ಉದಯವಾಹಿನಿ, ಕ್ಯಾರಕಾಸ್ : ಜೂನ್‌ 12ರಂದು ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದ ವಿಮಾನ ದುರಂತ ಮಾಸುವ ಮುನ್ನವೇ ಅಂತಹದ್ದೇ ಮತ್ತೊಂದು ಅವಘಡ ನಡೆದಿದೆ. ವೆನೆಜುವೆಲಾದ ತಾಚಿರಾ ರಾಜ್ಯದ ಪಾರಾಮಿಲ್ಲೊ ವಿಮಾನ ನಿಲ್ದಾಣದಿಂದ ಟೇಕ್‌ ಆಫ್‌ ಆದ ಪಿಎ-31ಟಿ1 (PA-31T1) ಲಘು ವಿಮಾನ ಕೆಲವೇ ಕ್ಷಣಗಳಲ್ಲಿ ನೆಲಕ್ಕುರುಳಿದ್ದು, ಬೆಂಕಿ ಕಾಣಿಸಿಕೊಂಡು ಸುಟ್ಟು ಕರಕಲಾಗಿದೆ. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಸದ್ಯ ಘಟನೆಯ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಅವಳಿ ಎಂಜಿನ್ ಹೊಂದಿರುವ ಪೈಪರ್ ಪಿಎ-31ಟಿ1 ಅಕ್ಟೋಬರ್‌ 22ರ ಬೆಳಗ್ಗೆ 9:52ರ ಸುಮಾರಿಗೆ ಟೇಕ್‌ ಆಫ್‌ ಆದ ಸ್ವಲ್ಪ ಸಮಯದ ನಂತರ ನಿಯಂತ್ರಣ ಕಳೆದುಕೊಂಡು ರನ್‌ವೇಗೆ ಅಪ್ಪಳಿಸಿ ಬೆಂಕಿ ಹೊತ್ತಿಕೊಂಡಿತು. ಘಟನೆ ವೇಳೆ ವಿಮಾನದಲ್ಲಿ ಇಂಧನ ಭರ್ತಿ ಇದ್ದ ಕಾರಣ ಸ್ಫೋಟ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!