ಉದಯವಾಹಿನಿ , ಕಾಬೂಲ್: ಆಫ್ಘಾನ್ ಪಡೆಗಳು ಮತ್ತು ಬುಡಕಟ್ಟು ಜನಾಂಗದವರು ಆಕ್ರಮಣಕಾರರೆಂದು ಪರಿಗಣಿಸಿದರೆ ಪಾಕಿಸ್ತಾನದ ಸೇನೆಯನ್ನು ಭಾರತದ ಗಡಿಯವರೆಗೂ ಅಟ್ಟಿಸಿಕೊಂಡು ಹೋಗುವುದಾಗಿ ತಾಲಿಬಾನ್ ಎಚ್ಚರಿಕೆ ನೀಡಿದೆ. ಕದನ ವಿರಾಮ ಘೋಷಣೆಯ ಬಳಿಕವೂ ದಾಳಿಯನ್ನು ಮುಂದುವರಿಸಿರುವ ಪಾಕಿಸ್ತಾನವನ್ನು ಆಫ್ಘಾನ್ ಪಡೆಗಳು ಮತ್ತು ಬುಡಕಟ್ಟು ಜನಾಂಗದವರು ಆಕ್ರಮಣಕರಾರು ಎಂದು ಪರಿಗಣಿಸಿದರೆ ಭಾರತದ ಗಡಿ ಭಾಗದವರೆಗೂ ನಿಮ್ಮ ಸೈನ್ಯವನ್ನು ಅಟ್ಟಿಸಿಕೊಂಡು ಹೋಗುತ್ತೇವೆ ಎಂದು ಅಫ್ಘಾನ್ ಆಂತರಿಕ ವ್ಯವಹಾರಗಳ ಉಪ ಸಚಿವ ಮತ್ತು ತಾಲಿಬಾನ್ ನಾಯಕ ಮೌಲವಿ ಮುಹಮ್ಮದ್ ನಬಿ ಒಮರಿ ಕಟುವಾಗಿ ಎಚ್ಚರಿಸಿದ್ದಾರೆ.ಧಾರ್ಮಿಕ ಆದೇಶದ ಮೂಲಕ ಅಫ್ಘಾನಿಸ್ತಾನವು ಒಮ್ಮೆ ಪಾಕಿಸ್ತಾನವನ್ನು ಆಕ್ರಮಣಕಾರರೆಂದು ಘೋಷಿಸಿದರೆ ನಾನು ದೇವರ ಮೇಲೆ ಪ್ರಮಾಣ ಮಾಡುತ್ತೇನೆ. ನೀವು ಭಾರತದ ಗಡಿಯವರೆಗೆ ಸಹ ಸುರಕ್ಷತೆಯನ್ನು ಕಂಡುಕೊಳ್ಳುವುದಿಲ್ಲ ಎಂದು ಒಮರಿ ಪಾಕಿಸ್ತಾನ ಸೈನ್ಯಕ್ಕೆ ಎಚ್ಚರಿಕೆ ನೀಡಿದ್ದಾರೆ.
ಇಸ್ಲಾಮಾಬಾದ್‌ನ ನಾಗರಿಕ ಮತ್ತು ಮಿಲಿಟರಿ ನಾಯಕತ್ವವನ್ನು ಟೀಕಿಸಿದ ಅವರು, ಪಾಕಿಸ್ತಾನಿ ಮಿಲಿಟರಿ ಆಡಳಿತವು ಇತರರ ಇಚ್ಛೆಯಂತೆ ಎಲ್ಲವನ್ನು ಮಾಡುತ್ತದೆ. ಒಂದು ಕಾಲದಲ್ಲಿ ಅಫ್ಘಾನಿಸ್ತಾನ ಕಳೆದುಕೊಂಡಿದ್ದ ಡುರಾಂಡ್ ರೇಖೆಯ ಆಚೆಗಿನ ಪ್ರದೇಶಗಳು ಅಂತಿಮವಾಗಿ ಅಫ್ಘಾನ್ ಮರಳಿ ಪಡೆಯಬಹುದು ಎನ್ನುವ ಪರಿಸ್ಥಿತಿ ಈಗ ನಿರ್ಮಾಣವಾಗಿದೆ ಎಂದರು.
ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಗಡಿಯಲ್ಲಿ ಹೆಚ್ಚಿದ ಉದ್ವಿಗ್ನತೆಯ ಮಧ್ಯೆ ಒಮರಿ ಈ ಎಚ್ಚರಿಕೆ ನೀಡಿದ್ದಾರೆ. ಇಸ್ಲಾಮಾಬಾದ್ 48 ಗಂಟೆಗಳ ಕದನ ವಿರಾಮವನ್ನು ಉಲ್ಲಂಘಿಸಿದೆ ಎಂದು ಕಾಬೂಲ್ ಆರೋಪಿಸಿದೆ. ಇದು ಸುಮಾರು ಒಂದು ವಾರದ ಹೋರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು. ಇದರಿಂದಾಗಿ ಎರಡೂ ಕಡೆಗಳಲ್ಲಿ ಹಲವಾರು ಸೈನಿಕರು ಮತ್ತು ನಾಗರಿಕರು ಸಾವನ್ನಪ್ಪಿದರು.
