ಉದಯವಾಹಿನಿ, ಕೇರಳ: ಪ್ರತಿಭೆ ಪ್ರತಿಯೊಬ್ಬರಲ್ಲಿಯೂ ಇರುತ್ತದೆ, ಆದರೆ ಎಲ್ಲ ಪೋಷಕರಿಗೂ ಅಷ್ಟೊಂದು ಸೂಕ್ಷ್ಮವಾಗಿ ಗಮನಿಸಲು ಮತ್ತು ಪ್ರೋತ್ಸಾಹಿಸಲು ಸಮಯವಿರುತ್ತದೆಯೇ? ಅದರಲ್ಲೂ ಕೆಳವರ್ಗ ಮತ್ತು ದುಡಿಯುವ ವರ್ಗದ ಪೋಷಕರಿಗೆ ಮನೆಮಂದಿಯ ಹೊಟ್ಟೆ ತುಂಬಿಸುವುದೇ ಕಷ್ಟ. ಆದರೂ ಮಕ್ಕಳನ್ನು ಶಾಲೆಗೆ ಕಳಿಸುವ ಸಾಹಸಕ್ಕಂತೂ ಕೈಹಾಕುತ್ತಾರೆ. ಆದರೆ ಕಲೆ? ಅದು ಕಷ್ಟವೇ. ಹೀಗಿದ್ದಾಗ ಮಕ್ಕಳೊಳಗಿನ ಪ್ರತಿಭೆಯನ್ನು ಹೊರಜಗತ್ತಿಗೆ ಕಾಣಿಸುವ ಪ್ರಯತ್ನದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು ಎನ್ನಿಸಿಕೊಳ್ಳುತ್ತದೆ. ಈ ವಿಡಿಯೋ ನೋಡಿ. ಕೇರಳದ ಸರ್ಕಾರಿ ಶಾಲೆಯ ಶಿಕ್ಷಕಿ ಮಕ್ಕಳೊಂದಿಗೆ ಡೆಸ್ಕಿನಲ್ಲಿ ಕುಳಿತು ವಯನಾಡಿನ ಜಾನಪದ ಹಾಡೊಂದನ್ನು ಹಾಡಿದ್ದಾರೆ. ಈ ಪುಟ್ಟ ಬಾಲಕ ಡೆಸ್ಕ್ನ್ನೇ ತಾಳವಾದ್ಯವನ್ನಾಗಿಸಿಕೊಂಡಿದ್ಧಾನೆ! ಈತನಕ ಈ ವಿಡಿಯೋ ಅನ್ನು ಸುಮಾರು 75,000 ಜನರು ವೀಕ್ಷಿಸಿದ್ದಾರೆ. ಸಾವಿರಕ್ಕಿಂತಲೂ ಹೆಚ್ಚು ಜನ ಇಷ್ಟಪ್ಟಿದ್ದಾರೆ. 200ಕ್ಕೂ ಹೆಚ್ಚು ಜನರು ರೀಟ್ವೀಟ್ ಮಾಡಿದ್ದಾರೆ. ಅನೇಕರು ಹೃದಯ ತುಂಬಿ ಪ್ರತಿಕ್ರಿಯಿಸಿದ್ದಾರೆ.
