ಉದಯವಾಹಿನಿ, ಕೃಷ್ಣಗಿರಿ: ಐದು ತಿಂಗಳ ಮಗುವನ್ನು ಕೊಂದ ಆರೋಪದ ಮೇಲೆ ಸಲಿಂಗ ಜೋಡಿಯನ್ನು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, 25 ವರ್ಷದ ಯುವತಿಯು ತನ್ನ ಸಲಿಂಗಿ ಜೊತೆಗಾತಿಯೊಂದಿಗೆ ಸೇರಿಕೊಂಡು ಮಗುವನ್ನು ಹತ್ಯೆ ಮಾಡುವ ಮೂಲಕ ನೀಚ ಕೃತ್ಯ ಎಸಗಿದ್ದಾಳೆ . ನವೆಂಬರ್ 2ರಂದು, ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಕೆಳಮಂಗಲಂನಲ್ಲಿ ಈ ಘಟನೆ ನಡೆದಿದ್ದು, ಜನರು ಬೆಚ್ಚಿಬಿದ್ದಿದ್ದಾರೆ.
ಕೆಳಮಂಗಲ ಸಮೀಪದ ಚಿನ್ನತ್ತಿ ಗ್ರಾಮದ ಎಸ್. ಭಾರತಿ ಹಾಗೂ ಆಕೆಯ ಸಲಿಂಗಿ ಜೊತೆಗಾತಿ, ಅದೇ ಗ್ರಾಮದ 22 ವರ್ಷದ ಸುಮಿತ್ರಾ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಭಾರತಿಯು ಸುರೇಶ್ ಎಂಬಾತನನ್ನು ಮದುವೆಯಾಗಿದ್ದು, ಇವರಿಗೆ ಮೂವರು ಮಕ್ಕಳಿದ್ದರು. ಐದು ಮತ್ತು ಮೂರು ವರ್ಷದ ಹೆಣ್ಣು ಮಕ್ಕಳು ಹಾಗೂ ಮೃತಪಟ್ಟ ಮಗು 5 ತಿಂಗಳ ಗಂಡು ಮಗು ಧ್ರುವನ್ ಎಂದು ಪೊಲೀಸರು ವಿವರಿಸಿದ್ದಾ
