ಉದಯವಾಹಿನಿ, ಚಿಕ್ಕಮಗಳೂರು: ಎಚ್‌ಡಿ ಕುಮಾರಸ್ವಾಮಿ ಅವರ ಪೆನ್‌ಡ್ರೈವ್ ನಡೆ ಹೊಸದೇನಲ್ಲ. ಅದನ್ನು ಹಲವು ವರ್ಷಗಳಿಂದ ಎಲ್ಲರೂ ನೋಡಿದ್ದಾರೆ. ಯಾವ ಅಸೆಂಬ್ಲಿಯಲ್ಲಿ, ಯಾರ ಬಗ್ಗೆ ಗೊತ್ತಿಲ್ಲ ಅಂತಾ ಹೇಳಿದ್ದಾರೆ ಎಂಬುದು ನನಗಂತ್ರೂ ಗೊತ್ತಿಲ್ಲ. ಅವರಿಗೆ ಎಲ್ಲರ ಬಗ್ಗೆಯೂ ಗೊತ್ತು ಅಂತಾರೆ. ಮಾತೆತ್ತಿದರೆ ಎಲ್ಲರ ರಾಜೀನಾಮೆ ಕೇಳುತ್ತಾರೆ ಎಂದು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಕಿಡಿಕಾರಿದ್ದಾರೆ. ಶೃಂಗೇರಿಯ ಕಿಗ್ಗಾದಲ್ಲಿ ಮಾತನಾಡಿದ ಅವರು, ಜನಾರ್ದನ ರೆಡ್ಡಿ ಅವರ 150 ಕೋಟಿ ರೂ. ಹಗರಣದ ಆರೋಪ ಮಾಡಿದಾಗ ಅವರೇ ಮುಖ್ಯಮಂತ್ರಿಯಾಗಿದ್ದರು. ಆಗ ರಾಜೀನಾಮೆ ನೀಡಿ ತನಿಖೆ ಮಾಡಿಸಿಕೊಂಡಿದ್ರಾ? ಪ್ರಶ್ನಿಸಿದರು. ಯಾರು ಪೆನ್‌ಡ್ರೈವ್ ಇದೆ ಅಂತಾರೆ, ಅವರೇ ಈ ಬಗ್ಗೆ ಮಾಹಿತಿ ನೀಡಬೇಕಲ್ವಾ? ಅವರತ್ತಿರ ಪೆನ್‌ಡ್ರೈವ್ ಇದ್ಯಾ? ಇದ್ರೆ ಏಕೆ ಇಟ್ಟುಕೊಂಡಿದ್ದಾರೆ ಅನ್ನೋದು ಅವರಿಗೆ ಬಿಟ್ಟದ್ದು ಎಂದು ಹೇಳಿದರು. ಹತ್ತಾರು ವರ್ಷದಿಂದ ನೋಡಿದ್ದೇವೆ, ಎಲ್ಲರನ್ನೂ ಬೆದರಿಸೋದು, ಹುಷಾರ್ ಅನ್ನೋದು ಸಹಜ. ಅವರ ಈ ಪೆನ್ ಡ್ರೈವ್ ನಡೆ ಹೊಸದೇನಲ್ಲ. ಅದನ್ನು ಎಷ್ಟು ಗಂಭೀರವಾಗಿ ತೆಗೆದುಕೊಳ್ಳಬೇಕು, ಉದಾಸೀನ ಮಾಡ್ಬೇಕಾ? ಕೌಂಟರ್ ಕೊಡ್ಬೇಕಾ? ಗೊತ್ತಾಗ್ತಿಲ್ಲ. ಸೋಮವಾರ ರಾಜ್ಯಪಾಲರ ಭಾಷಣದ ಚರ್ಚೆ ಇದೇ ಆಗ ಹೇಳಲಿ. ಬಜೆಟ್ ಮಂಡನೆ ಆಗಿದೆ, ಆ ಭಾಷಣದಲ್ಲಾದರೂ ಹೇಳಬಹುದು. ಇಲ್ಲವೇ ಪ್ರತ್ಯೇಕವಾಗಿ ಬೇಕಾದರೂ ಹೇಳಬಹುದು ಅದು ಅವರಿಗೆ ಬಿಟ್ಟದ್ದು ಎಂದರು.
