ಉದಯವಾಹಿನಿ, ಚಂಡೀಗಢ: ದೀಪಾವಳಿ ಹಬ್ಬದ ಅಂಗವಾಗಿ ಅನೇಕ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಗಿಫ್ಟ್ ನೀಡುತ್ತಾರೆ. ಸಿಹಿತಿಂಡಿ, ಪಟಾಕಿ, ಕುಕ್ಕರ್ ಇತ್ಯಾದಿ ಉಡುಗೊರೆ ನೀಡಬಹುದು. ಫಾರ್ಮಾ ಕಂಪನಿಯ ಮಾಲೀಕರು ದೀಪಾವಳಿ ಉಡುಗೊರೆಯಾಗಿ ತಮ್ಮ ಉದ್ಯೋಗಿಗಳಿಗೆ 51 ಐಷಾರಾಮಿ ಕಾರುಗಳನ್ನು ಹಸ್ತಾಂತರಿಸಿದ್ದಾರೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಬೆರಗುಗೊಂಡಿದ್ದಾರೆ. ವೈರಲ್ ವಿಡಿಯೊದಲ್ಲಿರುವ ಮಾಲೀಕರು MITS ಗುಂಪಿನ ಸಂಸ್ಥಾಪಕ ಮತ್ತು ಅಧ್ಯಕ್ಷ ಎಂಕೆ ಭಾಟಿಯಾ, ಅವರು ತಮ್ಮ ಉದ್ಯೋಗಿಗಳಿಗೆ ದುಬಾರಿ ಸ್ಕಾರ್ಪಿಯೋ ಎಸ್‌ಯುವಿಗಳನ್ನು ಗಿಫ್ಟ್ ಮಾಡಿದ್ದಾರೆ.

ಕಂಪನಿಯು ತನ್ನ ಚಂಡೀಗಢ ಕೇಂದ್ರದಲ್ಲಿ ದೀಪಾವಳಿಯನ್ನು ಅದ್ಧೂರಿಯಾಗಿ ಆಚರಿಸಿದ ನಂತರ MITS ಗುಂಪಿನ ಅತ್ಯುತ್ತಮ ಕಾರ್ಯಕ್ಷಮತೆಯ ಉದ್ಯೋಗಿಗಳಿಗೆ ಐಷಾರಾಮಿ SUV ಗಳನ್ನು ಬಹುಮಾನವಾಗಿ ನೀಡಲಾಯಿತು. ಭಾಟಿಯಾ ಈ ಹಿಂದೆಯೂ ದೀಪಾವಳಿ ಹಬ್ಬದ ಸಂದರ್ಭದಲ್ಲಿ ತಮ್ಮ ಉದ್ಯೋಗಿಗಳಿಗೆ ವಾಹನಗಳನ್ನು ಉಡುಗೊರೆಯಾಗಿ ನೀಡಿದ್ದರು ಎಂದು ತಿಳಿದುಬಂದಿದೆ.

ದಿವಾಳಿತನದಿಂದ ಚೇತರಿಸಿಕೊಂಡ MITS ಮಾಲೀಕ, ಉದ್ಯೋಗಿಗಳಿಗೆ ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಭಾಟಿಯಾ ಅವರ ಈ ಕೊಡುಗೆಯು ಎಲ್ಲರನ್ನೂ ಅಚ್ಚರಿಗೊಳಿಸಿದೆ. ಇಂದು ದೊಡ್ಡ ಮಟ್ಟದಲ್ಲಿ ಬೆಳೆದಿರುವ ಭಾಟಿಯಾ, ಈ ಹಂತವನ್ನು ತಲುಪಲು ಬಹಳ ಶ್ರಮಪಟ್ಟಿದ್ದರು. ಅವರು ನಡೆದು ಬಂದ ಹಾದಿ ಅದು ಹೂವಿನ ಹಾದಿಯಾಗಿರಲಿಲ್ಲ. ಕಲ್ಲು-ಮುಳ್ಳುಗಳ ಹಾದಿಯಾಗಿತ್ತು. ಇಂದು MITS ಗುಂಪಿನ ಹೆಮ್ಮೆಯ ಸ್ಥಾಪಕ ಮತ್ತು ಅಧ್ಯಕ್ಷರಾಗಿರುವ ಭಾಟಿಯಾ, ಅವರ ವೈದ್ಯಕೀಯ ಕಂಪನಿಯು ಭಾರಿ ನಷ್ಟವನ್ನು ಅನುಭವಿಸಿದ ನಂತರ 2002ರಲ್ಲಿ ದಿವಾಳಿತನವನ್ನು ಎದುರಿಸಿದರು. ನಂತರ 2015 ರಲ್ಲಿ MITS ನಲ್ಲಿ ಯಶಸ್ಸನ್ನು ಕಂಡುಕೊಂಡರು ಮತ್ತು ಇಂದು ಅವರ ಹೆಸರಿನಲ್ಲಿ 12 ಕಂಪನಿಗಳಿವೆ.

Leave a Reply

Your email address will not be published. Required fields are marked *

error: Content is protected !!