ಉದಯವಾಹಿನಿ, ಸಿಂಗಾಪುರ: ಗಾಜಾ ಯುದ್ಧ ಭೂಮಿಯಲ್ಲಿ ಒಂದು ಮನಕಲಕುವ ಘಟನೆ ನಡೆದಿದೆ. ಇದೀಗ ಈ ಘಟನೆ ವಿಶ್ವದಲ್ಲೇ ಸುದ್ದಿಯಾಗುತ್ತಿದೆ. ಕೆಲವರು ಮಾಡಿದ ಸಹಾಯಕ್ಕೆ ಕೃತಜ್ಞತೆ ಸಲ್ಲಿಸುವುದು ಬಿಡಿ, ಅದನ್ನು ನೆನಪಿಸಿಕೊಳ್ಳುವುದಿಲ್ಲ, ಆದರೆ ಇಲ್ಲೊಂದು ದಂಪತಿಗಳು ಒಂದು ದೇಶ ಯುದ್ಧ ಸಮಯದಲ್ಲಿ ಮಾಡಿದ ಸಹಾಯಕ್ಕೆ ಕೃತಜ್ಞತೆ ಸಲ್ಲಿಸಲು ತಮಗೆ ಹುಟ್ಟಿದ ಮಗುವಿಗೆ ಆ ದೇಶದ ಹೆಸರನ್ನು ಇಟ್ಟಿದ್ದಾರೆ. ಅಷ್ಟಕ್ಕೂ ಗಾಜಾಕ್ಕೆ ಸಹಾಯ ಮಾಡಿದ ದೇಶ ಯಾವುದು? ಎಂಬ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ. ಗಾಜಾದ ದಂಪತಿಗಳು ತಮ್ಮ ನವಜಾತ ಶಿಶುವಿಗೆ “ಸಿಂಗಾಪುರ” ಎಂದು ಹೆಸರಿಟ್ಟಿದ್ದಾರೆ. ಸಂಘರ್ಷದ ಸಮಯದಲ್ಲಿ ಸಿಂಗಾಪುರ್​​​ ಮೂಲದ ದತ್ತಿ ಸಂಸ್ಥೆಯು ನೀಡಿದ ಸಹಾಯಕ್ಕೆ ಈ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.
ಸಿಂಗಾಪುರನ ಗಿಲ್ಬರ್ಟ್ ಗೋ ನೇತೃತ್ವದ ಮಾನವೀಯ ತಂಡ ಲವ್ ಏಡ್ ಸಿಂಗಾಪುರ್ ಈ ಬಗ್ಗೆ ಹಂಚಿಕೊಂಡಿದೆ. ಈ ಮಗು ಅಕ್ಟೋಬರ್ 16 ರಂದು ಜನಿಸಿತು. ಮಗುವಿನ ತಂದೆ, ಗಾಜಾದಲ್ಲಿ ಲವ್ ಏಡ್ ಸಿಂಗಾಪುರ ನಡೆಸುತ್ತಿದ್ದ ಸೂಪ್ ಕಿಚನ್‌ನಲ್ಲಿ ಅಡುಗೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು, ಗಾಜಾದಲ್ಲಿ ಸಂಘರ್ಷಣೆ ವೇಳೆ ಈ ಕುಟುಂಬಕ್ಕೆ ಲವ್ ಏಡ್ ಸಿಂಗಾಪುರ್ ಸಹಾಯವನ್ನು ಮಾಡಿತ್ತು. ಮಗುವಿನ ಹೆಸರನ್ನು ಸಿಂಗಾಪುರ್ ಎಂದು ಇಡುವ ಮೂಲಕ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!