ಉದಯವಾಹಿನಿ, ಲಖನೌ: ಇತ್ತೀಚಿನ ದಿನದಲ್ಲಿ ಮಹಿಳೆಯ ಪರವಾಗಿ , ಆಕೆಯ ರಕ್ಷಣೆಗಾಗಿ ಕಾನೂನು ನಿಯಮಗಳು ಕಠಿಣವಾಗಿ ಜಾರಿಯಾಗುತ್ತಿದೆ. ಹಾಗಿದ್ದರೂ ಮಹಿಳೆಯ ಮೇಲೆ ಲೈಂಗಿಕ ಕಿರುಕುಳ, ಅತ್ಯಾಚಾರ, ಬೆದರಿಕೆ, ಹಲ್ಲೆ ಮಾಡುವ ಪ್ರಮಾಣ ಹೆಚ್ಚುತ್ತಿರುವುದು ಆಘಾತಕಾರಿ ಅಂಶವಾಗಿದೆ. ಅಂತೆಯೇ ಮಹಿಳೆಯೊಬ್ಬರ ಮೇಲೆ ರಸ್ತೆಯ ಮಧ್ಯದಲ್ಲಿ ಸಾರ್ವಜನಿಕವಾಗಿ ಹಲ್ಲೆ ನಡೆಸಿದ ಘಟನೆ ಉತ್ತರ ಪ್ರದೇಶದ ಗೋಮತಿನಗರದಲ್ಲಿ ನಡೆದಿದೆ. ಮಹಿಳೆಯ ಮೇಲೆ ಕೆಲವು ಪುರುಷರು ಹಲ್ಲೆ ನಡೆಸುತ್ತಿದ್ದು ಅದರ ವಿಡಿಯೋ ಒಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ ಇಬ್ಬರು ಪುರುಷರು ಮಹಿಳೆಯ ದುಪಟ್ಟಾವನ್ನು ಎಳೆಯುತ್ತಿರುವ ದೃಶ್ಯವು ಕಂಡು ಬಂದಿದ್ದು ಮಹಿಳೆಯನ್ನು ಅಮಾನುಷವಾಗಿ ನಡೆಸಿಕೊಂಡ ರೀತಿಗೆ ನೆಟ್ಟಿಗರು ಈ ವಿಡಿಯೋ ಬಗ್ಗೆ ಕಿಡಿಕಾರಿದ್ದಾರೆ.
ವೈರಲ್ ಆದ ವಿಡಿಯೋದಲ್ಲಿ ರಸ್ತೆಯ ಮಧ್ಯದಲ್ಲಿ ಮಹಿಳೆಯ ಮೇಲೆ ಸಾರ್ವಜನಿಕ ಹಲ್ಲೆ ನಡೆಸಿದ್ದ ದೃಶ್ಯಗಳನ್ನು ಕಾಣಬಹುದು. ಆ ವೇಳೆ ಅಲ್ಲಿ ಸಂಚಾರ ದಟ್ಟಣೆ ಏರ್ಪಟ್ಟಿದ್ದು ಅದೇ ಸಂದರ್ಭ ದಲ್ಲಿ ಉಳಿದ ಸಹ ಪ್ರಯಾಣಿಕರು ಮತ್ತು ಅಪರಿಚಿತರು ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದಾರೆ. ಮಹಿಳೆಯನ್ನು ಬಲವಂತವಾಗಿ ಎಳೆದಾಡುತ್ತಿರುವ ದೃಶ್ಯಗಳು ಸೋಶಿಯಲ್ ಮಿಡಿಯಾದಲ್ಲಿ ಸಂಚಲನ ಉಂಟು ಮಾಡಿದೆ. ಪುರುಷರು ಮಹಿಳೆಯ ದುಪಟ್ಟಾವನ್ನು ಎಳೆ ಯುತ್ತಿದ್ದು ಮಹಿಳೆಯು ಕೂಡ ಕೂಗಾಡಿದ್ದಾಳೆ. ಬಳಿಕ ಒಬ್ಬಾತನು ಆಕೆಯ ಕೈ ಹಿಡಿದು ಎಳೆ ದಾಡಿದ್ದಾನೆ. ಅದೇ ವೇಳೆಗೆ ಕೆಲವೊಂದಿಷ್ಟು ಜನ ವಿಡಿಯೋ ಮಾಡುತ್ತಿದ್ದರೆ ಇನ್ನು ಕೆಲವೊಬ್ಬರು ಮಹಿಳೆ ಪರ ಮಾತನಾಡಿ ಪುರುಷರಿಗೆ ಬುದ್ಧಿಮಾತುಗಳನ್ನು ಹೇಳಿದ್ದಾರೆ. ಈ ಮೂಲಕ ಉತ್ತರ ಪ್ರದೇಶದಲ್ಲಿ ಮಹಿಳೆಯ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತವಾಗುತ್ತಿದೆ.
