ಉದಯವಾಹಿನಿ, ವಾರದಲ್ಲೊಮ್ಮೆಯಾದ್ರೂ ಮನೆಯಲ್ಲಿ ಇಡ್ಲಿ ಮಾಡುತ್ತೇವೆ. ಇಡ್ಲಿಯಲ್ಲಿ () ಹಲವಾರು ವಿಧಗಳಿವೆ. ರವೆ ಇಡ್ಲಿ, ಬಾಳೆ ಹಣ್ಣಿನ ಇಡ್ಲಿ, ಅಕ್ಕಿ ಇಡ್ಲಿ ಹೀಗೆ. ಆದ್ರೆ ಮೆಕ್ಕೆ ಜೋಳದ ಇಡ್ಲಿ ಹೆಚ್ಚು ವಿಶೇಷ. ಮೆಕ್ಕೆ ಜೋಳದಲ್ಲಿ ಹೆಚ್ಚಿನ ಪ್ರೊಟೀನ್ ಮತ್ತು ಪೋಷಕಾಂಶಗಳಿದ್ದು, ಇದು ಆರೋಗ್ಯಕ್ಕೆ ಹೆಚ್ಚು ಒಳ್ಳೆಯದು ಕೂಡ.
ವಾರದಲ್ಲೊಮ್ಮೆಯಾದ್ರೂ ಮನೆಯಲ್ಲಿ ಇಡ್ಲಿ ಮಾಡುತ್ತೇವೆ. ಇಡ್ಲಿಯಲ್ಲಿ ಹಲವಾರು ವಿಧಗಳಿವೆ. ರವೆ ಇಡ್ಲಿ, ಬಾಳೆ ಹಣ್ಣಿನ ಇಡ್ಲಿ, ಅಕ್ಕಿ ಇಡ್ಲಿ ಹೀಗೆ. ಆದ್ರೆ ಮೆಕ್ಕೆ ಜೋಳದ ಇಡ್ಲಿ ಹೆಚ್ಚು ವಿಶೇಷ. ಮೆಕ್ಕೆ ಜೋಳದಲ್ಲಿ ಹೆಚ್ಚಿನ ಪ್ರೊಟೀನ್ ಮತ್ತು ಪೋಷಕಾಂಶಗಳಿದ್ದು, ಇದು ಆರೋಗ್ಯಕ್ಕೆ ಹೆಚ್ಚು ಒಳ್ಳೆಯದು ಕೂಡ.

ಬೇಕಾಗುವ ಸಾಮಗ್ರಿಗಳು:
* ಮೆಕ್ಕೆ ಜೋಳ -2 ಕಪ್
* ಉದ್ದಿನ ಬೇಳೆ – ಅರ್ಧ ಕಪ್
* ಹುರಿದ ಕಡ್ಲೆಬೇಳೆ- 2 ಚಮಚ
* ಇಂಗು -ಅರ್ಧ ಚಮಚ
* ಕೊತ್ತಂಬರಿ ಸೊಪ್ಪು- ಸ್ವಲ್ಪ
* ಅಡುಗೆ ಎಣ್ಣೆ- ಅರ್ಧ ಕಪ್
* ರುಚಿಗೆ ತಕ್ಕಷ್ಟು ಉಪ್ಪು
* ಹಸಿ ಮೆಣಸು – ಐದು
* ತುರಿದ ತೆಂಗಿನಕಾಯಿ- ಅರ್ಧ ಚಮಚ
* ಸಾಸಿವೆ- ಒಂದು ಚಮಚಮಾಡುವ ವಿಧಾನ:
* ಮೆಕ್ಕೆಜೋಳ, ಉದ್ದಿನ ಬೇಳೆಗಳನ್ನು ಸುಮಾರು ಎರಡರಿಂದ 3 ಗಂಟೆಗಳ ಕಾಲ ನೆನೆಸಿಡಿ. ಬಳಿಕ ನೀರನ್ನು ಚೆನ್ನಾಗಿ ಸೋಸಿ ಹುರಿದ ಕಡಲೆ ಬೇಳೆ ಮತ್ತು ಹಸಿಮೆಣಸಿಕಾಯಿಯೊಂದಿಗೆ ಚೆನ್ನಾಗಿ ರುಬ್ಬಿಕೊಳ್ಳಬೇಕು.
* ಇಡ್ಲಿಯ ಹಿಟ್ಟಿನ ಹದಕ್ಕೆ ಬರುವವರೆಗೂ ನುಣ್ಣಗೆ ರುಬ್ಬಿ ಇಟ್ಟುಕೊಳ್ಳಿ.
ಈಗ ತೆಂಗಿನ ತುರಿ, ಉಪ್ಪು ಹಾಕಿ ಚನ್ನಾಗಿ ಕಲಸಿ. ಒಂದು ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಎಣ್ಣೆ ಕಾದ ನಂತರ ಸಾಸಿವೆ ಹಾಕಿ ಸಿಡಿಸಿ, ಇಂಗು ಸೇರಿಸಿ ಒಗ್ಗರಣೆ ಮಾಡಿಕೊಳ್ಳಿ. ಈ ಒಗ್ಗರಣೆಗೆ ರುಬ್ಬಿದ ಹಿಟ್ಟನ್ನು ಹಾಕಿ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಚೆನ್ನಾಗಿ ಕಲಸಿ. ಎಲ್ಲವೂ ಚೆನ್ನಾಗಿ ಮಿಶ್ರವಾಗುವ ರೀತಿ ಕಲಸಿ. ಈ ಹಿಟ್ಟನ್ನು ಇಡ್ಲಿ ಪಾತ್ರೆಯಲ್ಲಿ ಹಾಕಿ ಬೇಯಿಸಿದರೆ ಮೆಕ್ಕೆ ಜೋಳದ ಇಡ್ಲಿ ಸವಿಯಲು ಸಿದ್ಧವಾಗುತ್ತದೆ.

 

Leave a Reply

Your email address will not be published. Required fields are marked *

error: Content is protected !!