗಳಲ್ಲದೆ ಚಿಂಕಾರ, ತೋಳಗಳು, ಕ್ಯಾರಕಲ್, ಮರುಭೂಮಿ ಬೆಕ್ಕುಗಳು ಮತ್ತು ಮರುಭೂಮಿ ನರಿಗಳ ಆವಾಸಸ್ಥಾನಗಳಾಗಿವೆ ಎಂದು ಯಾದವ್ ತಿಳಿಸಿದ್ದಾರೆ. ಭಾರತದ ರಾಮ್ಸರ್ ಜಾಲವು 276% ಕ್ಕಿಂತ ಹೆಚ್ಚು ವಿಸ್ತರಣೆಯನ್ನು ಕಂಡಿದೆ, 2014 ರಲ್ಲಿ 26 ರಿಂದ ಈಗ 98 ಕ್ಕೆ ಏರಿದೆ, ಇದು ಪ್ರಧಾನಿ ನರೇಂದ್ರ ಮೋದಿಯವರ ದಾರ್ಶನಿಕ ನಾಯಕತ್ವಕ್ಕೆ ಸಾಕ್ಷಿ ಎಂದು ಶ್ಲಾಘಿಸಿದರು.

Leave a Reply

Your email address will not be published. Required fields are marked *

error: Content is protected !!