ಉದಯವಾಹಿನಿ, ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಪ್ರತಿಯೊಬ್ಬರೂ ಬಿಸ್ಕೆಟ್‌ ತಿನ್ನಲು ಇಷ್ಟಪಡುತ್ತಾರೆ. ಟೀ, ಕಾಫಿ ಜೊತೆ ಒಳ್ಳೆ ಕಾಂಬಿನೇಷನ್‌ ಅಂತ ಅನೇಕರು ನಿತ್ಯ ಬಿಸ್ಕೆಟ್‌ ತಿನ್ನುತ್ತಾರೆ. ಅದರಲ್ಲೂ ಕೆಲವರು ವಿವಿಧ ಬ್ರ್ಯಾಂಡ್‌ಗಳ ಪ್ಯಾಕೇಜ್ಡ್‌ ಕುಕೀಗಳಲ್ಲಿ ಸಕ್ಕರೆ, ಮೈದಾ ಅತಿಯಾಗಿ ಇರುತ್ತದೆ ಇವು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಕಾರಣಕ್ಕೆ ಮನೆಯಲ್ಲೇ ಆರೋಗ್ಯಕರ ರೀತಿಯಲ್ಲಿ ಹೋಮ್‌ಮೇಡ್‌ ಕುಕೀಗಳನ್ನೇ ಸೇವನೆ ಮಾಡುತ್ತಾರೆ. ಆದರೆ ಹೋಮ್‌ಮೇಡ್‌ ಬಿಸ್ಕೆಟ್‌ಗಳನ್ನು ಸಹ ಪ್ರತಿನಿತ್ಯ ಸೇವನೆ ಮಾಡುವುದು ಒಳ್ಳೆಯದಲ್ಲವಂತೆ. ಇವುಗಳು ಕೃತಕ ಸಿಹಿಕಾರಕ, ಮೈದಾ ಇತ್ಯಾದಿಗಳಿಂದ ಮುಕ್ತವಾಗಿದ್ದರೂ, ಇವುಗಳನ್ನು ಪ್ರತಿನಿತ್ಯ ಸೇವನೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಎಂಬುದನ್ನು ಪೌಷ್ಟಿಕ ತಜ್ಞೆ ಅಮಿತಾ ಗದ್ರೆ ವಿವರಿಸಿದ್ದಾರೆ. ಹಾಗಿದ್ರೆ ನಿತ್ಯ ಹೋಮ್‌ಮೇಡ್‌ ಕುಕೀ, ಬಿಸ್ಕೆಟ್‌ ತಿಂದ್ರೆ ಏನಾಗುತ್ತದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.

ಹೋಮ್‌ಮೇಡ್‌ ಬಿಸ್ಕೆಟ್‌ಗಳನ್ನೂ ಪ್ರತಿನಿತ್ಯ ಸೇವಿಸೋದು ಒಳ್ಳೆಯದಲ್ಲ: ಮನೆಯಲ್ಲಿ ತಯಾರಿಸಿದ ಬಿಸ್ಕತ್ತುಗಳು ಮತ್ತು ಕುಕೀಗಳು ಕೃತಕ ಸಿಹಿಕಾರಕಗಳಿಂದ ಮುಕ್ತವಾಗಿದ್ದರೂ ಸಹ, ಪ್ರತಿದಿನ ಅವುಗಳನ್ನು ಸೇವಿಸುವ ಬಗ್ಗೆ ಜಾಗರೂಕರಾಗಿರಬೇಕು ಎಂದು ಪೌಷ್ಟಿಕತಜ್ಞೆ ಅಮಿತಾ ಗದ್ರೆ ಹೇಳುತ್ತಾರೆ.
ಕುಕೀಗಳನ್ನು ಮೂರು ಭಾಗ ಹಿಟ್ಟು, ಎರಡು ಭಾಗ ಕೊಬ್ಬು ಮತ್ತು ಒಂದು ಭಾಗ ಸಕ್ಕರೆಯೊಂದಿಗೆ ತಯಾರಿಸಲಾಗುತ್ತದೆ, ಅಂದರೆ ಇದರಲ್ಲಿ ಸರಿಸುಮಾರು 50 ರಿಂದ 70 ಪ್ರತಿಶತ ಹಿಟ್ಟು, 15 ರಿಂದ 35 ಪ್ರತಿಶತ ಕೊಬ್ಬು ಮತ್ತು 10 ರಿಂದ 25 ಪ್ರತಿಶತ ಸಕ್ಕರೆ ಇರುತ್ತದೆ. ನೀವು ಮನೆಯಲ್ಲಿಯೇ ತಯಾರಿಸಿದರೂ, ಅಥವಾ ತುಪ್ಪು ಬೆಲ್ಲವನ್ನು ಬಳಸಿ ತಯಾರಿಸಿದ ಆರೋಗ್ಯಕರ ಕುಕೀಗಳನ್ನು ಖರೀದಿಸಿದರೂ ಪ್ರತಿನಿತ್ಯ ಇವುಗಳ ಸೇವನೆ ಒಳ್ಳೆಯದಲ್ಲ. ಏಕೆಂದರೆ ಇದು ಎಮ್ಟಿ ಕ್ಯಾಲೋರಿಗಳು ಅಂದರೆ ಯಾವುದೇ ಪೋಷಕಾಂಶಗಳಿಲ್ಲದ ಮತ್ತು ನಿಮಗೆ ಅಗತ್ಯವಿಲ್ಲದ ಹೆಚ್ಚುವರಿ ಸಕ್ಕರೆ ಮತ್ತು ಕೊಬ್ಬನ್ನು ಹೊಂದಿರುವ ಉತ್ಪನ್ನವಾಗಿದೆ. ಇವುಗಳು ಅಪರೂಪಕ್ಕೆ ಮಕ್ಕಳಿಗೆ ನೀಡಬಹುದು. ಆದ್ರೆ ಪ್ರತಿನಿತ್ಯ ಇದರ ಸೇವನೆ ಒಳ್ಳೆಯದಲ್ಲ ಎಂದು ಅವರು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!