ಉದಯವಾಹಿನಿ, ಬೆಂಗಳೂರು: ಸರ್ಕಾರಿ ನೌಕರರಿಗೆ ಖಾದಿ ಬಟ್ಟೆ ಕಡ್ಡಾಯಗೊಳಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಮಹತ್ವ ನಿರ್ಧಾರ ತೆಗೆದುಕೊಂಡಿದ್ದಾರೆ. ಇಂದು (ಜ.29) ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಇದೇ ಏಪ್ರಿಲ್ 24ರಂದು ಸರ್ಕಾರ ಚಾಲನೆ ನೀಡಲಿದೆ. ಎಲ್ಲಾ ಸರ್ಕಾರಿ ನೌಕರರು ಕಡ್ಡಾಯವಾಗಿ ಪ್ರತಿ ತಿಂಗಳ ಮೊದಲ ಶನಿವಾರ ಖಾದಿ ಬಟ್ಟೆ ಧರಿಸಬೇಕು. ಪುರುಷ ನೌಕರರು ಖಾದಿ ಬಟ್ಟೆಯ ಪ್ಯಾಂಟ್, ಶರ್ಟ್ ಹಾಗೂ ಓವರ್ ಕೋಟ್, ಮಹಿಳಾ ನೌಕರರು ಸಿಲ್ಕ್ ಸೀರೆ ಅಥವಾ ಛೂಡಿದಾರಗಾಗಿ ಬಳಸಿಕೊಳ್ಳಬಹುದು ಎಂದು ಸೂಚಿಸಿದ್ದಾರೆ.
ಎಲ್ಲಾ ನೌಕರರು ಸರ್ಕಾರಿ ಸ್ವಾಮ್ಯದ ಖಾದಿ ಗ್ರಾಮೋದ್ಯೋಗ ಮಳಿಗೆಗಳಲ್ಲಿಯೇ ಬಟ್ಟೆಯನ್ನು ಖರೀದಿಸಬೇಕು. ಜೊತೆಗೆ ಖಾದಿ ಗ್ರಾಮೋದ್ಯೋಗ ಮಂಡಳಿ ಕೂಡ ರಿಯಾಯಿತಿ ನೀಡಬೇಕು. ಸದ್ಯ ನೀಡುತ್ತಿರುವ ರಿಯಾಯಿತಿಗಿಂತ ಹೆಚ್ಚಿನ 5% ರಿಯಾಯಿತಿ ನೀಡಬೇಕು ಎಂದು ತಿಳಿಸಿದ್ದಾರೆ.
