ಉದಯವಾಹಿನಿ, ಒಟ್ಟಾವಾ: ವಂಚನೆ ಕಳವಳದ ಹಿನ್ನೆಲೆಯಲ್ಲಿ ಸಾಮೂಹಿಕ ವೀಸಾ ರದ್ದತಿಗೆ ಯೋಜನೆ ರೂಪಿಸುತ್ತಿರುವ ಕೆನಡಾದಲ್ಲಿ ಭಾರತೀಯ ನಾಗರಿಕರು ಸಂಕಷ್ಟಕ್ಕೆ ಒಳಗಾಗಬಹುದು ಎನ್ನುವ ಆತಂಕ ಉಂಟಾಗಿದೆ. ಇದು ಸಾಮೂಹಿಕ ಗಡಿಪಾರು ಯೋಜನೆಯಾಗಿದೆ ಎಂದು 300ಕ್ಕೂ ಹೆಚ್ಚು ಸಂಘಟನೆಗಳು ಆತಂಕ ವ್ಯಕ್ತಪಡಿಸಿವೆ. ಭಾರತ ಮತ್ತು ಬಾಂಗ್ಲಾದೇಶದಿಂದ ಕೆನಾಡದೊಳಗೆ ನುಗ್ಗಲು ಕೆಲವರು ಮೋಸ ಮಾಡಿ ನಕಲಿ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಇದನ್ನು ಗುರುತಿಸಿ ರದ್ದುಗೊಳಿಸಲು ನಿರ್ಧರಿಸಿರುವ ಕೆನಡಾ ಅಧಿಕಾರಿಗಳು ಇದಕ್ಕಾಗಿ ಯುಎಸ್ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ.
ವಂಚನೆ ಮಾಡಿ ದೇಶದೊಳಗೆ ಪ್ರವೇಶಿಸಿರುವ ಕೆಲವು ಭಾರತೀಯರು ಸೇರಿದಂತೆ ಬೇರೆಬೇರೆ ದೇಶಗಳಿಂದ ಬಂದಿರುವ ವಲಸಿಗ ವೀಸಾ ಹೊಂದಿರುವ ಅರ್ಜಿಗಳನ್ನು ರದ್ದುಗೊಳಿಸುವ ಅಧಿಕಾರವನ್ನು ಕೆನಡಾದ ಅಧಿಕಾರಿಗಳು ಕೋರಿದ್ದಾರೆ. ಭಾರತ ಮತ್ತು ಬಾಂಗ್ಲಾದೇಶದಿಂದ ಬಂದಿರುವ ವೀಸಾ ಅರ್ಜಿಗಳನ್ನು ಗುರುತಿಸಿ ರದ್ದುಗೊಳಿಸಲು ಕೆನಡಾದ ಅಧಿಕಾರಿಗಳು ಅಮೆರಿಕದ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ.
ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಮೇಲೆ ಒಟ್ಟಾವಾ ನಿರ್ಬಂಧ ಹೇರಿದ ಬಳಿಕ ಕೆನಡಾದ ಅಧಿಕಾರಿಗಳು ಈ ಒಪ್ಪಂದ ಮಾಡಿಕೊಳ್ಳುವ ಯೋಜನೆ ಮಾಡಲಾಗುತ್ತಿದೆ. ರದ್ದುಗೊಳಿಸಲು ಗುರುತಿಸಿರುವ ಅರ್ಜಿಗಳಲ್ಲಿ ವಿಶೇಷವಾಗಿ ಭಾರತದ ಅರ್ಜಿದಾರರು ಕೂಡ ಇದ್ದಾರೆ. ಕಳೆದ ಆಗಸ್ಟ್‌ನಲ್ಲಿ ಕೆನಡಾದ ಪೋಸ್ಟ್ ಸೆಕೆಂಡರಿ ಸಂಸ್ಥೆಗಳು ಅಧ್ಯಯನ ಮಾಡಲು ಅನುಮತಿ ಕೋರಿದ್ದ ಸುಮಾರು ಶೇ. 74ರಷ್ಟು ಭಾರತೀಯ ಅರ್ಜಿಗಳನ್ನು ಕೆನಡಾ ತಿರಸ್ಕರಿಸಿದೆ. ಇದರಲ್ಲಿ ನಾಲ್ಕು ಅರ್ಜಿಗಳಲ್ಲಿ ಸುಮಾರು ಮೂರು ಭಾರತೀಯರದ್ದಾಗಿದೆ.
ಕೆನಡಾದ ವಲಸೆ, ನಿರಾಶ್ರಿತರು ಮತ್ತು ಪೌರತ್ವ ಕೆನಡಾ (IRCC), ಕೆನಡಾ ಗಡಿ ಸೇವೆಗಳ ಸಂಸ್ಥೆ (CBSA) ಮತ್ತು ಅವರ ಯುಎಸ್ ಪಾಲುದಾರರು “ದೇಶ-ನಿರ್ದಿಷ್ಟ ಸವಾಲುಗಳ” ಬಗ್ಗೆ ಭಾರತ ಮತ್ತು ಬಾಂಗ್ಲಾದೇಶವನ್ನು ಪ್ರತ್ಯೇಕಿಸಿ ವೀಸಾಗಳನ್ನು ನಿರಾಕರಿಸಲು ಮತ್ತು ರದ್ದುಗೊಳಿಸಲು ಅಧಿಕಾರಿಗಳಿಗೆ ಅಧಿಕಾರ ನೀಡಲು ಕಾರ್ಯನಿರತ ಗುಂಪನ್ನು ರಚಿಸಿದ್ದಾರೆ ಎಂದು ವಲಸೆ ಸಚಿವರ ಕಚೇರಿ ತಿಳಿಸಿದೆ ಎನ್ನಲಾಗಿದೆ.
