ಉದಯವಾಹಿನಿ , ನವದೆಹಲಿ: ಇತ್ತೀಚಿನ ದಿನದಲ್ಲಿ ಡಿಜಿಟಲ್ ಪೇಮೆಂಟ್ ಮೇಲೆ ಅವಲಂಬನೆ ಹೆಚ್ಚಾಗಿದೆ. ಕೆಲ ಸಂದರ್ಭಗಳಲ್ಲಿ ನೆಟ್ವರ್ಕ್ ಎರರ್, ಬ್ಯಾಂಕಿನ ಸರ್ವರ್ ಸಮಸ್ಯೆಯಾಗುವಾಗ ಹಣ ಟ್ರಾನ್ಫರ್ ಆಗದೆ ಅನೇಕರು ಇಕ್ಕಟ್ಟಿಗೆ ಸಿಲುಕಿದ್ದು ಇದೆ. ಅಂತೆಯೇ ವ್ಯಕ್ತಿಯೊಬ್ಬ ಸಮೋಸ ಖರೀದಿಸಿ ಬಳಿಕ ಡಿಜಿಟಲ್ ಪೇ ನಲ್ಲಿ ಹಣ ಹಾಕಲು ಸಾಧ್ಯವಾಗಲಿಲ್ಲ, ಆತ ತೆಗೆದುಕೊಂಡ ಸಮೋಸ ವಾಪಾಸ್ ನೀಡಿದರೂ ವ್ಯಾಪಾರಿ ಮಾತ್ರ ಹಣ ನೀಡಲೇ ಬೇಕೆಂದು ಪಟ್ಟು ಹಿಡಿದ ಘಟನೆ ಮಧ್ಯಪ್ರದೇಶದ ಜಬಲ್ಪುರ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಸಮೋಸ ಮಾರಾಟಗಾರ ಗ್ರಾಹಕನೊಂದಿಗೆ ದರ್ಪದಿಂದ ವರ್ತಿಸಿದ್ದು ಸದ್ಯ ಈ ಕುರಿತಾದ ವಿಡಿಯೋ ಒಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.
ಅಕ್ಟೋಬರ್ 17ರ ಸಂಜೆ ಜಬಲ್ಪುರ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ವೈರಲ್ ವಿಡಿಯೋ ದಲ್ಲಿ ಪ್ರಯಾಣಿಕನೊಬ್ಬನು ಸಮೋಸ ಬೇಕೆಂದು ವ್ಯಾಪಾರಿ ಬಳಿ ತಿಳಿಸಿದ್ದಾನೆ. ಅದನ್ನು ಪಾರ್ಸೆಲ್ ಪಡೆದು ತನ್ನ ಮೊಬೈಲ್ ನಿಂದ ಡಿಜಿಟಲ್ ಪೇಮೆಂಟ್ ಮಾಡಲು ಆತ ಹೊರಟಿದ್ದಾನೆ. ಆದರೆ ಪ್ರಯಾಣಿಕ ಎಷ್ಟೇ ಪ್ರಯತ್ನ ಪಟ್ಟರು ಕ್ಯಾಶ್ ಟ್ರಾನ್ಫರ್ ಆಗಲಿಲ್ಲ. ಅದೇ ಸಮಯಕ್ಕೆ ರೈಲು ಕೂಡ ಬಂದಿದ್ದರಿಂದ ಸಮೋಸ ಅಲ್ಲಿಯೇ ಬಿಟ್ಟು ಹಣ ಪೇಮೆಂಟ್ ಆಗುತ್ತಿಲ್ಲ ಎಂದು ಹೇಳಿ ಅಲ್ಲಿಂದ ಹೊರಡಲು ಮುಂದಾಗಿದ್ದಾನೆ.
