ಉದಯವಾಹಿನಿ, ದೀಪಗಳ ಹಬ್ಬ ದೀಪಾವಳಿ ಇನ್ನೇನು ಕೆಲವೇ ದಿನ ಬಾಕಿ ಇದೆ. ಹಬ್ಬ ಎಂದಾಗ ಅಲ್ಲಿ ತರೇಹವಾರಿ ಅಡುಗೆಗಳು, ಸಿಹಿ ತಿಂಡಿಗಳು ಇದ್ದೇ ಇರುತ್ತದೆ. ಮನೆಗೆ ನೆಂಟರಿಷ್ಟರು ಬರುವ ಸಂಭ್ರಮ ಒಂದೆಡೆಯಾದರೆ ಅವರಿಗೆ ವಿಧ ವಿಧವಾದ ಸ್ನ್ಯಾಕ್ಸ್‌ಗಳು, ತಿಂಡಿಗಳನ್ನು ಮಾಡಿ ಬಡಿಸುವ ಸಂಭ್ರಮ ಇನ್ನೊಂದೆಡೆ. ಇನ್ನು ಕೆಲವು ಕಡೆ ಹಬ್ಬದ ಸಮಯದಲ್ಲೇ ಪಾರ್ಟಿಗಳನ್ನು ಆಯೋಜಿಸಲಾಗುತ್ತದೆ.
ಮುಂದುವರೆದು, ಸೆಲೆಬ್ರಿಟಿಗಳು ಮಾತ್ರವಲ್ಲದೆ ಮನೆ ಮಂದಿ ಕೂಡ ಹಬ್ಬದ ಪಾರ್ಟಿಗಳನ್ನು ಆಯೋಜಿಸುತ್ತಾರೆ. ಈ ಸಮಯದಲ್ಲಿ ಎಲ್ಲಾ ವಿಧದ ಆಹಾರಗಳನ್ನು ತಯಾರಿಸಲಾಗುತ್ತದೆ. ಅದರಲ್ಲೂ ಚಾಟ್ ಅನ್ನು ಪ್ರತಿಯೊಬ್ಬರೂ ಇಷ್ಟಪಡುತ್ತಾರೆ. ಚಾಟ್ ಭಾರತೀಯ ಪಾಕ ಪದ್ಧತಿಯಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿದೆ. ಹಾಗಾಗಿ ಪ್ರತಿ ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಚಾಟ್‌ಗೆ ಪ್ರತ್ಯೇಕ ಸ್ಥಾನವಿದೆ.
ರುಚಿಕರ, ಬಲು ರುಚಿಕರ ಈ…
ಚಾಟ್ ಅನ್ನು ಇನ್ನೂ ರುಚಿಕರ, ವಿಶೇಷವನ್ನಾಗಿ ಮಾಡುವುದು ಫ್ಲೇವರ್‌ಗಳಾಗಿವೆ. ಚಾಟ್ ಮಸಾಲೆ, ಲಿಂಬೆ ರಸ ಹಾಗೂ ಚಟ್ನಿ ಚಾಟ್‌ನ ರುಚಿಯನ್ನು ಹೆಚ್ಚಿಸುತ್ತವೆ. ಚಾಟ್ ರೆಸಿಪಿಯಲ್ಲಿ ಚಟ್ನಿಗೆ ವಿಶೇಷ ಸ್ಥಾನವಿದೆ. ಹುಣಸೆ ಹಣ್ಣಿನ ಚಟ್ನಿ ಹುಳಿ ರುಚಿ ಸ್ವಾದವನ್ನು ನೀಡುತ್ತದೆ, ಇನ್ನು ಹಸಿಮೆಣಸಿನ ಚಟ್ನಿ ಇನ್ನಷ್ಟು ಕಿಕ್ ಅನ್ನು ಉಂಟುಮಾಡುತ್ತದೆ. ಅದ್ರಂತೆ, ಈ ಮೊಸರು ಚಾಟ್‌ಗೆ ಒಂದು ಬೇಸ್‌ನಂತೆ ಕೆಲಸ ಮಾಡುತ್ತದೆ ಹಾಗೂ ಖಾರದ ರುಚಿಯನ್ನು ಬ್ಯಾಲೆನ್ಸ್ ಮಾಡುತ್ತದೆ.
ಅದ್ರಂತೆ, ಬೇರೆ ಬೇರೆ ಸಾಮಾಗ್ರಿಗಳ ಸಮ್ಮಿಶ್ರಣದಿಂದ ಚಾಟ್ ಅನ್ನು ತಯಾರಿಸಲಾಗುತ್ತದೆ. ಗರಿಗರಿಯಾದ ಪೂರಿ, ಗರಿಗರಿ ಸೇವ್, ಮೃದು ಆಲೂಗಡ್ಡೆ ಹಾಗೂ ಈರುಳ್ಳಿಯನ್ನು ಚಾಟ್ ಒಳಗೊಂಡಿರುತ್ತದೆ. ಇಂದಿನ ಲೇಖನದಲ್ಲಿ ಬರೇ 15 ನಿಮಿಷಗಳಲ್ಲಿ ತಯಾರಿಸಬಹುದಾದ ರುಚಿಕರ ಚಾಟ್ ರೆಸಿಪಿಗಳನ್ನು
ಹಬ್ಬದ ಸಮಯದಲ್ಲಿ ದಹಿ ಭಲ್ಲಾಗೆ ಬೇಡಿಕೆ ಹೆಚ್ಚಿದೆ. ಉದ್ದಿನ ಬೇಳೆಯಿಂದ ಮೃದು ದಹಿ ಭಲ್ಲಾ ತಯಾರಿಸಲಾಗುತ್ತದೆ ಹಾಗೂ ಖಾರವಾದ ಸಿಹಿಯಾದ ಚಟ್ನಿಯೊಂದಿಗೆ, ಚಾಟ್ ಮಸಾಲೆ ಸೇರಿಸಿ ಸರ್ವ್ ಮಾಡಲಾಗುತ್ತದೆ.
