ಉದಯವಾಹಿನಿ, ನ್ಯೂಯಾರ್ಕ್‌: ಅಮೆರಿಕದ ನ್ಯೂಯಾರ್ಕ್‌ನ ನೂತನ ಮೇಯರ್ ಆಗಿ 34 ವರ್ಷದ ಮೇಯರ್ ಜೋಹ್ರಾನ್ ಕ್ವಾಮೆ ಮಮ್ದಾನಿ ಚುನಾಯಿತರಾದರು. ಐತಿಹಾಸಿಕ ಗೆಲುವಿನ ನಂತರ ತಮ್ಮ ಮೊದಲ ದಿನವನ್ನು ಜನಸಾಮಾನ್ಯರೊಂದಿಗಿನ ಆತ್ಮೀಯ ಸಂವಾದ ಮತ್ತು ಸರಳ ಜೀವನ ಶೈಲಿಯನ್ನು ಅನುಸರಿಸುವ ಮೂಲಕ ಗಮನಸೆಳೆದಿದ್ದಾರೆ. ಡೆಮಾಕ್ರಾಟ್ ಫೈರ್‌ಬ್ರಾಂಡ್ ಅಲೆಕ್ಸಾಂಡ್ರಿಯಾ ಒಕಾಸಿಯೊ-ಕೊರ್ಟೆಜ್ ಅವರೊಂದಿಗೆ ಭಾರತೀಯ ಭೋಜನದೊಂದಿಗೆ ತಮ್ಮ ಮೊದಲ ದಿನವನ್ನು ಪ್ರಾರಂಭಿಸಿದ್ದಾರೆ. ಭಾರತೀಯ ಮೂಲದರಾಗಿರುವ ಇವರು, ಚುನಾಯಿತ ಮೇಯರ್ ಆಗಿ ತಮ್ಮ ಮೊದಲ ದಿನದ ಒಂದು ಚಿತ್ರವನ್ನು ಹಂಚಿಕೊಂಡರು. ಅದು ಸಂದರ್ಶನಗಳು ಮತ್ತು ಸಭೆಗಳಿಂದ ತುಂಬಿತ್ತು.
ಮೇಯರ್ ಆಗಿ ಆಯ್ಕೆಯಾದ ಮೊದಲ ದಿನ ತುಂಬಾ ಕಾರ್ಯನಿರತವಾಗಿದೆ. ಮುಂಜಾನೆ ಸಂದರ್ಶನಗಳು, ಘೋಷಣೆಗಳು ಮತ್ತು ಸಭೆಗಳಲ್ಲಿ ಭಾಗವಹಿಸಿದೆ. ಸಭೆಯಲ್ಲಿ ನಗರಾಭಿವೃದ್ಧಿ, ವಸತಿ, ಹಾಗೂ ಜೀವನಮಟ್ಟ ಸುಧಾರಣೆ ಕುರಿತ ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡರು. ಜಾಕ್ಸನ್ ಹೈಟ್ಸ್‌ನಲ್ಲಿರುವ ಲಾಲಿಗುರಾಸ್ ಬಿಸ್ಟ್ರೋದಲ್ಲಿ ಅಲೆಕ್ಸಾಂಡ್ರಿಯಾ ಒಕಾಸಿಯೊ-ಕೊರ್ಟೆಜ್ ಅವರೊಂದಿಗಿನ ಊಟದ ಕಾರ್ಯಕ್ರಮವು ಒಂದು ಪ್ರಮುಖ ಅಂಶವಾಗಿದೆ ಎಂದು ಅವರು X ನಲ್ಲಿ ತಮ್ಮ ಊಟದ ಚಿತ್ರಗಳನ್ನು ಹಂಚಿಕೊಂಡು ಪೋಸ್ಟ್ ಮಾಡಿದ್ದಾರೆ.
ಚಿತ್ರದಲ್ಲಿ, ಒಕಾಸಿಯೊ-ಕೊರ್ಟೆಜ್ ಅವರು ಮೊಮೊಸ್ ಜೊತೆಗೆ ಚಹಾ ಸವಿಯುತ್ತಿರುವುದನ್ನು ಮತ್ತು ಪನೀರ್ ಟಿಕ್ಕಾ ಸವಿದಿದ್ದಾರೆ. ಇದು ಅವರ ದಕ್ಷಿಣ ಏಷ್ಯಾದ ಪರಂಪರೆಯ ಸಂಕೇತವಾಗಿದೆ. ಲಾಲಿಗುರಾಸ್ ಬಿಸ್ಟ್ರೋ ನ್ಯೂಯಾರ್ಕ್‌ನ ಕ್ವೀನ್ಸ್‌ನ ಜಾಕ್ಸನ್ ಹೈಟ್ಸ್‌ನಲ್ಲಿರುವ ಭಾರತೀಯ ಮತ್ತು ನೇಪಾಳಿ ಉಪಾಹಾರ ಗೃಹವಾಗಿದೆ. ಮಮ್ದಾನಿ ಅವರ ಮೇಯರ್ ಬಿಡ್‌ಗೆ ಅನುಮೋದಿಸಿದ ಕೆಲವೇ ಡೆಮೋಕ್ರಾಟ್‌ಗಳಲ್ಲಿ ಒಕಾಸಿಯೊ-ಕೊರ್ಟೆಜ್ ಒಬ್ಬರು.

Leave a Reply

Your email address will not be published. Required fields are marked *

error: Content is protected !!