ಉದಯವಾಹಿನಿ, ಜೇವರ್ಗಿ: ವಿಧಿ ಎಂತಹ ಕ್ರೂರಿ ಎಂದರೆ ಹುಟ್ಟು ಸಾವು ಎರಡನ್ನು ಕೂಡ ಒಂದೆ ದಿನಾಂಕದಂದು ನೀಡಿದ್ದಾನೆ. ಹುಟ್ಟು ಹಬ್ಬದ ದಿನದಂದು ಸಂತೋಷವಾಗಿ ಕರ್ತವ್ಯಕ್ಕೆ ತೆರಳುತ್ತಿರುವಾಗ ಕಾರಿನ ರೂಪದಲ್ಲಿ ಯಮರಾಯ ಬಂದAದತ್ತಾಗಿದೆ. ಹುಟ್ಟು ಸಾವು ಎರಡು ಒಂದೆ ದಿನ ಕುಟುಂಬ ಹಾಗೂ ಬಸ್ ಘಟಕದ ಸಿಬಂದಿಗಳ ದುಃಖ ಹೆಳತಿರದು. ಪಟ್ಟಣದ ಹೊರವಲಯದ ಬಸ್ ಘಟಕದ ಹತ್ತಿರ ಸ್ಕುಟಿ, ಸೀಫ್ಟ್ ಕಾರ್, ಬಸ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಲಾಲಹುಸೇನ್ ಮುನಿಯರ್ (೩೮) ದ್ವಿಚಕ್ರ ಸವಾರ ಅಪಘಾತದಲ್ಲಿ ಮೃತಪಟ್ಟಿದ್ದು, ಜೇವರ್ಗಿ ಬಸ್ ಘಟಕದಲ್ಲಿ ಚಾಲಕನಾಗಿ ಸೇವೆ ಸಲ್ಲಿಸುತ್ತಿದ್ದನು. ಹುಟ್ಟು ಹಬ್ಬದ ದಿನದಂದು ಸಂತೋಷದಿಂದ ಕರ್ತವ್ಯಕ್ಕೆ ಹಾಜರಾಗಲು ಹೊರಟ ಸಮಯದಲ್ಲಿ ಸೀಪ್ಟ್ ಕಾರ್ ಡಿಕ್ಕಿ ಹೊಡೆದ ಪರಿಣಾಮ ತಿರ್ವ ಗಾಯಗೊಂಡ ಲಾಲಾಹುಸೇನ್ ಮುನಿಯರ್ ಆಸ್ಪತ್ರೆಗೆ ತೆರಳುವ ಸಂದರ್ಭದಲ್ಲಿ ಹಸುನೀಗಿದನೆಂದು ತಿಳಿದುಬಂದಿದೆ.

ಕಾರ್ ಚಾಲಕ ದ್ವೀಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ನಂತರ ಎದುರಿಗೆ ಬರುತ್ತಿದ್ದ ಬಸ್ಸಿಗೆ ಡಿಕ್ಕಿ ಹೋಡಿದಿದ್ದಾನೆ. ಪರಿಣಾಮ ಕಾರಿನಲ್ಲಿದ ಮುವರಿಗೆ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಕಲಿಸಲಾಗಿದೆ. ಹುಟ್ಟುಹಬ್ಬದ ಸಂತೋಷ ಒಂದುಕಡೆಯಾದರೆ ಸಾವಿನ ದುಃಖ ಇನ್ನೊಂದು ಕಡೆ. ಬಸ್ ಘಟಕದ ಸಿಬಂದಿಗಳು ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸಲು ಆತುರದಿಂದ ಕಾಯುತ್ತಿದ್ದವರಿಗೆ ಅಪಘಾತದ ಸುದ್ಧಿ ತಿಳಿದು ಕಣ್ಣಂಚಲಿ ನೀರು ಬಂದವು. ಕುಟುಂಬದ ನೋವು ಹೆಳತಿರದು. ತಮ್ಮ ತಂದೆಯ ಜನ್ಮ ದಿನವನ್ನು ಸಂಜೆ ಆಚರಿಸಬೇಕೆಂದು ಕಾಯುತ್ತಿದ ಮಕ್ಕಳ ಆಕ್ರಂಧನ ಮುಗಿಲು ಮುಟ್ಟಿತು. ಈ ಕುರಿತು ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!