ಉದಯವಾಹಿನಿ , ಗಾಜಾ: ಕೆಲ ದಿನಗಳ ಹಿಂದೆ ಆ ಯುದ್ಧ ನಿಲ್ಲಿಸಿದ್ದೆ, ಈ ಯುದ್ಧ ನಿಲ್ಲಿಸಿದೆ ಎಂದು ಬೀಗುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್​​ ಟ್ರಂಪ್​ ನಿಜವಾಗಿಯೂ ಯುದ್ಧಗಳನ್ನು ನಿಲ್ಲಿಸುತ್ತಿಲ್ಲ ಬದಲಾಗಿ, ಕೇವಲ ಬಿಲ್ಡಪ್​ಗೊಸ್ಕರಾ ಹೇಳಿಕೆ ಕೊಡುತ್ತಿದ್ದಾನಾ ಎನ್ನುವ ಸಂದೇಹ ಮೂಡುತ್ತಿದೆ. ಯಾಕಂದ್ರೆ ಆತ ಹೇಳುತ್ತಿರುವ ಅದೇಷ್ಟೋ ಯುದ್ಧಗಳು ಆತನಿಂದ ನಿಂತ್ತಿಲ್ಲ;
ಹೌದು, ಮೊನ್ನೆ ಮೊನ್ನೆ ತಾನೇ ಇಸ್ರೇಲ್ ಮತ್ತು ಹಮಾಸ್ ನಡುವೆ ಕದನ ವಿರಾಮವನ್ನ ಘೋಷಣೆ ಮಾಡಿದ್ದ ಬೀಗುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್​​ ಟ್ರಂಪ್​, ಇಸ್ರೇಲ್​ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ್ದರು. ಇದರ ತರುವಾಯು ಈಜಿಪ್ಟ್​​ನಲ್ಲಿ ವಿವಿಧ ರಾಷ್ಟ್ರಗಳ ಸಭೆ ನಡೆಸಿದ್ದ ಟ್ರಂಪ್​, ಗಾಜಾಗಾಗಿ ವಿಶೇಷ ಯೋಜನೆ ರೂಪಿಸುತ್ತಿರುವುದಾಗಿಯೂ ತಿಳಿಸಿದ್ದರು. ಆದ್ರೆ ಅಸಲಿಗೆ ಇಸ್ರೇಲ್ ಮತ್ತು ಹಮಾಸ್ ನಡುವೆ ಕದನ ವಿರಾಮ ನಡೆದಿದ್ದೀಯಾ ಎನ್ನುವ ಸಂಶಯ ಮೂಡುತ್ತಿದೆ!
ಇಸ್ರೇಲ್​ ಹಾಗೂ ಹಮಾಸ್​ ನಡುವಿನ ಟ್ರಂಪ್​ ಅವರ ಕದನ ವಿರಾಮ ಏನು ಕೆಲಸ ಮಾಡಿಲ್ಲ! ಯಾಕಂದ್ರೆ ಇಂದು ಇಸ್ರೇಲ್​ ಭದ್ರತಾ ಪಡೆಗಳು ಗಾಜಾದಲ್ಲಿ ಹಮಾಸ್​ ಪಡೆಗಳ ಮೇಲೆ ದಾಳಿ ಮಾಡಿದೆ ಎಂದು ವರದಿಯಾಗಿದೆ. ಇದಕ್ಕೂ ಮುನ್ನ ದಕ್ಷಿಣ ಗಾಜಾದ ರಫಾದಲ್ಲಿ ಹಮಾಸ್​ ಭಯೋತ್ಪಾದಕರು ಇಸ್ರೇಲಿ ಸೈನ್ಯದ ಮೇಲೆ ದಾಳಿ ಮಾಡಿದ್ದರು ಎನ್ನಲಾಗಿದೆ. ಆದಾಗ್ಯೂ, ದಾಳಿಯ ಕುರಿತು ಇಸ್ರೇಲ್ ಇನ್ನೂ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.
ಮುಂದುವರೆದು, ಇಸ್ರೇಲ್‌ನ ಚಾನೆಲ್ 12 ರ ವರದಿಯಂತೆ, ಐಡಿಎಫ್ ಗಾಜಾದ ರಫಾ ಪ್ರದೇಶದಲ್ಲಿ ವೈಮಾನಿಕ ದಾಳಿ ನಡೆಸಿದೆ. ಈ ದಾಳಿ, ಗಾಜಾ ಪಟ್ಟಿಯಲ್ಲಿ ಹಮಾಸ್ ಪ್ಯಾಲೆಸ್ಟೀನಿಯನ್ನರ ಮೇಲೆ ದಾಳಿ ನಡೆಸಲು ಇಸ್ರೇಲ್ ಯೋಜಿಸುತ್ತಿದೆ ಎಂದು ಅಮೆರಿಕದಿಂದ ಆರೋಪ ಕೇಳಿಬಂದ ನಂತರ ಸಂಭವಿಸಿದೆ. ಇನ್ನು ಟೈಮ್ಸ್ ಆಫ್ ಇಸ್ರೇಲ್ ವರದಿಯ ಪ್ರಕಾರ, ಗಾಜಾದ ರಫಾದಲ್ಲಿ ಇಸ್ರೇಲಿ ಪಡೆಗಳ ಮೇಲೆ ಉಗ್ರರು ನಡೆಸಿದ ಹಲ್ಲೆಗೆ ಪ್ರತಿಕ್ರಿಯೆಯಾಗಿ ಈ ದಾಳಿ ನಡೆದಿದೆಯೆಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

error: Content is protected !!