ಉದಯವಾಹಿನಿ , ಇಂಡೋನೇಷಿಯಾ : ಪ್ರೀತಿಗೆ ಕಣ್ಣಿಲ್ಲ ಎಂಬ ಮಾತಿದೆ. ಪ್ರೀತಿ ಮಾಡುವ ಬಹುತೇಕ ಜೋಡಿಗಳಿಗೆ ಜಾತಿ, ವಯಸ್ಸು, ಶ್ರೀಮಂತ- ಬಡವ, ಬಣ್ಣಗಳ ಬೇಧ ಎಲ್ಲ ಎನ್ನುತ್ತಾರೆ. ಅಂತೆಯೇ ಇಂಡೋನೇಷ್ಯಾ ಮೂಲದ 74 ವರ್ಷದ ವ್ಯಕ್ತಿಯೊಬ್ಬ ತನಗಿಂತ 50 ವರ್ಷ ಚಿಕ್ಕವಳಾಗಿರುವ ಮಹಿಳೆಯನ್ನು ಮದುವೆಯಾಗಿದ್ದಾರೆ. ಮದುವೆಯನ್ನು ತುಂಬಾ ಗ್ರ್ಯಾಂಡ್ ಆಗಿ ಲಕ್ಶೂರಿಯಾಗಿ ಮಾಡುವ ಸಲುವಾಗಿ ಈ ಮದುವೆಗಾಗಿ ಬರೋಬ್ಬರಿ ಮೂರು ಬಿಲಿಯನ್ ರೂಪಾಯಿ ಅಂದರೆ ಭಾರತದ ಕರೆನ್ಸಿ ಮೌಲ್ಯದಲ್ಲಿ 1.5 ಕೋಟಿ ರೂ. ತನಕವು ಭಾರಿ ಮೊತ್ತವನ್ನು ಆತ ಖರ್ಚು ಮಾಡಿದ್ದಾನೆ. ಆದರೆ ಈ ನವ ದಂಪತಿಗಳು ತಮ್ಮ ಮದುವೆಯನ್ನು ಅದ್ಧೂರಿಯಾಗಿ ಮಾಡಿಕೊಂಡರು ಕೂಡ ಫೋಟೊ ಗ್ರಾಫರ್ ಗೆ ಮಾತ್ರ ಹಣ ನೀಡಲೇ ಇಲ್ಲ ಎನ್ನುವ ದೂರು ಇದೀಗ ಕೇಳಿಬಂದಿದೆ. ಹೀಗಾಗಿ ದಂಪತಿಗಳ ವಿರುದ್ಧ ಛಾಯಾಗ್ರಹಕ ಕಂಪೆನಿಯೂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಹೀಗಾಗಿ ಪೊಲೀಸರು ಈ ಪ್ರಕರಣವನ್ನು ತನಿಖೆ ಮಾಡುತ್ತಿದ್ದು ಸದ್ಯ ಈ ಸುದ್ದಿ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
ಅ.1ರಂದು ಜಾವಾ ಪ್ರಾಂತ್ಯದ ಪ್ಯಾಸಿಟನ್ ರೀಜೆನ್ಸಿಯಲ್ಲಿ ಅದ್ಧೂರಿ ವಿವಾಹ ಸಮಾ ರಂಭ ನಡೆದಿದ್ದು ಅದಕ್ಕಾಗಿ ವರನು ಬರೋಬ್ಬರಿ ಒಂದು ಬಿಲಿಯನ್ ರೂಪಾಯಿ ಖರ್ಚು ಮಾಡಿ ದ್ದಾನೆ. ವಿವಾಹ ಎಂದ ಮೇಲೆ ಮದುವೆ ನೆನಪಿಗಾಗಿ ಫೋಟೊ,ವಿಡಿಯೊ ಇರಲೇ ಬೇಕು. ಹೀಗಾಗಿ ಫೋಟೊಗ್ರಫಿ ಮತ್ತು ವೀಡಿಯೊಗ್ರಫಿ ಮಾಡಲು ಒಂದು ಕಂಪೆನಿಗೆ ಕಾಂಟ್ರ್ಯಾಕ್ಟ್ ನೀಡಲಾಗಿದೆ. ಅಷ್ಟು ಮಾತ್ರವಲ್ಲದೆ ಕಾರ್ಯಕ್ರಮಕ್ಕೆ ಬಂದ ಅತಿಥಿಗಳಿಗೂ ಹಣವನ್ನು ನೀಡಲಾಗಿದೆ. ಆದರೆ ಫೋಟೊಗ್ರಾಫ್ ಕಂಪೆನಿಯೂ ಹಣ ನೀಡದೆ ಈತ ಯಾಮಾರಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
