ಉದಯವಾಹಿನಿ, ಆರ್.ಲಕ್ಷ್ಮಿ ನಾರಾಯಣಗೌಡ್ರು ನಿರ್ಮಿಸುತ್ತಿರುವ, ನೃತ್ಯ ಸಂಯೋಜಕ ಎಂ.ಆರ್. ಕಪಿಲ್ ಅವರ ನಿರ್ದೇಶನದ ಚಿತ್ರ ‘ಬೀಟ್ ಪೊಲೀಸ್’. ನೆಲಮಂಗಲ ಪೊಲೀಸ್ ಠಾಣೆಯ ಬಳಿ ಈ ಬೀಟ್ ಪೊಲೀಸ್ ಚಿತ್ರದ ಮುಹೂರ್ತ ಸಮಾರಂಭ ನಡೆಯಿತು. ಸಾಹಸ ನಿರ್ದೇಶಕ ಕೌರವ ವೆಂಕಟೇಶ್ ಈ ಚಿತ್ರದ ನಾಯಕನಾಗಿ ನಟಿಸಲಿದ್ದು, ಭೀಮ ಚಿತ್ರದ ಜನಪ್ರಿಯ ನಟಿ ಪ್ರಿಯಾ ಅವರು ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ನಟಿಸುತ್ತಿದ್ದಾರೆ, ನಟ ಡ್ರ್ಯಾಗನ್ ಮಂಜು ಕೂಡ ಚಿತ್ರದಲ್ಲಿ ಖಳನಾಯಕನ ಪಾತ್ರ ನಿರ್ವಹಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ನಿರ್ಮಾಪಕ ಆರ್. ಲಕ್ಷ್ಮಿನಾರಾಯಣ ಗೌಡ್ರು, ನಮ್ಮ ಆರ್ಯ ಫಿಲ್ಮ್‌ನ 4ನೇ ಚಿತ್ರವಿದು, ನೈಜ ಘಟನೆಯ ಸುತ್ತ ನಡೆವ ಕಥಾಹಂದರ ಚಿತ್ರದಲ್ಲಿದ್ದು, ಪ್ರಿಯಾ, ಡ್ರ್ಯಾಗನ್ ಮಂಜು, ಸುಚೇಂದ್ರ ಪ್ರಸಾದ್, ಪಾಪ ಪಾಂಡು ಚಿದಾನಂದ್ ಸೇರಿದಂತೆ ಅನೇಕ ಪ್ರತಿಭಾವಂತ ಕಲಾವಿದರು ಚಿತ್ರದಲ್ಲಿದ್ದಾರೆ. 25 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದ್ದು, ನಾಲ್ಕು ಹಾಡು, ನಾಲ್ಕು ಫೈಟ್ಸ್ ನಮ್ಮ ಚಿತ್ರದಲ್ಲಿದೆ. ಈಗಿನ ಕಾಲದ ಎಜುಕೇಶನ್ ಬಗ್ಗೆ ಒಂದು ಗಟ್ಟಿ ಕಥೆಯನ್ನ ಈ ಚಿತ್ರದ ಮೂಲಕ ಹೇಳಲಾಗುತ್ತಿದ್ದು, ಜನರಿಗೆ ಎಚ್ಚರಿಕೆ ಕೊಡುವ ಪ್ರಯತ್ನ ಮಾಡಿದ್ದೇವೆ. ಸಮಾಜದಲ್ಲಿ ನಾವು ಹೇಗೆ ಎಚ್ಚರಿಕೆಯಿಂದ ಇರಬೇಕು, ಅಂತ ಹೇಳೋ ಪ್ರಯತ್ನ ಮಾಡಿದ್ದೇವೆ ಎಂದು ಹೇಳಿದರು.
