ಉದಯವಾಹಿನಿ, ಸಾಂಬಾರ ಪದಾರ್ಥಗಳ ರಾಣಿ ಎಂದೇ ಪ್ರಸಿದ್ಧಿಯಾಗಿರುವ ಏಲಕ್ಕಿಯೂ ಭಾರತೀಯ ಅಡುಗೆ ಮನೆಯಲ್ಲಿರುವ ಪ್ರಮುಖ ಮಸಾಲೆ ಪದಾರ್ಥಗಳಲ್ಲಿ ಒಂದು. ಈ ಏಲಕ್ಕಿಯ ನಿಯಮಿತ ಸೇವನೆಯಿಂದ ಆರೋಗ್ಯಕ್ಕೆ ಹತ್ತಾರು ಪ್ರಯೋಜನಗಳಿವೆ. ಸಾಂಬಾರ ಪದಾರ್ಥಗಳ ರಾಣಿ ಎಂದೇ ಕರೆಯಲಾಗುವ ಏಲಕ್ಕಿಯನ್ನು ಸಿಹಿ ತಿನಿಸುಗಳು, ಮಸಾಲೆಯುಕ್ತ ಭಕ್ಷ್ಯಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಊಟದ ನಂತರ ಏಲಕ್ಕಿಯನ್ನು ಜಗಿಯುವ ಅಭ್ಯಾಸದಿಂದ ನೀವು ಈ ಆರೋಗ್ಯ ಲಾಭಗಳನ್ನು ಪಡೆಯಬಹುದಾಗಿದೆ.
ಬಾಯಿಯ ದುರ್ವಾಸನೆಯನ್ನು ನಿವಾರಿಸುತ್ತದೆ: ಏಲಕ್ಕಿ ನೈಸರ್ಗಿಕ ಬಾಯಿಯ ಫ್ರೆಶ್ನರ್ ಆಗಿದ್ದು, ಏಲಕ್ಕಿಯನ್ನು ಅಗಿಯುವುದರಿಂದ ಲಾಲಾರಸವನ್ನು ಉತ್ತೇಜಿಸುತ್ತದೆ. ಇದರಲ್ಲಿರುವ ಗುಣವು ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಲು ಸಹಕಾರಿಯಾಗಿದೆ. ಸಿಹಿ ಪದಾರ್ಥಗಳ ಸೇವನೆಯನ್ನು ಕಡಿಮೆ ಮಾಡುತ್ತದೆ: ಏಲಕ್ಕಿಯ ನೈಸರ್ಗಿಕ ಸಿಹಿ ಮತ್ತು ಸ್ವಲ್ಪ ಖಾರದ ರುಚಿಯನ್ನು ಹೊಂದಿದೆ. ಊಟದ ನಂತರ ಏಲಕ್ಕಿ ಸೇವನೆಯು ಸಿಹಿತಿಂಡಿಗಳು ಅಥವಾ ಸಕ್ಕರೆ ತಿಂಡಿಗಳ ಬಯಕೆಯನ್ನು ಕಡಿಮೆ ಮಾಡುತ್ತದೆ.
