ಉದಯವಾಹಿನಿ , ಬ್ಯಾಂಕಾಕ್,: ಭಾರತ ಮೂಲದ ವ್ಯಕ್ತಿಯೊಬ್ಬ ಬ್ಯಾಂಕಾಕ್ನಲ್ಲಿ ಪಿಸ್ತೂಲ್ ಆಕಾರದ ಲೈಟರ್ ಹಿಡಿದು ಜನರನ್ನು ಬೆದರಿಸಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಪೊಲೀಸರು ಆ ವ್ಯಕ್ತಿಯನ್ನು ಬಂಧಿಸಿದ್ದಾರೆ.ಆತನನ್ನು ಸಾಹಿಲ್ ರಾಮ್ ಥಡಾನಿ ಎಂದು ಗುರುತಿಸಲಾಗಿದೆ. ವಿಡಿಯೋದಲ್ಲಿ ಆತ ರಸ್ತೆಯಲ್ಲಿ ನೃತ್ಯ ಮಾಡುತ್ತಾ ದಾರಿಹೋಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವುದನ್ನು ಕಾಣಬಹುದು.ಜನರ ಮೇಲೆ ಕೂಗುತ್ತಾ ಪಿಸ್ತೂಲ್ ಆಕಾರದ ಲೈಟರ್ ಅನ್ನು ಅವರ ಕಡೆಗೆ ತೋರಿಸಿದ್ದಾನೆ. ಪೊಲೀಸರು ಎಳೆದೊಯ್ಯುವಾಗ ಆತ ಅಳುತ್ತಾ ಕ್ಷಮೆಯಾಚಿಸುತ್ತಿರುವುದನ್ನು ಕಾಣಬಹುದು.
