ಉದಯವಾಹಿನಿ, ಸರಿಗಮಪ’ ಖ್ಯಾತಿಯ ಗಾಯಕಿ ಸುಹಾನಾ ಸಯ್ಯದ್ ಅವರು ತಮ್ಮ 16 ವರ್ಷಗಳ ಸ್ನೇಹಿತ, ರಂಗಭೂಮಿ ಕಲಾವಿದ ನಿತಿನ್ ಶಿವಾಂಶ್ ಅವರನ್ನು ವರಿಸುತ್ತಿದ್ದಾರೆ. ಈ ಜೋಡಿ ಕುವೆಂಪು ಅವರ ಮಂತ್ರ ಮಾಂಗಲ್ಯದ ಆಶಯದಂತೆ ಸರಳವಾಗಿ ಅಂತರ್ ಧರ್ಮೀಯ ವಿವಾಹವಾಗುತ್ತಿದ್ದಾರೆ. ಅಂತರ್‌ಧರ್ಮೀಯ ಸರಳ ವಿವಾಹ ಕಾರ್ಯಕ್ರಮದಲ್ಲಿ ಆಪ್ತ ವರ್ಗದವರಷ್ಟೇ ಪಾಲ್ಗೊಳ್ಳುತ್ತಿದ್ದಾರೆ. ರಂಗಭೂಮಿ ಕಲಾವಿದ ನಿತಿನ್ ಜೊತೆ ಸುಹಾನಾ ಹೊಸ ಮನ್ವಂತರಕ್ಕೆ ಹೆಜ್ಜೆ ಇಡುತ್ತಿದ್ದಾರೆ. ಮದುವೆಗೂ ಮುನ್ನ ಭಾವಿ ಪತಿ ಜೊತೆ ಫೋಟೋಗೆ ಫೋಸ್ ಕೊಡುವಾಗ ಫೋಟೋಗಳು ರಿವೀಲ್ ಆಗಿದೆ.
ವಧುವಾಗಿ ಮಿಂಚುತ್ತಿರುವ ಸುಹಾನಾ ಫೋಟೋಗಳು ಲಭ್ಯವಾಗಿದೆ. ಸುಹಾನಾ ಗೋಲ್ಡನ್‌ ಬಾರ್ಡರ್‌ ಇರುವ ರೆಡ್‌ ಸೀರೆಯಲ್ಲಿ ಕಂಗೊಳಿಸಿದ್ರೆ, ನಿತಿನ್ ಶಿವಾಂಶ್ ಶೇರ್ವಾನಿಯಲ್ಲಿ ಶೈನ್‌ ಆಗ್ತಿದ್ದಾರೆ. ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರೋ ಸುಹಾನಾ ಅಭಿಮಾನಿಗಳು ʻಸೂಪರ್‌ ಜೋಡಿʼ ಎಂದು ಹೊಗಳಿದ್ದಾರೆ. ಹಿಜಬ್ (Hijab) ಧರಿಸಿ ಹಿಂದೂ ಭಜನೆ ಹಾಡುವ ಸುಹಾನಾಗೆ ತೀವ್ರ ವಿರೋಧ ವ್ಯಕ್ತವಾಗಿತ್ತು, ಆದರೀಗ ಎಲ್ಲಾ ಅಡೆತಡೆಗಳನ್ನ ದಾಟಿ ತಾವು ಬಹುವರ್ಷಗಳಿಂದ ಪ್ರೀತಿಸುತ್ತಿರುವ ಅಂತರ್ ಧರ್ಮದ ಹುಡುಗನ ಜೊತೆ ಮದುವೆಯಾಗಲು ಹೊರಟಿದ್ದಾರೆ. ಈ ಅಂತರ್‌ಧರ್ಮೀಯ ಮದುವೆ ವಿಶೇಷವಾಗಿದ್ದು ಅನೇಕ ಕಲಾವಿದರು ಗಾಯಕರು ಸಾಕ್ಷಿಯಾಗಲಿದ್ದಾರೆ. ಆಮಂತ್ರಣ ಪತ್ರಿಕೆಯಲ್ಲಿ, ಪ್ರೀತಿ ವಿಶ್ವದ ಭಾಷೆ, ಹೃದಯದಿಂದ ಹೊರಹೊಮ್ಮಿದ ಈ ಪ್ರೇಮ ಕಾವ್ಯ ದೇವ ವಿರಚಿತ. ಶ್ರೀ ಕುವೆಂಪುರವರ ಮಂತ್ರ ಮಾಂಗಲ್ಯದ ಆಶಯದಂತೆ ಸುಹಾನಾ ಹಾಗೂ ನಿತಿನ್ ಮದುವೆಯಾಗುತ್ತಿದ್ದೇವೆ. ನಮ್ಮ ನಡೆ ವಿಶ್ವಮಾನವತ್ವದೆಡೆಗೆ ಎಂದು ಹೇಳಿಕೊಂಡಿದ್ದಾರೆ

Leave a Reply

Your email address will not be published. Required fields are marked *

error: Content is protected !!