ಉದಯವಾಹಿನಿ, ಶಶಾಂಕ್ ನಿರ್ದೇಶನದ ಡಾರ್ಲಿಂಗ್ ಕೃಷ್ಣ ನಟನೆಯ ಬ್ರ್ಯಾಟ್ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಈ ಹಿಂದೆ ಡಾರ್ಲಿಂಗ್ ಕೃಷ್ಣ ಹಾಗೂ ನಿರ್ದೇಶಕ ಶಶಾಂಕ್ ಕಾಂಬಿನೇಷನ್‌ನ ಕೌಶಲ್ಯ ಸುಪ್ರಜಾ ರಾಮಾ ಸಿನಿಮಾಗೆ ಸಾಥ್ ನೀಡಿದ್ದ ಕಿಚ್ಚ ಸಿನಿಮಾಗೆ ಲಕ್ ತಂದುಕೊಟ್ಟಿತ್ತು. ಇದೀಗ ಮತ್ತೊಮ್ಮೆ ಕಿಚ್ಚ ಬ್ರ್ಯಾಟ್ ಸಿನಿಮಾಗೆ ಸಾಥ್ ನೀಡಿದ್ದಾರೆ. ಬ್ರ್ಯಾಟ್ ಟ್ರೈಲರ್ ಲಾಂಚ್ ಮಾಡಿ ಮಾತನಾಡಿದ ಕಿಚ್ಚ ಸುದೀಪ್ ಸಕ್ಸಸ್ ವಂಡರ್ ಫುಲ್ ಟೀಮ್‌ನಿಂದ ಬಂದಿದೆ. ಗೆಸ್ಟ್ ಆಗಿ ಬಂದಿದ್ದಕ್ಕೆ ನಾನು ಲಕ್ಕಿ ಎಂದಿದ್ದಾರೆ. ಇದೇ ವೇಳೆ ಅವರು ನಿರ್ದೇಶಕ ಪ್ರೇಮ್ ಕಾಲೆಳೆದಿದ್ದಾರೆ. ಪ್ರೇಮ್ ಜೊತೆಗಿನ ಕೆಡಿ ಸಿನಿಮಾದ ಬಗ್ಗೆ ಕಾಲೆಳೆದಿದ್ದಾರೆ ಸುದೀಪ್. ಅರ್ಜುನ್ ಜನ್ಯಾ ಇದ್ದ ಕಡೆ ಸೌಂಡ್ ಇದ್ದೆ ಇರುತ್ತೆ, ಆದ್ರೆ ಅವ್ರು ಮಾತ್ರ ಪ್ರೆಸ್ ಮೀಟ್ ಗೆ ಬರಲ್ಲ. ಪ್ರೇಮ್ ಕಡೆ ಸಿಕ್ಕಾಕಿಕೊಂಡ್ರೆ ಬರೋಕೆ ಆಗೊಲ್ಲ ಎಂದು ಕಿಚಾಯಿಸಿದ್ದಾರೆ. ಇನ್ನು ಕೆವಿಎನ್ ಸಂಸ್ಥೆ ಬ್ರ್ಯಾಟ್ ಸಿನಿಮಾದ ವಿತರಣೆಯನ್ನ ತೆಗೆದುಕೊಂಡಿದ್ದು, ಕೆಡಿ ಸಿನಿಮಾ ರಿಲೀಸ್ ತಡ ಆಗ್ತಿದೆ ಆದ್ರಿಂದ ಬೇರೆ ಸಿನಿಮಾ ರಿಲೀಸ್ ಮಾಡ್ತಿದೆ ಎಂದಿದ್ದಾರೆ.
