ಉದಯವಾಹಿನಿ, ನವದೆಹಲಿ: ನೀವು ಮೆಟ್ರೋದಲ್ಲಿ ಪ್ರಯಾಣಿಸುವಾಗ ಕಳೆದುಹೋದ ಪ್ರಯಾಣಿಕರ ಏನಾದರೊಂದು ವಸ್ತುಗಳು ಅಥವಾ ಜನರು ಮಲಗಿರುವುದನ್ನು ನೋಡಿರಬಹುದು. ಆದರೆ ನಿರೋಧ್ ಕಾಂಡೋಮ್‌ಗಳ ದೊಡ್ಡ ಪೆಟ್ಟಿಗೆಯನ್ನು ನೋಡಿದ್ದೀರಾ? ದೆಹಲಿ ಮೆಟ್ರೋದಲ್ಲಿ ದಿನನಿತ್ಯದ ಪ್ರಯಾಣ ಮಾಡುವಾಗ ಒಬ್ಬ ಪ್ರಯಾಣಿಕರಿಗೆ ಈ ದೃಶ್ಯ ಕಣ್ಣಿಗೆ ಬಿದ್ದಿದೆ. ನಿಲ್ದಾಣದ ಗೇಟ್ ಹಿಂದೆ ನಿರೋಧ್ ಕಾಂಡೋಮ್‌ಗಳ ದೊಡ್ಡ ಪೆಟ್ಟಿಗೆ ಕಂಡುಬಂದಿದೆ. ರೆಡ್ಡಿಟ್‌ನಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ, ಪೆಟ್ಟಿಗೆಯ ಜೊತೆಗೆ ಕಾಂಡೋಮ್‌ಗಳ ಪ್ಯಾಕೆಟ್‌ಗಳು ಇರುವುದನ್ನು ತೋರಿಸಲಾಗಿದೆ. ಸದ್ಯ, ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಪತ್ತೆಯಾದ ಕಾಂಡೋಮ್ ಪೆಟ್ಟಿಗೆಯಲ್ಲಿ ಕೇವಲ ಮೂರು ಪ್ಯಾಕೆಟ್‌ಗಳು ಮಾತ್ರ ತೆರೆದಿವೆ ಎಂದು ಹೇಳಲಾಗಿದೆ. ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಬೇಗನೆ ವೈರಲ್ ಆಗಿದ್ದು, ಸಾರ್ವಜನಿಕ ಆರೋಗ್ಯ ಅಭಿಯಾನದ ಭಾಗವಾಗಿ ದೆಹಲಿ ಮೆಟ್ರೋ ಕಾಂಡೋಮ್ ವಿತರಿಸುವ ಕ್ರಮಗಳನ್ನು ಹಲವರು ನೆನಪಿಸಿಕೊಂಡರು. ಇನ್ನು ಕೆಲವರು, ಪೆಟ್ಟಿಗೆಯನ್ನು ನೋಡಿದಾಗ ಪ್ರಯಾಣಿಕರು ಏನು ಯೋಚಿಸಿರಬಹುದು ಎಂದು ತಮಾಷೆ ಮಾಡಿದರು. ಇತ್ತೀಚೆಗೆ, ಇವುಗಳನ್ನು ಬಸ್ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ ಎಂದು ಒಬ್ಬ ವ್ಯಕ್ತಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. ಇವುಗಳನ್ನು ನಿಜವಾಗಿಯೂ ಜನರು ಬಳಸುತ್ತಾರೆಯೇ ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ. ಮೊದಲು ನೋಡಿದಾಹ, ಅವು ಪಾಪ್-ಪಾಪ್ ಕ್ರ್ಯಾಕರ್ಸ್ ಎಂದು ನಾನು ಭಾವಿಸಿದೆ. ಆದರೆ, ಕಾಮೆಂಟ್‌ಗಳನ್ನು ಓದಿದ ನಂತರ ಅದು ಕಾಂಡೋಮ್ ಎಂದು ತಿಳಿದುಬಂತು ಎಂದು ಮಗದೊಬ್ಬರು ಹೇಳಿದ್ದಾರೆ.
