ಉದಯವಾಹಿನಿ, ಕರಾಚಿ: ಮಹಿಳಾ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ನಿರಾಶಾದಾಯಕ ಪ್ರದರ್ಶನ ತೋರುವ ತೋರಿದ್ದ ಪಾಕಿಸ್ತಾನ ತಂಡ ಒಂದೂ ಜಯಕಾಣದೇ ಅಭಿಯಾನ ಮುಗಿಸಿದ ಬೆನ್ನಲ್ಲೇ ಇದೀಗ ತಂಡದ ಮುಖ್ಯ ಕೋಚ್ ಮುಹಮ್ಮದ್ ವಾಸಿಮ್ ಅವರ ಒಪ್ಪಂದವನ್ನು ನವೀಕರಿಸದಿರಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ನಿರ್ಧರಿಸಿದೆ.
ಎಂಟು ತಂಡಗಳ ಸ್ಪರ್ಧಾ ಪಟ್ಟಿಯಲ್ಲಿ ಪಾಕಿಸ್ತಾನ ಏಳನೇ ಸ್ಥಾನದಲ್ಲಿದು, ಬಾಂಗ್ಲಾದೇಶ ತನ್ನ ಕೊನೆಯ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಕೊನೆಯ ಸ್ಥಾನಕ್ಕೆ ಇಳಿಯಬಹುದು. ಪಾಕ್‌ ಆಡಿದ ಏಳು ಪಂದ್ಯಗಳಲ್ಲಿ ನಾಲ್ಕರಲ್ಲಿ ಸೋಲು ಮತ್ತು ಉಳಿದ ಮೂರು ಪಂದ್ಯಗಳು ಮಳೆಯಲ್ಲಿ ರದ್ದಾಗಿದ್ದವು. ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರು ವಾಸೀಮ್ ಭರವಸೆ ನೀಡಿದಂತೆ ಪ್ರದರ್ಶನ ನೀಡದ ಕಾರಣ ನಿರಾಶೆಗೊಂಡಿದ್ದಾರೆ ಎಂದು ಪಿಸಿಬಿಯ ವಿಶ್ವಾಸಾರ್ಹ ಮೂಲವೊಂದು ತಿಳಿಸಿದೆ.
ಪಿಸಿಬಿ ಕಳೆದ ವರ್ಷ ವಾಸಿಮ್ ಅವರನ್ನು ಮಹಿಳಾ ತಂಡದ ಮುಖ್ಯ ಕೋಚ್‌ ಆಗಿ ನೇಮಕ ಮಾಡಿತ್ತು. ಮತ್ತು ಅವರ ಅವಧಿಯಲ್ಲಿ ಪಾಕಿಸ್ತಾನ ತಂಡವು ಏಷ್ಯಾ ಕಪ್ ಸೆಮಿಫೈನಲ್‌ನಲ್ಲಿ ಸೋಲು, ನಂತರ ದಕ್ಷಿಣ ಆಫ್ರಿಕಾದಲ್ಲಿ ನಡೆದ ಮಹಿಳಾ ಟಿ20 ವಿಶ್ವಕಪ್‌ನ ನಾಲ್ಕು ಪಂದ್ಯಗಳಲ್ಲಿ ಕೇವಲ ಒಂದು ಗೆಲುವು ಮಾತ್ರ ಗಳಿಸಿತ್ತು. ವಾಸಿಮ್ ವಿರುದ್ಧದ ದೊಡ್ಡ ದೂರು ಏನೆಂದರೆ, ಬ್ಯಾಟ್ಸ್‌ಮನ್ ಆಗಿದ್ದರೂ, ರಾಷ್ಟ್ರೀಯ ತಂಡದ ಬ್ಯಾಟಿಂಗ್ ಸಾಮರ್ಥ್ಯದಲ್ಲಿ ಯಾವುದೇ ಗಮನಾರ್ಹ ಸುಧಾರಣೆ ಕಂಡುಬಂದಿಲ್ಲ, ಇದು ಅಂತರರಾಷ್ಟ್ರೀಯ ಈವೆಂಟ್‌ಗಳಲ್ಲಿ ಅದರ ಅತ್ಯಂತ ದುರ್ಬಲ ಸಾಧನೆಯಾಗಿದೆ.

Leave a Reply

Your email address will not be published. Required fields are marked *

error: Content is protected !!