ಉದಯವಾಹಿನಿ, ಮಹಿಳೆಯರು ಶೃಂಗಾರ ಪ್ರೀಯರು. ಚಿಕ್ಕ ಕಾರ್ಯಕ್ರಮವಿರಲಿ ತುಂಬಾ ಚೆನ್ನಾಗಿ ತಯಾರಾಗುತ್ತಾರೆ. ಅದರಲ್ಲಿಯೂ ಈಗಿನ ಹೆಣ್ಣು ಮಕ್ಕಳಿಗೆ ಮೇಕಪ್ ಮಾಡಿಕೊಳ್ಳಲು ಹತ್ತು ಹಲವಾರು ಪ್ರಾಡಕ್ಟ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು ಪ್ರತಿದಿನ ಒಂದೊಂದು ರೀತಿ ಮೇಕಪ್ ಮಾಡಿಕೊಳ್ಳುವ ಅವಕಾಶವಿದೆ. ಪಾರ್ಟಿ, ಆಫೀಸ್ ಹೀಗೆ ಬೇರೆ ಬೇರೆ ಕಡೆ ಹೋಗುವಾಗ ವಿಭಿನ್ನವಾಗಿ ತಯಾರಾಗುವ ಅವಕಾಶ ಅವರಿಗಿದೆ. ಇದು ಅವರ ಅಂದವನ್ನು ಮತ್ತಷ್ಟು ಇಮ್ಮಡಿಗೊಳಿಸುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಕೆಲವರು ಪ್ರತಿನಿತ್ಯ ಮೇಕಪ್ ಮಾಡಿಕೊಳ್ಳುತ್ತಾರೆ ಮಾತ್ರವಲ್ಲ, ಅದರಲ್ಲಿಯೂ ವಿಶೇಷವಾಗಿ, ಈಗಿನ ಹೆಣ್ಣು ಮಕ್ಕಳು ಕಣ್ಣಿನ ಮೇಕಪ್ ಗೆ ಹೆಚ್ಚಿನ ಆದ್ಯತೆ ನೀಡಿರುತ್ತಾರೆ. ಅದು ಅವರ ಅಂದಕ್ಕೆ ಮತ್ತಷ್ಟು ಮೆರಗು ನೀಡುತ್ತದೆ ಎಂಬುದು ಹೆಂಗಳೆಯರ ನಂಬಿಕೆ. ಆದರೆ ದಿನನಿತ್ಯ ಕಾಜಲ್, ಮಸ್ಕರಾ ಮತ್ತು ಐಲೈನರ್ ಬಳಕೆ ಮಾಡುವುದು ಒಳ್ಳೆಯದೇ? ಕಣ್ಣಿನ ಆರೋಗ್ಯಕ್ಕೆ ) ತೊಂದರೆಯಾಗುತ್ತದೆಯೇ? ಈ ಬಗ್ಗೆ ತಜ್ಞರ ಅಭಿಪ್ರಾಯವೇನು? ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ರಾಸಾಯನಿಕಗಳಿಂದ ಕಣ್ಣುಗಳಿಗೆ ಹಾನಿ
ಕಣ್ಣಿಗೆ ನಾನಾ ರೀತಿಯಲ್ಲಿ ಮೇಕಪ್ ಮಾಡುವ ಅನೇಕ ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವುದನ್ನು ನೀವು ಕೂಡ ಗಮನಿಸಿರಬಹುದು. ಇದನ್ನು ನೋಡಿ ಹಲವರು ಟ್ರೈ ಮಾಡುತ್ತಾರೆ. ಮಾತ್ರವಲ್ಲ, ಕೆಲವು ಮಹಿಳೆಯರು ಪ್ರತಿನಿತ್ಯವೂ ಒಂದೊಂದು ರೀತಿ ಐಲೈನರ್ ಮತ್ತು ಐಶ್ಯಾಡೋ ಗಳನ್ನು ಬಳಸುತ್ತಾರೆ. ಇದು ಅವರನ್ನು ಸುಂದರವಾಗಿ ಕಾಣುವಂತೆ ಮಾಡುತ್ತದೆ. ಆದರೆ ಈ ಉತ್ಪನ್ನಗಳನ್ನು ತಯಾರಿಸುವಾಗ ಅನೇಕ ರಾಸಾಯನಿಕಗಳನ್ನು ಸೇರಿಸಲಾಗುತ್ತದೆ, ಇದು ಅವರ ಕಣ್ಣುಗಳ ಮೇಲೂ ಪರಿಣಾಮ ಬೀರುತ್ತದೆ. ಹೌದು. ನೀವು ಪ್ರತಿನಿತ್ಯ ಬಳಸುವ ಕಾಜಲ್, ಐಲೈನರ್ ಮತ್ತು ಇತರ ಮೇಕಪ್ ಉತ್ಪನ್ನಗಳು ಅನೇಕ ರಾಸಾಯನಿಕಗಳನ್ನು ಒಳಗೊಂಡಿದ್ದು ಇವುಗಳನ್ನು ಪ್ರತಿದಿನ ಬಳಸುವುದರಿಂದ ಕಣ್ಣುಗಳಿಗೆ ಹಾನಿಯಾಗುತ್ತದೆ.
