ಉದಯವಾಹಿನಿ, ಮೆಕ್ಸಿಕೋ ಸಿಟಿ: 74ನೇ ಮಿಸ್ ಯೂನಿವರ್ಸ್ ಸ್ಪರ್ಧೆಯ ಆರಂಭದಲ್ಲೇ ದೊಡ್ಡ ಹೈಡ್ರಾಮಾ ನಡೆದಿದ್ದು, ಸ್ಪರ್ಧಿಗಳು ಮತ್ತು ಆಯೋಜಕರ ನಡುವಿನ ಗೊಂದಲಗಳಿಂದ ಸ್ಪರ್ಧೆಯನ್ನೇ ಮುಂದೂಡುವ ಪರಿಸ್ಥಿತಿ ಬಂದಿದೆ.
ಹೌದು.. 74ನೇ ಮಿಸ್ ಯೂನಿವರ್ಸ್ ಸ್ಪರ್ಧೆಯ ಮಂಗಳವಾರ ಔಪಚಾರಿಕ ಉದ್ಘಾಟನಾ ಕಾರ್ಯಕ್ರಮವಾದ ‘ಸಾಶಿಂಗ್ ಸೆರೆಮನಿ’ ಆರಂಭವಾಗುವ ಮುನ್ನವೇ, ಸ್ಪರ್ಧಿಗಳು ಮತ್ತು ಆಯೋಜಕರಾದ ಮಿಸ್ ಯೂನಿವರ್ಸ್ ಥೈಲ್ಯಾಂಡ್ (MUT) ನ ರಾಷ್ಟ್ರೀಯ ನಿರ್ದೇಶಕ ನವಾತ್ ಇತ್ಸರಾಗ್ರಿಸಿಲ್ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ನವಾತ್ ಇತ್ಸರಾಗ್ರಿಸಿಲ್ ಮಾತಿನಿಂದ ಆಕ್ರೋಶಗೊಂಡ ಸ್ಫರ್ಧಿಗಳು ಸಭೆಯಿಂದ ಹೊರ ನಡೆದ ಪ್ರಸಂಗವೂ ನಡೆದಿದೆ.
MUT ನಿರ್ದೇಶಕ ನವಾತ್ ಪ್ರೋಮೋ ಚಿತ್ರಿಕರಣದಲ್ಲಿ ಭಾಗವಹಿಸದ ಸ್ಪರ್ಧಿಗಳು ಹಾಗೂ ಸ್ಪರ್ಧಿಗಳಿಗೆ ಕೆಲವು ಕ್ಯಾಸಿನೋ ಸಂಸ್ಥೆಗಳು ಪ್ರಾಯೋಜಿಸುತ್ತಿರುವಂತಹ ವಿಷಯಗಳ ಕುರಿತು ಮಾತನಾಡಿದರು.
ಈ ವೇಳೆ ನವಾತ್ , MUT ನ ಪ್ರಚಾರ ಕಾರ್ಯಕ್ರಮಗಳಿಗೆ ಒಪ್ಪಿಗೆ ನೀಡದ ಸ್ಪರ್ಧಿಗಳನ್ನು ತಮ್ಮ ಕೈ ಎತ್ತಲು ಕೇಳಿದರು. ಯಾರೂ ಕೈ ಎತ್ತದಿದ್ದಾಗ, ಅವರು ಮೆಕ್ಸಿಕೊ ಪ್ರತಿನಿಧಿ ಫಾತಿಮಾ ಬಾಶ್ ಅವರನ್ನು ಹೆಸರಿಸಿ ಮಾತನಾಡಿ ತಮ್ಮ ಸಿಬ್ಬಂದಿ ನೀಡಿದ ಮಾಹಿತಿ ಪ್ರಕಾರ, ಫಾತಿಮಾ ಅವರ ರಾಷ್ಟ್ರೀಯ ನಿರ್ದೇಶಕರು ಥೈಲ್ಯಾಂಡ್ ಬಗ್ಗೆ ಯಾವುದೇ ಪೋಸ್ಟ್ ಮಾಡದಂತೆ ಸೂಚನೆ ನೀಡಿದ್ದಾರೆ ಎಂದು ನವಾತ್ ಆರೋಪಿಸಿದ್ದಾರೆ.ಇದಕ್ಕೆ ಪ್ರತಿಕ್ರಿಯಿಸಿದ ಫಾತಿಮಾ, ತಾವು ನವಾತ್ ಅವರ ಆದೇಶಗಳನ್ನು ಪಾಲಿಸುವುದಾಗಿ ತಿಳಿಸಿದರು.ಆದರೆ, ಫಾತಿಮಾ ಮಾತನಾಡುತ್ತಿದ್ದಂತೆಯೇ, ಮೆಕ್ಸಿಕೊದ ರಾಷ್ಟ್ರೀಯ ನಿರ್ದೇಶಕರನ್ನು ದೇಶದಿಂದ ಹೊರಹಾಕಲಾಗಿದೆ ಎಂದು ಹೇಳಿದ್ದಾರೆ.
ಇನ್ನು, ಕೆಲ ಕ್ಷಣಗಳ ನಂತರ ಮತ್ತೆ ನವಾತ್ ನಿಮ್ಮ ರಾಷ್ಟ್ರೀಯ ನಿರ್ದೇಶಕರ ಆದೇಶಗಳನ್ನು ನೀವು ಪಾಲಿಸಿದರೆ, ನೀವು ಮೂರ್ಖರಾಗುತ್ತೀರಿ ಎಂದು ಹೇಳಿದ್ದಾರೆ.
ಇದಕ್ಕೆ ಸ್ಪಷ್ಟನೆ ಕೇಳಲು ಫಾತಿಮಾ ಮುಂದಾದಾಗ ನವಾತ್ ನಾನು ಮೈಕ್ರೋಪೋನ್ ನಲ್ಲಿ ಮಾತನಾಡುತ್ತಿದ್ದೇನೆ, ಹಾಗೂ ನಾನು ಎಲ್ಲರೊಂದಿಗೆ ಮಾತನಾಡುತಿರುವಾಗ ನೀನು ಏಕೆ ಮಧ್ಯೆ ಎದ್ದು ನಿಲ್ಲುತ್ತಿದ್ದೀಯಾ ಎಂದು ಕೇಳಿದಾಗ ಆಕೆ ಏಕೆಂದರೆ ನನಗೂ ಧ್ವನಿ ಇದೆ ಎಂದಿದ್ದಾಳೆ.
