ಉದಯವಾಹಿನಿ, ಚಿನ್ಲೆ : ಅಮೆರಿಕದ ಉತ್ತರ ಅರಿಜೋನಾದ ನವಾಜೋ ನೇಷನ್‌ನಲ್ಲಿ ಸಣ್ಣ ವೈದ್ಯಕೀಯ ಸಾರಿಗೆ ವಿಮಾನವೊಂದು ಅಪಘಾತಕ್ಕೀಡಾಗಿ ನಾಲ್ವರು ಸಾವನ್ನಪ್ಪಿದ್ದಾರೆ.ಫೆಡರಲ್‌ ಏವಿಯೇಷನ್‌ ಅಡಿನಿಸ್ಟ್ರೇಷನ್‌ ಮತ್ತು ಸಿಎಸ್‌‍ಐ ಏವಿಯೇಷನ್‌ ಪ್ರಕಾರ, ಸಿಎಸ್‌‍ಐ ಏವಿಯೇಷನ್‌ ಕಂಪನಿಯ ಬೀಚ್‌ಕ್ರಾಫ್ಟ್‌‍ ಕಿಂಗ್‌ ಏರ್‌ -300 ಇಬ್ಬರು ಪೈಲಟ್‌ಗಳು ಮತ್ತು ಇಬ್ಬರು ಆರೋಗ್ಯ ರಕ್ಷಣಾ ಪೂರೈಕೆದಾರರೊಂದಿಗೆ ನ್ಯೂ ಮೆಕ್ಸಿಕೋದ ಅಲ್ಬುಕರ್ಕ್‌ನಿಂದ ಹೊರಟಿತು.
ಫೀನಿಕ್ಸ್ ನ ಈಶಾನ್ಯಕ್ಕೆ ಸುಮಾರು 300 ಮೈಲಿ ದೂರದಲ್ಲಿರುವ ಚಿನ್ಲೆಯಲ್ಲಿರುವ ವಿಮಾನ ನಿಲ್ದಾಣದ ಬಳಿ ಅಪಘಾತಕ್ಕೀಡಾಗಿದೆ.ನಿಲ್ದಾಣದಲ್ಲಿ ಇಳಿಯುವಾಗ ಏನೋ ತಪ್ಪಾಗಿದೆ ಎಂದು ಜಿಲ್ಲಾ ಪೊಲೀಸ್‌‍ ಕಮಾಂಡರ್‌ ಎಮೆಟ್‌ ಯಾಝಿ ಹೇಳಿದರು. ವಿಮಾನ ಅಪಘಾತವಾಗುತ್ತಿದ್ದಂತೆ ಬೆಂಕಿಗೆ ಆಹುತಿಯಾಗಿದೆ.

ಚಿನ್ಲೆಯಲ್ಲಿರುವ ಫೆಡರಲ್‌ ಇಂಡಿಯನ್‌ ಹೆಲ್ತ್‌ ಸರ್ವಿಸ್‌‍ ಆಸ್ಪತ್ರೆಯಿಂದ ಗಂಭೀರ ಆರೈಕೆಯ ಅಗತ್ಯವಿರುವ ರೋಗಿಯನ್ನು ಕರೆದೊಯ್ಯಲು ಸಿಬ್ಬಂದಿ ಯೋಜಿಸುತ್ತಿದ್ದರು ಎಂದು ನವಾಜೋ ತುರ್ತು ನಿರ್ವಹಣಾ ವಿಭಾಗದ ನಿರ್ದೇಶಕಿ ಶರೆನ್‌ ಸ್ಯಾಂಡೋವಲ್‌ ಹೇಳಿದರು.

ಅಲ್ಬುಕರ್ಕ್‌ಗೆ ಹಿಂತಿರುಗುವ ಯೋಜನೆ ಇತ್ತು ರೋಗಿಯ ಸ್ಥಳ ಮತ್ತು ಸ್ಥಿತಿ ತಿಳಿದುಬಂದಿಲ್ಲ. ವಿಮಾನ ನಿಲ್ದಾಣದಲ್ಲಿ ಕಪ್ಪು ಹೊಗೆಯ ಬಗ್ಗೆ ಬುಡಕಟ್ಟು ಅಧಿಕಾರಿಗಳಿಗೆ ವರದಿಗಳು ಮಾಡಿದಾಗ ಘಟನೆ ಗೊತ್ತರಾಗಿದೆ . ಅಪಘಾತದ ಕಾರಣ ತಿಳಿದುಬಂದಿಲ್ಲ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ ತನಿಖೆ ನಡೆಸುತ್ತಿದೆ. ವಿಮಾನಯಾನ ಅಧಿಕಾರಿಗಳು ಮೃತರ ಕುಟುಂಬಗಳು, ಸ್ನೇಹಿತರು ಮತ್ತು ಪ್ರೀತಿಪಾತ್ರರಿಗೆ ಸಂತಾಪ ಸೂಚಿಸಿದರು. ಅವರ ಹೆಸರುಗಳನ್ನು ಬಿಡುಗಡೆ ಮಾಡಲಾಗಿಲ್ಲ. ಚಿನ್ಲೆ ವಿಮಾನ ನಿಲ್ದಾಣವು ಬುಡಕಟ್ಟು ಜನಾಂಗದವರು ಹೊಂದಿರುವ ಮತ್ತು ನಿರ್ವಹಿಸುವ ಕೆಲವೇ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ, ಇದು ಅರಿಜೋನಾ, ನ್ಯೂ ಮೆಕ್ಸಿಕೊ ಮತ್ತು ಉತಾಹ್‌ವರೆಗೆ ವ್ಯಾಪಿಸಿರುವ ವಿಶಾಲವಾದ ಮೀಸಲು ಪ್ರದೇಶದಲ್ಲಿದೆ ಸ್ಥಳೀಯ ಅಮೆರಿಕನ್‌ ಬುಡಕಟ್ಟಿನ ಅತಿದೊಡ್ಡ ಭೂ ನೆಲೆಯಾಗಿದೆ.

Leave a Reply

Your email address will not be published. Required fields are marked *

error: Content is protected !!