ಉದಯವಾಹಿನಿ, ನವದೆಹಲಿ: ನಾಲ್ಕು ಅಥವಾ ಐದು ದಶಕಗಳ ಬಳಿಕ ಭಾರತದ ಪ್ರಧಾನಿ ಜಗತ್ತಿಗೆ ನಾಯಕನಗಲಿದ್ದಾರೆ. 21ನೇ ಶತಮಾನವು ಭಾರತಕ್ಕೆ ಸೇರಿದೆ. ಇಲ್ಲಿನ ಪ್ರಧಾನಿ ಯಾರೇ ಆದರೂ ಅಮೆರಿಕದ ಅಧ್ಯಕ್ಷರಿಂದ ಮುಕ್ತ ಜಗತ್ತಿನ ನಾಯಕನಾಗಿ ಜವಾಬ್ದಾರಿಯನ್ನು ಪಡೆದುಕೊಳ್ಳಬಹುದು ಎಂದು ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ಟೋನಿ ಅಬಾಟ್ ( ಹೇಳಿದರು. ವಿಶ್ವ ಶೃಂಗಸಭೆ 2025ರಲ್ಲಿ ಮಾತನಾಡಿದ ಅವರು, ವಿಶ್ವದ ಹೊಸ ಮಹಾಶಕ್ತಿಗಳಲ್ಲಿ ಒಂದಾಗಿ, ಏಷ್ಯಾ- ಪೆಸಿಫಿಕ್ ಪ್ರದೇಶದಲ್ಲಿ ಆಸ್ಟ್ರೇಲಿಯಾಕ್ಕೆ ಬಲವಾದ ವಿಶ್ವಾಸಾರ್ಹ ಪಾಲುದಾರವಾಗಿ ತನ್ನ ಪಾತ್ರವನ್ನು ವಹಿಸುವಂತೆ ದೆಹಲಿಗೆ ಕರೆ ನೀಡಿದರು.
2022ರಲ್ಲಿ ಭಾರತವು ಆಸ್ಟ್ರೇಲಿಯಾದೊಂದಿಗೆ, ಕಳೆದ ತಿಂಗಳು ಇಂಗ್ಲೆಂಡ್‌ನೊಂದಿಗೆ ವಿವಿಧ ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕಿದೆ. ಇದು ಪ್ರಜಾಪ್ರಭುತ್ವ ಜಗತ್ತು ಚೀನಾದಿಂದ ಭಾರತದತ್ತ ದೃಷ್ಟಿ ಹರಿಸುತ್ತಿದೆ ಎನ್ನುವುದರ ಸಂಕೇತ ಎಂದು ಅವರು ಹೇಳಿದರು.
ಸಂವಾದದಲ್ಲಿ ಚೀನಾ, ಪಾಕಿಸ್ತಾನ ಮತ್ತು ಅಮೆರಿಕ ಜತೆಗಿನ ಭಾರತದ ಸಂಬಂಧಗಳ ಅವಲೋಕನವನ್ನು ನೀಡಿದ ಅವರು, ಜಗತ್ತಿನ ಮೇಲೆ ಪ್ರಾಬಲ್ಯ ಸಾಧಿಸುವ ಬೀಜಿಂಗ್‌ನ ಮಹತ್ವಾಕಾಂಕ್ಷೆಗಳನ್ನು ತಡೆಯಲು ದೆಹಲಿ ಪ್ರಮುಖ ಪಾತ್ರ ವಹಿಸುತ್ತದೆ. ಚೀನಾ ಪ್ರಾಬಲ್ಯ ಸಾಧಿಸಬೇಕೆಂದು ಬಯಸುತ್ತದೆ. ಇದು ಚೀನಾದ ಎಲ್ಲ ನೆರೆಹೊರೆಯವರಿಗೆ ಹಾಗೂ ಜಗತ್ತಿಗೆ ತೊಂದರೆಯನ್ನುಂಟು ಮಾಡುತ್ತಿದೆ ಎಂದರು.

Leave a Reply

Your email address will not be published. Required fields are marked *

error: Content is protected !!