ಉದಯವಾಹಿನಿ, ಆಸ್ಟ್ರೇಲಿಯಾ: ತಿರಸ್ಕರಿಸಿದಳು ಎಂಬ ಕಾರಣಕ್ಕೆ ಸಿಟ್ಟಾದ ಗೆಳೆಯನೋರ್ವ ಮಾಜಿ ಪ್ರೇಯಸಿಯ ಕೈಕಾಲುಗಳನ್ನು ಕಟ್ಟಿ ಜೀವಂತವಾಗಿ ಹೂತ ಹಾಕಿದ್ದ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ. ಹೀಗೆ ಗೆಳತಿಯನ್ನು ಜೀವಂತವಾಗಿ ಹೂತು ಹಾಕಿ ಕೊಲೆ ಮಾಡಿದ ವ್ಯಕ್ತಿಯನ್ನು ಭಾರತೀಯ ಮೂಲದ ಪ್ರಸ್ತುತ ಆಸ್ಟ್ರೇಲಿಯಾದ ಅಡಿಲೇಡ್ ನಿವಾಸಿಯಾಗಿರುವ ತರಿಕ್‌ಜೋತ್ ಸಿಂಗ್ ಎಂದು ಗುರುತಿಸಲಾಗಿದೆ. ಈತ ಭಾರತೀಯ ಮೂಲದ 21 ವರ್ಷದ ನರ್ಸಿಂಗ್ ವಿದ್ಯಾರ್ಥಿ ಜಾಸ್ಮೀನ್ ಕೌರ್ ಎಂಬಾಕೆಯನ್ನು ಜೀವಂತವಾಗಿ ಸಮಾಧಿ ಮಾಡಿದ್ದ. 2021 ರ ಮಾರ್ಚ್‌ನಲ್ಲಿ ಈ ಕೊಲೆ ಪ್ರಕರಣ ನಡೆದಿದ್ದು, ನ್ಯಾಯಾಲಯ ಈ ಪ್ರಕರಣದಲ್ಲಿ ಆರೋಪಿ ತರಿಕ್‌ಜೋತ್ ಸಿಂಗ್ ತಪ್ಪಿತಸ್ಥ ಎಂದು ತೀರ್ಪು ನೀಡಿದೆ. ಜಾಸ್ಮೀನ್ ಕೌರ್ ಕೈಕಾಲುಗಳನ್ನು ಕೇಬಲ್ ವೈರ್‌ನಿಂದ ಬಿಗಿದು ಕಟ್ಟಿ, ಕಣ್ಣಿಗೆ ಬಟ್ಟೆಯನ್ನು ಕಟ್ಟಿ ಜೀವಂತವಾಗಿ ಸಮಾಧಿ ಮಾಡಲಾಗಿತ್ತು. ಕೈಕಾಲು ಕಟ್ಟಿ, ಜೊತೆಗೆ ಕಣ್ಣುಗಳನ್ನು ಕೂಡ ಬಟ್ಟೆಯಿಂದ ಕಟ್ಟಿದ ಸ್ಥಿತಿಯಲ್ಲಿ ಆಳವಿಲ್ಲದ ಸಮಾಧಿಯೊಂದರಲ್ಲಿ ಆಕೆಯ ಶವ ಪತ್ತೆಯಾಗಿತ್ತು.
