ಉದಯವಾಹಿನಿ, ಬೆಂಗಳೂರು:  ಸಿದ್ದರಾಮಯ್ಯ ಮಂಡಿಸಿದ್ದು‌ ರಾಜಕೀಯ ಬಜೆಟ್ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ವಿಧಾನಸೌಧದಲ್ಲಿ‌ ಬಜೆಟ್ ಕುರಿತಾಗಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಚುನಾವಣೆ ನಂತರ ಸಿಎಂ ಸಿದ್ದರಾಮಯ್ಯ ಪೂರ್ಣ ಪ್ರಮಾಣದ ಬಜೆಟ್ ಮಂಡನೆ ಮಾಡಿದ್ದಾರೆ. ಆದರೆ ಇವತ್ತಿನ ಹಣಕಾಸಿನ ಸ್ಥಿತಿಯಲ್ಲಿ ‌ಯೋಜನೆಗಳಿಗೆ ಹಣಕಾಸು ಹೇಗೆ ಒದಗಿಸುತ್ತಾರೆ ಎಂದು ನಾವು ಅಂದುಕೊಂಡರೆ ಇವರು ಭೂತ ಕಾಲದಲ್ಲಿದ್ದಾರೆ. ಇದೊಂದು ರಿವರ್ಸ್ ಗೇರ್ ಇರುವ ಸರ್ಕಾರ ಎಂದು ಬಜೆಟ್ ನಲ್ಲಿ ಸಾಬೀತಾಯಿತು’ ಎಂದು ವ್ಯಂಗ್ಯವಾಡಿದರು. ಸುಳ್ಳು ಹೇಳುವ ಸರ್ಕಾರ ಎಂಬುದು ಈ ಬಜೆಟ್ ನಲ್ಲಿ ಸ್ಪಷ್ಟವಾಗಿದೆ. ಕೋವಿಡ್ ನಿರ್ವಹಣೆ ಬಗ್ಗೆ ದೇಶವನ್ನು ಜಗತ್ತು ಕೊಂಡಾಡಿದರೆ ಆರ್ಥಿಕ ನಿರ್ವಹಣೆ ಸರಿಯಾಗಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಕೇಂದ್ರ ಪುರಸ್ಕೃತ ಯೋಜನೆಗೆ ಅನುದಾನ ಕಡಿಮೆ ಮಾಡಿದೆ ಎಂದು‌ ಆರೋಪ ಮಾಡಲಾಗಿದೆ. ನೇರವಾಗಿ ಫಲಾನುಭವಿಗಳ ಖಾತೆಗೆ ಕೇಂದ್ರ ಹಣ ನೀಡುತ್ತದೆ. ಆದರೆ ತಪ್ಪಾಗಿ ಅಂಕಿ ಅಂಶಗಳನ್ನು‌ ಬಜೆಟ್ ನಲ್ಲಿ ನೀಡಲಾಗಿದೆ. ಬಜೆಟ್ ನ 50 ಪುಟ ಟೀಕೆಗೆ ಸೀಮಿತವಾಗಿದೆ. ಗ್ಯಾರಂಟಿಗಳಿಗೆ 52 ಸಾವಿರ ಕೋಟಿ ಬೇಕು ಎಂದಿದ್ದಾರೆ. ಆದರೆ ಕೆಲವು ಗ್ಯಾರಂಟಿ ‌ಇನ್ನೂ‌ ಜಾರಿಯಾಗಿಲ್ಲ. ಆದರೆ ಈ ವರ್ಷಕ್ಕೆ ಕೇವಲ 20 ರಿಂದ 22 ಸಾವಿರ ಕೋಟಿ ರೂ ಸಾಕು. ಈ ನಿಟ್ಟಿನಲ್ಲಿ ಹೆಚ್ಚಿನ ತೆರಿಗೆ ಹಾಗೂ ಸಾಲ ಪಡೆದುಕೊಳ್ಳುವ ಅಗತ್ಯ ಇರಲಿಲ್ಲ ಎಂದರು.

Leave a Reply

Your email address will not be published. Required fields are marked *

error: Content is protected !!