ಉದಯವಾಹಿನಿ, ಬೆಂಗಳೂರು: ಕೆ.ಹೆಚ್‌ ಮುನಿಯಪ್ಪ ಸಿಎಂ ಆದರೆ ನಾನೂ ಸಂತೋಷ ಪಡ್ತೇನೆ ಅಂತಾ ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ. ನಿನ್ನೆ ಶಿವಮೊಗ್ಗದಲ್ಲಿ ಮುನಿಯಪ್ಪ ಪರ ಕಾರ್ಯಕರ್ತರು ಸಿಎಂ ಘೋಷಣೆ ಕೂಗಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಮ್ಮ ಪಕ್ಷದಲ್ಲಿ ಕೆಚ್‌.ಹೆಚ್ ಮುನಿಯಪ್ಪರವರು ಹಿರಿಯರಿದ್ದಾರೆ. ಅವರು ಸಮರ್ಥರು. ತುಳಿತಕ್ಕೆ ಒಳಗಾಗಿರೋ ಸಮುದಾಯದಿಂದ ಬಂದವರು. ಮುನಿಯಪ್ಪರವರು ಸಿಎಂ ಆದರೆ ತಪ್ಪೇನು ಎಂದು ಪ್ರಶ್ನಿಸಿದ್ದಾರೆ. ಮುನಿಯಪ್ಪ ಸಿಎಂ ಆದರೆ ನಾನೂ ಸಂತೋಷ ಪಡ್ತೇನೆ. ಆದ್ರೆ ಸಿಎಂ ಆಯ್ಕೆ ಬಗ್ಗೆ ಹೈಕಮಾಂಡ್‌ನವರೇ ತೀರ್ಮಾನಿಸಬೇಕು. ಪ್ರಸ್ತುತ ಬಿಹಾರ ಚುನಾವಣೆಗೆ ಹೈಕಮಾಂಡ್ ಬ್ಯುಸಿ ಇದೆ ಎಂದು ಹೇಳಿದ್ರು. ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ, ಸಂಪುಟ ಪುನಾರಚನೆ ವಿಚಾರ ಭಾರೀ ಸದ್ದು ಮಾಡುತ್ತಿದೆ. ಈ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಗೃಹ ಸಚಿವರು, ನವೆಂಬರ್-ಡಿಸೆಂಬರ್ ಕ್ರಾಂತಿ ಬಗ್ಗೆ ನನಗೆ ಗೊತ್ತಿಲ್ಲ. ಹೈಕಮಾಂಡ್ ಏನು ತೀರ್ಮಾನ ಮಾಡುತ್ತೊ ಗೊತ್ತಿಲ್ಲ. ಏನೇ ಇದ್ದರೂ ಹೈಕಮಾಂಡ್ ನಿರ್ಧಾರವೇ ಅಂತಿಮ. ಸಂಪುಟ ಪುನಾರಚನೆ, ಎರಡೂವರೆ ವರ್ಷದ ನಂತರ ಅಧಿಕಾರ ಬದಲಾವಣೆಯೋ ಬಗ್ಗೆ ಹೈಕಮಾಂಡ್‌ನವ್ರು ತೀರ್ಮಾನ ಮಾಡ್ತಾರೆ. ನಾವು ನಿತ್ಯ ಇಲ್ಲಿ ಮಾತನಾಡುವುದರಿಂದ ಗೊಂದಲ ಆಗುತ್ತೆ. ಆಡಳಿತದ ಕಡೆ ಗಮನ ಕೊಡುವ ಕೆಲಸ ಆಗಬೇಕಾಗಿದೆ ಎಂದು ಹೇಳಿದ್ರು. ಇನ್ನು ಸಂಪುಟ ಪುನಾರ್‌ರಚನೆ ಬಗ್ಗೆ ಮಾತನಾಡಿ ಸಂಪುಟ ಪುನಾರಚನೆ ಹೈಕಮಾಂಡ್‌ನವರಾಗಲಿ ಇಲ್ಲಿಯವರಾಗಲೀ ಏನು ಹೇಳಿಲ್ಲ. ಹೈಕಮಾಂಡ್‌ನವರು ಹೇಳಿದ್ರೆ ಏನಾದ್ರು ಮಾತನಾಡಬಹುದು.

Leave a Reply

Your email address will not be published. Required fields are marked *

error: Content is protected !!