ಉದಯವಾಹಿನಿ , ವಾಷಿಂಗ್ಟನ್: ಮಾದಕ ವಸ್ತುಗಳನ್ನು ಹೊತ್ತು ಅಮೆರಿಕಾದತ್ತ ಪ್ರಯಾಣಿಸುತ್ತಿದ್ದ ಸಬ್ಮೆರಿನ್ ಮೇಲೆ ದಾಳಿ ನಡೆಸಿದ್ದು, ಘಟನೆಯಲ್ಲಿ ಇಬ್ಬರು ಹತರಾಗಿದ್ದಾರೆ ಎಂದು ಶನಿವಾರ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಚಿತಪಡಿಸಿದ್ದಾರೆ. ಈ ನೌಕೆಯು ಫೆಂಟನೈಲ್ ಹಾಗೂ ಇತರ ಮಾದಕ ವಸ್ತುಗಳನ್ನು ಸಾಗಿಸುತ್ತಿರುವುದಾಗಿ ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು ಎಂದು ಟ್ರಂಪ್ ತಿಳಿಸಿದ್ದಾರೆ.
ಮಾದಕ ವಸ್ತುಗಳನ್ನು ತುಂಬಿಕೊಂಡು ಅಮೆರಿಕದತ್ತ ಬರುತ್ತಿದ್ದ ಬೃಹತ್ ನೌಕೆಯನ್ನು ನಾಶಪಡಿಸಿರುವುದು ನನಗೆ ಗೌರವದ ವಿಷಯ. ಘಟನೆಯಲ್ಲಿ ಬದುಕುಳಿದ ಇಬ್ಬರು ಭಯೋತ್ಪಾದಕರ ಬಂಧನ ಮತ್ತ ವಿಚಾರಣೆಗಾಗಿ ಅವರ ಮೂಲದೇಶಗಾಳದ ಎಕ್ವೆಡಾರ್ ಮತ್ತು ಕೊಲಂಬಿಯಾಗೆ ರವಾನಿಸಲಾಗಿದೆ,” ಎಂದು ಸೋಷಿಯಲ್ ಮಿಡಿಯಾದಲ್ಲಿ ಟ್ರಂಪ್ ಬರೆದುಕೊಂಡಿದ್ದಾರೆ.
ಈ ಸಬ್ಮೆರಿನ್ ದೇಶದ ತೀರಕ್ಕೆ ತಲುಪಿದ್ದರೆ ಕನಿಷ್ಠ 25,000 ಅಮೆರಿಕನ್ ಜನರು ಸಾವಿಗೀಡಾಗುತ್ತಿದ್ದರು. ಈ ದಾಳಿಯಲ್ಲಿ ಯಾವುದೇ ಅಮೆರಿಕ ಪಡೆಗಳಿಗೆ ಹಾನಿಯಾಗಿಲ್ಲ. ನಾನು ಅಧಿಕಾರದಲ್ಲಿರುವವರೆಗೆ ಜಲಮಾರ್ಗ ಅಥವಾ ಭೂಮಾರ್ಗಗಳ ಮೂಲಕ ಅಕ್ರಮ ಮಾದಕ ವಸ್ತು ಸಾಗಾಣೆಗೆ ಅಮೆರಿಕ ಬಿಡುವುದಿಲ್ಲ ಎಂದು ಟ್ರಂಪ್ ಹೇಳಿದ್ದಾರೆ. ದಾಳಿಯಲ್ಲಿ ಬದುಕುಳಿದ ಇಬ್ಬರೂ ತಮ್ಮ ತಮ್ಮ ದೇಶಗಳಿಗೆ ತಲುಪಿದ್ದಾರೆ ಎಂದು ಎಕ್ವೆಡಾರ್ ಮತ್ತು ಕೊಲಂಬಿಯಾದ ಅಧಿಕಾರಿ ತಿಳಿಸಿವೆ. ನಾರ್ಕೋ ಜಲಾಂತರ್ಗಾಮಿ ನೌಕೆಯಲ್ಲಿ ಸೆರೆಸಿಕ್ಕ ಕೋಲಂಬಿಯಾದ ವ್ಯಕ್ತಿ ದೇಶಕ್ಕೆ ಮರಳಿದ್ದು, ಆತ ಬದುಕುಳಿದಿದ್ದಕ್ಕೆ ನಮಗೆ ಸಂತೋಷವಾಗಿದೆ. ವಿಚಾರಣೆ ನಡೆಸಿ ಅವನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕೊಲಂಬಿಯಾ ಅಧ್ಯಕ್ಷ ಗುಸ್ತಾವೋ ಪೆಟ್ರೋ ತಿಳಿಸಿದ್ದಾರೆ.
