ಉದಯವಾಹಿನಿ, ಬಿಗ್‌ಬಾಸ್ ಕಾರ್ಯಕ್ರಮಕ್ಕೆ ಸ್ಪರ್ಧಿಯಾಗಿ ಹೋಗಿದ್ದ ಸತೀಶ್ ಈಗ ಎಲಿಮಿನೇಶನ್ ಆಗುವ ಮೂಲಕ ಹೊರಬಂದಿದ್ದಾರೆ. ವೇದಿಕೆಯಲ್ಲೇ ಈ ಕಾರ್ಯಕ್ರಮಕ್ಕಾಗಿ 25 ಲಕ್ಷದ ಬಟ್ಟೆ ಖರೀದಿಸಿರುವುದಾಗಿ ಸತೀಶ್ ಹೇಳಿದ್ದರು. ಹಾಗಾದರೆ ಸ್ಪರ್ಧಿಯಾಗಿ ಒಳ ಹೋಗಲು ಅದೆಷ್ಟು ಸಂಭಾವನೆ ಪಡೆದಿರಬಹುದು ಅನ್ನೋ ಕುತೂಹಲ ಸಹಜ. ಆದರೆ, ನೀಡಿದ ಸಂದರ್ಶನದಲ್ಲಿ ಡಾಗ್ ಸತೀಶ್, ಬಿಗ್‌ಬಾಸ್ ತಮಗೆ ನೀಡಿರುವ ಸಂಭಾವನೆ ವಿಚಾರ ಬಿಚ್ಚಿಟ್ಟಿದ್ದಾರೆ. ಇದುವರೆಗೂ ಬಿಗ್‌ಬಾಸ್ ಕಾರ್ಯಕ್ರಮದಿಂದ ತಮಗೆ 1 ರೂಪಾಯಿ ಹಣ ತಮಗೆ ಬಂದಿಲ್ಲ ಅನ್ನೋದಾಗಿ ಹೇಳಿದ್ದಾರೆ.ಬಿಗ್‌ಬಾಸ್ ಕಾರ್ಯಕ್ರಮಕ್ಕೆ ಹೋಗುವ ವೇಳೆ ಪ್ರತಿ ಸ್ಪರ್ಧಿಯೂ ಒಂದೊಂದು ಮೊತ್ತದ ಸಂಭಾವನೆ ಪಡೆದಿರುತ್ತಾರೆ. ಪ್ರತಿ ವಾರವೂ ಅವರಿಗೆ ಹಣ ಸಂದಾಯವಾಗುತ್ತದೆ. ಆದರೆ, ಕಾರ್ಯಕ್ರಮಕ್ಕೆ ಎಂಟ್ರಿ ಕೊಡುವ ಪೂರ್ವದಲ್ಲೂ ಅಡ್ವಾನ್ಸ್ ಹಣ ಹಾಗೂ ಬಳಿಕವೂ ತಮಗೆ ಹಣ ಬಂದಿಲ್ಲ ಎಂದಿದ್ದಾರೆ ಸತೀಶ್
ಆಧಾರ್ ಹಾಗೂ ಪಾನ್ ಕಾರ್ಡ್ ಲಿಂಕ್ ಆಗಿಲ್ಲ. ನಿಮಗೆ ಹಣ ಟ್ರಾನ್ಸ್‌ಫರ್ ಆಗುತ್ತಿಲ್ಲ ಎಂದು ಟೀಮ್ ಹೇಳಿತ್ತು. ಆಗ ನಾನು ಹಣವನ್ನ ಕೊಡಿ ಅಂತ ನಿಮ್ಮನ್ನು ಕೇಳಿದ್ನಾ ಎಂದೆ. ನನಗೆ ಹಣ ಮುಖ್ಯವಲ್ಲ, ನನ್ನ ಟರ್ನ್ವೋವರ್ ಚೆನ್ನಾಗಿದೆ. ನನಗೆ ಜನರ ಮುಂದೆ ಗುರುತಿಸಿಕೊಳ್ಳುವುದು ಮುಖ್ಯ. ವೇದಿಕೆ ಮುಖ್ಯವಾಗಿತ್ತು. ನಾನು ಒಂದು ಸಿನಿಮಾ ಕಾರ್ಯಕ್ರಮಕ್ಕೆ ನಾಯಿ ಹಿಡಿದುಕೊಂಡು ಹೋದ್ರೆ ಸಾಕು ಲಕ್ಷ ಲಕ್ಷ ಹಣ ಕೊಡ್ತಾರೆ. ಬಿಗ್‌ಬಾಸ್ ಮನೆಯಲ್ಲಿ ಇರೋವ್ರೆಲ್ಲ ಗೆಸ್ಟ್ ಆಗಿ ಹೋದ್ರೆ ಮೂವತ್ತೋ ನಲವತ್ತೋ ಸಾವಿರ ಕೊಡ್ತಾರಂತೆ’ ಎಂದಿದ್ದಾರೆ.
