ಉದಯವಾಹಿನಿ , ಬಿಗ್ ಬಾಸ್ ಮೊದಲ ಫಿನಾಲೆ ಕಾರ್ಯಕ್ರಮದಲ್ಲಿ ರಕ್ಷಿತಾ ಶೆಟ್ಟಿ ನೀಡಿದ ಉತ್ತರಕ್ಕೆ ಅಶ್ವಿನಿ ಗೌಡ ಶಾಕ್ ಆದರೆ ಪ್ರೇಕ್ಷಕರು ಚಪ್ಪಾಳೆ ತಟ್ಟಿ ಮೆಚ್ಚುಗೆ ಸೂಚಿಸಿದ್ದಾರೆ. ನಿರೂಪಣೆ ಮತ್ತು ಅಡುಗೆ ಟಾಸ್ಕ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಕ್ಕೆ ಜಾಹ್ನವಿ ಅವರನ್ನು ಫೈನಲ್‌ಗೆ ಆಯ್ಕೆ ಮಾಡಿದ ವಿಚಾರದ ಬಗ್ಗೆ ಸುದೀಪ್ ಅವರು ಮನೆಯವರಲ್ಲಿ ಪ್ರಶ್ನೆ ಕೇಳುತ್ತಾರೆ.
ಈ ವೇಳೆ ರಕ್ಷಿತಾ ಮಾತನಾಡಿ, ಅಶ್ವಿನಿ ಅವರು ನ್ಯಾಯವಾಗಿ ಆಟ ಆಡುತ್ತಿಲ್ಲ. ಒಂಟಿ ಟಾಸ್ಕ್‌ನಲ್ಲಿದ್ದಾಗ ನಾನು ಧನುಶ್ ಅವರ ಆಟವನ್ನು ನೋಡಿದ್ದೇನೆ. ಅವರು ಫೈನಲ್ ಆಗಬೇಕಿತ್ತು. ಆದರೆ ಎಲ್ಲರೂ ಅಶ್ವಿನಿ ಅವರ ಮಾತಿಗೆ ಧ್ವನಿಗೂಡಿಸಿದ್ದರಿಂದ ನಾನು ಹೇಳಲು ಹೋಗಿಲ್ಲ. ನಂತರ ಫೈನಲ್ ಪ್ರವೇಶಕ್ಕೆ ಇರುವ ಟಾಸ್ಕ್‌ನಲ್ಲಿ ಧನುಶ್ 70% ಪ್ರಯತ್ನ ಇದ್ದರೆ ಅಶ್ವಿನಿ ಅವರದ್ದು 30% ಪ್ರಯತ್ನ ಇತ್ತು. ಜಯಗಳಿಸಿದ ನಂತರ ಮೆಡಲ್ ಹಾಕುವಾಗ ಧನುಶ್ ಅವರನ್ನು ಕರೆಯಬೇಕಿತ್ತು. ಆದರೆ ಅವರು ಜಾಹ್ನವಿ ಅವರನ್ನು ಕರೆದು ಮೆಡಲ್ ಹಾಕಿಸಿಕೊಂಡಿದ್ದಾರೆ. ಇದು ನ್ಯಾಯವಾದ ಆಟ ಅಲ್ಲ ಎಂದು ಖಡಕ್ ಆಗಿಯೇ ಹೇಳಿದರು. ರಕ್ಷಿತಾ ನೀಡಿದ ಪ್ರತಿಕ್ರಿಯೆಗೆ ಅಶ್ವಿನಿ ಒಮ್ಮೆ ಶಾಕ್ ಆದರು. ನಂತರ ಸುದೀಪ್ ಅಶ್ವಿನಿ ಗೌಡ ಮನೆಯಲ್ಲಿ ʼUnstoppable Leaderʼ ಹೌದೇ ಎಂಬ ಪ್ರಶ್ನೆಗೆ ರಕ್ಷಿತಾ ಅವರು ‘Unfair Leader’ ಎಂದು ಉತ್ತರ ನೀಡುವ ಮೂಲಕ ಮತ್ತೊಮ್ಮೆ ಅಶ್ವಿನಿಗೆ ಶಾಕ್ ಕೊಟ್ಟರು.
