ಉದಯವಾಹಿನಿ, ಮುಂಬೈ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಸಾಲ ಹಗರಣದಲ್ಲಿ ಪ್ರಮುಖ ಆರೋಪಿಯಾದ ದೇಶ ಭ್ರಷ್ಟ ವಜ್ರೋದ್ಯಮಿ ಮೆಹುಲ್ ಚೋಕ್ಸಿ ಯನ್ನು ಭಾರತಕ್ಕೆ ಹಸ್ತಾಂತರಿಸಲು ಬೆಲ್ಜಿಯಂ ಕೋರ್ಟ್ ಸಮ್ಮತಿಸಿದೆ. ಭಾರತಕ್ಕೆ ಹಸ್ತಾಂತರಿಸಲು ಯಾವುದೇ ಕಾನೂನು ಅಡ್ಡಿಯಿಲ್ಲ ಎಂದು ಆಂಟ್ವೆರ್ಪ್ ಕೋರ್ಟ್ ಹೇಳಿದೆ. ಇನ್ನು ಭಾರತಕ್ಕ ಹಸ್ತಾಂತರ ಬೆನ್ನಲ್ಲೇ ಮೆಹುಲ್ ಚೋಕ್ಸಿಗಾಗಿ ಮುಂಬೈನ ಆರ್ಥರ್ ರೋಡ್ ಜೈಲು ಸಜ್ಜಾಗಿದೆ. ಭಾರತಕ್ಕೆ ಬಂದ್ಮೇಲೆ ಆತನನ್ನ ಬ್ಯಾರಕ್ ನಂ.12ರಲ್ಲಿ ಇರಿಸಲಾಗುತ್ತೆ. ಅದರ ಒಳಾಂಗಣ ಫೋಟೋಗಳು ವೈರಲ್ ಆಗಿವೆ.
500 ಚದರ ಅಡಿ ಬ್ಯಾರಕ್ ಇದಾಗಿದ್ದು, 2 ಕೋಣೆಗಳಿವೆ. ಟಿವಿ, ವೆಸ್ಟರ್ನ್ ಟಾಯ್ಲೆಟ್, ವಾಶ್‌ರೂಮ್, ಪ್ಯಾಸೇಜ್, ಸೊಳ್ಳೆ ಪರದೆ, ಟ್ಯೂಬ್‌ಲೈಟ್, ಸೀಲಿಂಗ್ ಫ್ಯಾನ್ ಸೌಲಭ್ಯಗಳೊಂದಿಗೆ ಸಿಸಿಟಿವಿ ಕಣ್ಗಾವಲು ಇರಿಸಲಾಗಿದೆ.
