ಉದಯವಾಹಿನಿ, ಇತ್ತೀಚಿನ ದಿನದಲ್ಲಿ ಸಿನಿಮಾ ಮಂದಿರದಲ್ಲಿ ಚಿತ್ರ ತೆರೆಕಂಡು ಸ್ವಲ್ಪ ದಿನಕ್ಕೆ ಒಟಿಟಿಗೆ ಲಗ್ಗೆ ಇಡುತ್ತದೆ. ಕೆಲವೊಂದು ಸೂಪರ್ ಹಿಟ್ ಚಿತ್ರಗಳು ಒಟಿಟಿನಲ್ಲಿಯೂ ಅತೀ ಹೆಚ್ಚು ವೀಕ್ಷಣೆ ಆಗುವುದು ಇದೆ. ಚಿತ್ರ ಮಂದಿರಕ್ಕೆ ಅನಿವಾರ್ಯ ಕಾರಣದಿಂದ ತೆರಳದೇ ಇದ್ದವರು, ಸಿನಿಮಾ ನೋಡಲು ಮಿಸ್ ಮಾಡಿ ಕೊಂಡವರು ಮನೆಯಲ್ಲಿಯೇ ಎಲ್ಲರೂ ಒಟ್ಟಾಗಿ ನೋಡಲು ಒಟಿಟಿ ಒಂದು ಒಳ್ಳೇ ಅವಕಾಶ.. ಅಂತೆಯೇ ಈ ಬಾರಿ 2025 ರ ಅತಿ ಹೆಚ್ಚು ಬಾಕ್ಸ್ ಆಫೀಸ್ ಗಳಿಕೆ ಮಾಡಿದ್ದ ತೆಲುಗು ಚಿತ್ರವೊಂದು ಒಟಿಟಿಗೆ ಬರಲು ಸಿದ್ಧವಾಗಿದೆ. ನಟ ಪವನ್ ಕಲ್ಯಾಣ್ ಅಭಿನಯದ ದೆ ಕಾಲ್ ಹಿಮ್ ಒಜಿ ಸಿನಿಮಾವು ನೆಟ್‌ಫ್ಲಿಕ್ಸ್ ನಲ್ಲಿ ಸ್ಟ್ರೀಮ್ ಆಗಲಿದೆ.
ಈ ಬಗ್ಗೆ ನೆಟ್‌ಫ್ಲಿಕ್ಸ್ ಇಂಡಿಯಾ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತಿಳಿಸಿದ್ದು ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್ ಆಗುವ ದಿನಾಂಕವನ್ನು ಘೋಷಿಸಿದೆ. ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಈ ಸಿನಿಮಾ ಸ್ಟ್ರೀಮಿಂಗ್ ಆಗಲಿದ್ದು ಅಭಿಮಾನಿಗಳಿಗೆ ಈ ವಿಚಾರ ಖುಷಿ ತರಿಸಿದೆ.
ಆಂಧ್ರಪ್ರದೇಶದ ಡಿಸಿಎಂ ಪವನ್ ಕಲ್ಯಾಣ್ ಅವರು ತಮ್ಮ ರಾಜಕೀಯ ಜೀವನಕ್ಕೆ ಅಧಿಕ ಒತ್ತು ನೀಡುವ ಮೂಲಕ ಸಿನಿಮಾ ವೃತ್ತಿ ಜೀವನದಲ್ಲಿ ಅಷ್ಟಾಗಿ ಸಕ್ರಿಯವಿರಲಿಲ್ಲ. ಬಳಿಕ ಸರಿಯಾಗಿ ಶೂಟಿಂಗ್ ಗಳಿಗೆ ಭಾಗಿಯಾಗದ ಕಾರಣ ಅವರ ನಟನೆಯ ‘ಹರಿಹರ ವೀರಮಲ್ಲು’ ಸಿನಿಮಾ ತಡವಾಗಿ ಬಿಡುಗಡೆಯಾಯಿತು. ಈ ಸಿನಿಮಾ ಅಂದುಕೊಂಡ ಮಟ್ಟಕ್ಕೆ ಯಶಸ್ಸು ಕೂಡ ಪಡೆಯದಂತಾಯ್ತು. ಅದಾದ ಬಳಿಕ ಅವರ ನಟನೆಯ ಒಜಿ ಸಿನಿಮಾ ತೆರೆ ಕಂಡು ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಇದೀಗ ಅದೇ ಸಿನಿಮಾ ನೆಟ್ ಫ್ಲಿಕ್ಸ್ ನಲ್ಲಿ ಬಿಡುಗಡೆಗೆ ಸಜ್ಜಾಗಿದೆ.
