ಉದಯವಾಹಿನಿ, ಹಾಸನ: ನಗರದ ಕೆ.ಆರ್.ಪುರಂನಲ್ಲಿ ಒಬ್ಬಳೇ ಮಹಿಳೆ ಜೊತೆ ಇಬ್ಬರು ಅಕ್ರಮ ಸಂಬಂಧ ಹೊಂದಿದ್ದ ವಿಚಾರದಲ್ಲಿ ನಡೆದ ಗಲಾಟೆ ಒಬ್ಬನ ಹತ್ಯೆಯಲ್ಲಿ ಅಂತ್ಯವಾಗಿದೆ.
ಕೊಲೆಯಾದ ವ್ಯಕ್ತಿಯನ್ನು ಅಡುಗೆ ಕಂಟ್ರ್ಯಾಕ್ಟರ್ ಆನಂದ್ (48) ಎಂದು ಗುರುತಿಸಲಾಗಿದೆ. ಕೊಲೆ ಆರೋಪಿಯನ್ನು ಧರಣೇಂದ್ರಪ್ರಕಾಶ್ ಎಂದು ಗುರುತಿಸಲಾಗಿದೆ. ಈ ಇಬ್ಬರೂ ಒಂದೇ ಮಹಿಳೆ ಜೊತೆ ಅಕ್ರಮ ಸಂಬಂಧ ಹೊಂದಿದ್ದರು. ಇದೇ ವಿಚಾರಕ್ಕೆ, ಮದ್ಯ ಸೇವಿಸುವ ವೇಳೆ ಇಬ್ಬರ ನಡುವೆ ಗಲಾಟೆಯಾಗಿತ್ತು. ಗಲಾಟೆಯ ಬಳಿಕ ಇಬ್ಬರೂ ಮನೆಗೆ ತೆರಳಿದ್ದರು. ಮನೆಗೆ ತೆರಳಿದ ಬಳಿಕ ಆರೋಪಿ ಧರಣೇಂದ್ರಪ್ರಕಾಶ್, ಆನಂದ್‌ಗೆ ಕರೆ ಮಾಡಿ ಮಹಿಳೆ ಮನೆ ಬಳಿ ಬರುವಂತೆ ಆವಾಜ್ ಹಾಕಿದ್ದ. ಗಾಡಿಯಲ್ಲಿ ಆನಂದ್ ಬರುತ್ತಿದ್ದಂತೆ ಆರೋಪಿ ಐದಾರು ಬಾರಿ ಚಾಕು ಇರಿದು ಹತ್ಯೆ ಮಾಡಿದ್ದಾನೆ.
ಸ್ಥಳಕ್ಕೆ ಬಡಾವಣೆ ಠಾಣೆ ಪೊಲೀಸರು (Police) ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
