ಉದಯವಾಹಿನಿ, ಬೆಂಗಳೂರು: ಹಿಂದೂ ಸನಾತನ ಧರ್ಮದಲ್ಲಿ ವಾಸ್ತುಶಾಸ್ತ್ರಕ್ಕೆ ತನ್ನದೇ ಆದ ಸ್ಥಾನವಿದ್ದು, ಅನಾದಿ ಕಾಲದಿಂದಲೂ ನಮ್ಮ ಪೂರ್ವಜರು ಅದನ್ನು ಪಾಲಿಸಿಕೊಂಡು ಬಂದಿದ್ದಾರೆ. ನಮ್ಮ ಆಚಾರ-ವಿಚಾರಗಳಲ್ಲಿಯೂ ವಾಸ್ತು ಹಾಸುಹೊಕ್ಕು ಆಗಿದ್ದು, ಜೀವನದಲ್ಲಿ ಸುಖ ಶಾಂತಿಯನ್ನು ತರುವಲ್ಲಿ ವಾಸ್ತು ಪ್ರಮುಖ ಪಾತ್ರ ವಹಿಸುತ್ತದೆ.
ಅಲ್ಲದೇ ವಾಸ್ತುವಿಗೆ ಅನುಗುಣವಾಗಿ ಮನೆ, ಕಚೇರಿ ಅಥವಾ ಯಾವುದೇ ಸ್ಥಳವನ್ನು ನಿರ್ಮಾಣ ಮಾಡುವುದರಿಂದ ಆ ಮನೆ ಅಥವಾ ಕಚೇರಿಯಲ್ಲಿ ಸಂತೋಷ ನೆಲೆಸುತ್ತದೆ ಎಂಬುದು ನಂಬಿಕೆ. ವಾಸ್ತುವು ನಮ್ಮ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಚಿಂತನೆ ಹಾಗೂ ಭಾವನೆಗಳನ್ನು ವೃದಿಸುವುದರ ಜೊತೆ ಶಾಂತಿ ನೆಮ್ಮದಿಯ ವಾತಾವರಣವನ್ನು ಸೃಷ್ಟಿಸುತ್ತದೆ. ಜೊತೆಗೆ ಇದು ಸಕಾರಾತ್ಮಕ ಭಾವವನ್ನು ಮೂಡಿಸುತ್ತದೆ.ಇನ್ನು ಕೆಲವೊಮ್ಮೆ ನಾವು ಈ ವಾಸ್ತುವಿನ ವಿಚಾರದಲ್ಲಿ ಭಾರೀ ನಿರ್ಲಕ್ಷ್ಯ ಮಾಡುತ್ತೇವೆ. ಸ್ಟೇಟಸ್ ಅಂತಸ್ತು ಅಂತ ನಮ್ಮ ಅಗತ್ಯಕ್ಕೆ ತಕ್ಕಂತೆ ಯಾವ್ಯಾವ ವಸ್ತುಗಳನ್ನು ಮನಸ್ಸಿಗೆ ಇಚ್ಚೆ ಬಂದಂತೆ ಇಟ್ಟು ಬಿಡುತ್ತೇವೆ. ಆದರೆ ಇದರಿಂದ ನಮ್ಮ ಬದುಕಿನಲ್ಲಿ ವ್ಯತಿರಿಕ್ತ ಪರಿಣಾಮ ಉಂಟಾಗಲಿದ್ದು, ನಕಾರಾತ್ಮಕತೆಯೂ ಹೆಚ್ಚಾಗುತ್ತದೆ.
ಎಲ್ಲಿಯವರೆಗೆ ವಾಸ್ತು ಮುಖ್ಯವೆಂದರೆ ಮನೆಯಲ್ಲಿ ಕೆಲವು ಪ್ರಾಣಿ, ಪಕ್ಷಿಗಳನ್ನು ಸಾಕುವುದು ಕೂಡ ವಾಸ್ತುವಿಗೆ ಅನುಗುಣವಾಗಿ ಇರಬೇಕು, ಇದು ವಾಸ್ತುವಿನ ಭಾಗವಾಗಿದೆ ಎನ್ನುತ್ತಾರೆ ವಾಸ್ತುಶಾಸ್ತ್ರಜ್ಞರು. ಅಲ್ಲದೇ ನಾವು ಕೆಲವೊಮ್ಮೆ ಮನೆಯ ಅಂದಕ್ಕೆ ಎಂದು ಬಳಸುವ ಅಥವಾ ಇಡುವ ನವಿಲುಗರಿ, ಫಿಶ್ ಅಕ್ವೇರಿಯಂ, ಕೊಳಲು ಇದಕ್ಕೆ ಹೊರತಾಗಿಲ್ಲ.
