ಉದಯವಾಹಿನಿ, ದೊಡ್ಮನೆಯಲ್ಲಿ ಲವ್ ಸ್ಟೋರಿಗಳು ಕಾಮನ್ ಬಿಡಿ. ಅಷ್ಟೇ ಬೇಗ ದೂರ ದೂರ ಆಗೋದು ಇದೆ. ಕಾರಣ, ದೊಡ್ಮನೆಯಲ್ಲಿ ಏನ್ ಬೇಕಾದ್ರೂ ಆಗಬಹುದು. ಕೆಲವು ಲವ್ ಸ್ಟೋರಿಗಳು (Love Stories) ಮದುವೆ ಹಂತಕ್ಕೂ ಹೋಗುತ್ತವೆ. ಯಾವುದು ಸರಿಯಿಲ್ಲ ಅಂತ ಡಿವೋರ್ಸ್ ತೆಗೆದುಕೊಂಡಿರೋದು ಇದೆ. ಆದರೆ, ಪ್ರತಿ ವರ್ಷದ ಸೀಸನ್‌ಗಳಲ್ಲಿ ಒಂದಿಲ್ಲ ಒಂದು ಲವ್ ಸ್ಟೋರಿ ಇದ್ದೇ ಇರುತ್ತವೆ. ಈ ಸಲ ಸೂರಜ್ ಸಿಂಗ್ ಬಂದಿದ್ದಾರೆ. ಅದೆಷ್ಟು ಪ್ರೀತಿಯ ಕಥೆಗಳು ಹುಟ್ಟಿಕೊಳ್ತವೋ ಏನೋ. ಇದರ ಮಧ್ಯೆ ಕಾವ್ಯ ಶೈವ ಮತ್ತು ಗಿಲ್ಲಿ ನಟನ ತಮಾಷೆ ಜೋರಾಗಿಯೇ ಇದೆ. ಕಾವ್ಯ ಹೇಳಿದಂತೆ ಗಿಲ್ಲಿ ನಟ ಕೇಳ್ತಾರೆ. ಕಾವ್ಯ ಹೇಳಿದರು ಅಂತ ಗಿಲ್ಲಿ ನಟ ಇದೀಗ ಗಡ್ಡವನ್ನ ಸೇವ್ ಮಾಡಿಕೊಂಡಿದ್ದಾರೆ.
ಹಳೇ ಜೋಡಿ, ಹೊಸ ಲವ್ ಸ್ಟೋರಿ!
ಬಿಗ್ ಬಾಸ್ ಮನೆಯಲ್ಲಿ ಜಂಟಿ ಮತ್ತು ಒಂಟಿ ಅಂತ ಸದಸ್ಯರನ್ನ ಮನೆ ಒಳಗೆ ಕಳಿಸಲಾಗಿತ್ತು. ಆದರೆ, ಆ ಮೇಲೆ ಜಂಟಿ ಜೋಡಿಗಳ ಮಧ್ಯದ ಬೆಲ್ಟ್ ಅನ್ನ ಬಿಗ್ ಬಾಸ್ ಕಟ್ ಮಾಡಿದರು. ಆದರೆ, ಇದರಿಂದ ವ್ಯತ್ಯಾಸ ಏನೂ ಆಗ್ಲಿಲ್ಲ. ಎಲ್ಲರೂ ಬಿಂದಾಸ್ ಆಗಿಯೇ ಇದ್ದರು. ಆದರೆ, ವೈಲ್ಡ್ ಕಾರ್ಡ್ ಎಂಟ್ರಿ ಅಂತ ದೈತ್ಯ ರಘು, ರಿಶಾ ಗೌಡ, ಸೂರಜ್ ಸಿಂಗ್ ಎಂಟ್ರಿಕೊಟ್ರು. ಇದಾದ್ಮೇಲೆ ಹಲ್‌ಚಲ್ ಎದ್ದಿದೆ. ಟಾಸ್ಕ್ ಮೇಲೆ ಟಾಸ್ಕ್ ಶುರು ಆಗಿವೆ. ವೈಬ್ರೇಷ್ ಜಾಸ್ತಿನೇ ಇದೆ. ಸೂರಜ್ ಮತ್ತು ರಾಶಿಕಾ ಶೆಟ್ಟಿ ಕನೆಕ್ಟ್ ಆಗುವ ರೀತಿನೇ ಕಾಣಿಸುತ್ತಿದೆ.
