ಉದಯವಾಹಿನಿ, ನವದೆಹಲಿ: ಭಯೋತ್ಪಾದಕ ಅಲ್-ಖೈದಾ ಕಾರ್ಯಕರ್ತನೊಬ್ಬ ಅಮೆರಿಕ ಮಿಲಿಟರಿಗೆ ನುಸುಳಿದ್ದ ಎನ್ನುವುದು ಗೊತ್ತೇ ಇರಲಿಲ್ಲ. 2001ರ ಸೆಪ್ಟೆಂಬರ್ 11ರಂದು ನಡೆದ ಭಯೋತ್ಪಾದಕ ದಾಳಿಯ ಬಳಿಕ ಅಲ್-ಖೈದಾ ಸಂಸ್ಥಾಪಕ ಒಸಾಮಾ ಬಿನ್ ಲಾಡೆನ್ ( Al- ಹುಡುಕಾಟ ಪ್ರಾರಂಭವಾಗಿತ್ತು. ಅಮೆರಿಕಕ್ಕೆ ಅತ್ಯಂತ ಬೇಕಾಗಿದ್ದ ಭಯೋತ್ಪಾದಕನಾಗಿದ್ದ ಒಸಾಮಾ ಬಿನ್ ಲಾಡೆನ್ ಟೋರಾ ಬೋರಾ ಬೆಟ್ಟಗಳ ಮೂಲಕ ಮಹಿಳೆಯ ವೇಷದಲ್ಲಿ ತಪ್ಪಿಸಿಕೊಂಡಿದ್ದ ಎಂದು ಮಾಜಿ ಸಿಐಎ ಅಧಿಕಾರಿ ಜಾನ್ ಕಿರಿಯಾಕೌ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
15 ವರ್ಷಗಳ ಕಾಲ ಸಿಐಎನಲ್ಲಿದ್ದ ಮತ್ತು ಪಾಕಿಸ್ತಾನದ ಸಿಐಎ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳ ಮುಖ್ಯಸ್ಥರಾಗಿದ್ದ ಕಿರಿಯಾಕೌ, ಅಮೆರಿಕದ ಮಿಲಿಟರಿಯೊಳಗೆ ಸೆಂಟ್ರಲ್ ಕಮಾಂಡರ್ ನ ಅನುವಾದಕ ಕಮಾಂಡರ್ ಆಗಿ ನುಸುಳಿರುವುದು ಅಲ್-ಖೈದಾ ಕಾರ್ಯಕರ್ತ ಎಂದು ನಮಗೆ ತಿಳಿದಿರಲಿಲ್ಲ ಎಂದು ಹೇಳಿದರು.
ಅಮೆರಿಕವು 2001ರಲ್ಲಿ ಅಫ್ಘಾನಿಸ್ತಾನದ ಮೇಲೆ ದಾಳಿ ನಡೆಸಲು ಕಾಯುತ್ತಿತ್ತು. ಸುಮಾರು ಒಂದು ತಿಂಗಳಿಗಿಂತ ಹೆಚ್ಚು ಕಾಲ ಸಿದ್ಧತೆ ನಡೆಸುತ್ತಿತ್ತು. ಒಂದು ತಿಂಗಳ ಅನಂತರ ತಿಳಿದಿರುವ ಅಲ್-ಖೈದಾ ತಾಣಗಳ ಮೇಲೆ ದಾಳಿ ಮಾಡಲು ಪ್ರಾರಂಭಿಸಿದೆವು. ಅಕ್ಟೋಬರ್‌ನಲ್ಲಿ ಅಲ್-ಖೈದಾ ನಾಯಕ ಒಸಾಮಾ ಬಿನ್ ಲಾಡೆನ್ ಅನ್ನು ಕೊಲ್ಲಲಾಗಿದೆ ಎಂದೇ ನಂಬಲಾಗಿತ್ತು.
ಅಮೆರಿಕದ ಮಿಲಿಟರಿಯೊಳಗೆ ಸೆಂಟ್ರಲ್ ಕಮಾಂಡರ್ ನ ಅನುವಾದಕ ಕಮಾಂಡರ್ ಆಗಿ ನುಸುಳಿರುವುದು ಅಲ್-ಖೈದಾ ಕಾರ್ಯಕರ್ತ ಎಂದು ನಮಗೆ ತಿಳಿದಿರಲಿಲ್ಲ. ಒಸಾಮಾ ಬಿನ್ ಲಾಡೆನ್ ಅನ್ನು ಸೆರೆ ಹಿಡಿಯಲು ಯೋಜನೆ ರೂಪಿಸಲಾಗಿತ್ತು. ಅವನನ್ನು ಪರ್ವತದಿಂದ ಕೆಳಗೆ ಬರಲು ಹೇಳಿದೆವು. ಆತ ಅನುವಾದಕರ ಮೂಲಕ ಬೆಳಗಿನ ಜಾವದವರೆಗೆ ಅವಕಾಶ ನೀಡಬಹುದೇ? ನಾವು ಮಹಿಳೆಯರು ಮತ್ತು ಮಕ್ಕಳನ್ನು ಸ್ಥಳಾಂತರಿಸಲು ಬಯಸುತ್ತೇವೆ ಎಂದು ಹೇಳಿದ. ಅನುವಾದಕರು ಜನರಲ್ ಫ್ರಾಂಕ್ಸ್ ಅವರಲ್ಲಿ ಇದಕ್ಕೆ ಒಪ್ಪಿಗೆ ನೀಡುವಂತೆ ಮನವೊಲಿಸಿದರು. ಆದರೆ ಬಿನ್ ಲಾಡೆನ್ ಮಹಿಳೆಯ ವೇಷ ಧರಿಸಿ ಪಿಕಪ್ ಟ್ರಕ್ ನ ಹಿಂಭಾಗದಲ್ಲಿ ಪಾಕಿಸ್ತಾನಕ್ಕೆ ಹೋಗಿ ತಪ್ಪಿಸಿಕೊಂಡನು.
