ಉದಯವಾಹಿನಿ, ಲಖನೌ: ಔಷಧ ಅಂಗಡಿ ಕೆಲಸಗಾರ ಹಾಗೂ ಕಾನೂನು ವಿದ್ಯಾರ್ಥಿಯ ನಡುವೆ ನಡೆದ ಜಳದಲ್ಲಿ ವಿದ್ಯಾರ್ಥಿಯ ಹೊಟ್ಟೆ ಕೊಯ್ದು, ಎರಡು ಬೆರಳುಗಳನ್ನು ಕತ್ತರಿಸಿರುವ ಭಯಾನಕ ಘಟನೆ ಉತ್ತರ ಪ್ರದೇಶದ ಕಾನ್ಪೂರ್‌ ನಲ್ಲಿ ನಡೆದಿದೆ. 22 ವರ್ಷದ ಅಭಿಜಿತ್ ಸಿಂಗ್ ಚಂಡೇಲ್ ಹಲ್ಲೆಗೊಳಗಾದ ಯುವಕನಾಗಿದ್ದು, ಈತ ಕಾನ್ಪುರ್ ವಿಶ್ವವಿದ್ಯಾಲಯದಲ್ಲಿ ಮೊದಲ ವರ್ಷದ ಕಾನೂನು ವಿದ್ಯಾರ್ಥಿಯಾಗಿದ್ದಾನೆ. ಮಾಧ್ಯಮ ವರದಿಗಳ ಪ್ರಕಾರ, ಔಷಧದ ಬೆಲೆ ಕುರಿತು ಅಂಗಡಿ ಮಾಲೀಕನೊಂದಿಗೆ ನಡೆದ ಗಲಾಟೆಯಲ್ಲಿ ಅಭಿಜಿತ್ ತಲೆಗೆ ಹಲ್ಲೆ ಮಾಡಲಾಗಿದೆ.
ಮೊದಲು ಔಷಧದ ಬಲೆಯ ಕುರಿತು ವಿದ್ಯಾರ್ಥಿ ಮತ್ತು ಅಂಗಡಿಯ ಕೆಲಸಗಾರ ಅಮರ್ ಸಿಂಗ್ ನಡುವೆ ಜಗಳವಾಗಿದೆ. ಬಳಿಕ ಅಮರ್ ಸಿಂಗ್(Amar Singh) ತನ್ನ ಸಹೋದರ ವಿಜಯ್ ಮತ್ತು ಇನ್ನಿಬ್ಬರನ್ನು ಕರೆಸಿಕೊಂಡು ಸ್ಥಳಕ್ಕೆ ಕರೆಸಿ, ನಾಲ್ವರು ಸೇರಿ ವಿದ್ಯಾರ್ಥಿಯ ಮೇಲೆ ಹಿಗ್ಗಾ ಮುಗ್ಗಾ ಹಲ್ಲೆ ಮಾಡಿದ್ದಾರೆ. ಬಳಿಕ ವಿದ್ಯಾರ್ಥಿ ರಕ್ತದ ಮಡುವಿನಲ್ಲೇ ನೆಲಕ್ಕೆ ಬಿದ್ದಿದ್ದಾನೆ. ಪೊಲೀಸ್ ಮಾಹಿತಿ ಪ್ರಕಾರ, ಆರೋಪಿಗಳು ಅಭಿಜಿತ್‌ನನ್ನು ಹಿಡಿದು ಹೊಟ್ಟೆ ಮೇಲೆ ಹಲ್ಲೆ ನಡೆಸಿದ್ದಾರೆ, ಬಳಿಕ ಹರಿತವಾದ ಆಯುಧದಿಂದ ಹೊಟ್ಟೆಯನ್ನು ಕೊಯ್ದಿದ್ದಾರೆ. ಗಾಯಗೊಂಡ ವಿದ್ಯಾರ್ಥಿ ಸಹಾಯಕ್ಕಾಗಿ ಮನೆಯತ್ತ ಓಡುತ್ತಿದ್ದಾಗ, ಮತ್ತೆ ಹಿಡಿದು ಅವನ ಕೈನ ಎರಡು ಬೆರಳುಗಳನ್ನು ಕಡಿದುಹಾಕಿದ್ದಾರೆ, ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

error: Content is protected !!